ಕುಂದಾಪುರ: ಪಡುಕೋಣೆ ಶ್ರೀರಾಮ ದೇವಸ್ಥಾದಲ್ಲಿ 1.5 ಲಕ್ಷ ರೂ. ಬೆಳ್ಳಿ ಆಭರಣ ಕಳವು

ಜುಲೈ 13 ರ ಸೋಮವಾರ ತಡರಾತ್ರಿ ನಾಡ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿನ ಪಡುಕೋಣೆಯಲ್ಲಿರುವ ಶ್ರೀರಾಮ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು 1.5 ಲಕ್ಷ ರೂ.ಗಳ ಮೌಲ್ಯದ ಬೆಳ್ಳಿ ಔರೋಳೆ ಆಭರಣಗಳ ದೋಚಿ ಪರಾರಿಯಾಗಿದ್ದಾರೆ.
ಕುಂದಾಪುರ: ಪಡುಕೋಣೆ ಶ್ರೀರಾಮ ದೇವಸ್ಥಾದಲ್ಲಿ 1.5 ಲಕ್ಷ ರೂ. ಬೆಳ್ಳಿ ಆಭರಣ ಕಳವು

ಕುಂದಾಪುರ: ಜುಲೈ 13 ರ ಸೋಮವಾರ ತಡರಾತ್ರಿ ನಾಡ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿನ ಪಡುಕೋಣೆಯಲ್ಲಿರುವ ಶ್ರೀರಾಮ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು 1.5 ಲಕ್ಷ ರೂ.ಗಳ ಮೌಲ್ಯದ ಬೆಳ್ಳಿ ಐರೋಳೆ ಆಭರಣಗಳ ದೋಚಿ ಪರಾರಿಯಾಗಿದ್ದಾರೆ.

ಕಳ್ಳರು ದೇವಾಲಯದ ಮುಖ್ಯ ಬಾಗಿಲಿನ ಬೋಲ್ಟ್ ತೆರೆದು ಆವರಣದೊಳ ಪ್ರವೇಶಿಸಿದ್ದಾರೆ. ಅರ್ಚಕರು ಮಂಗಳವಾರ ಬೆಳಿಗ್ಗೆಬೆಳಗಿನ ಪೂಜೆಗೆಂದು ದೇವಾಲಯಕ್ಕೆ ಆಗಮಿಸಿದ ವೇಳೆ ಕಳ್ಳತನ ಬೆಳಕಿಗೆ ಬಂದಿದೆ. ದೇವಾಲಯದ ಬಾಗಿಲು ಒಡೆದಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 ಗಂಗೊಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಂದೂರು ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಸುರೇಶ್, ಮತ್ತು ಗಂಗೊಳ್ಳಿ ಸ್ಟೇಷನ್ ಹೌಸ್ ಆಫೀಸರ್ ಭೀಮಾಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇತ್ತೀಚೆಗೆ ಪೋಲೀಸರು ಸಭೆ ಸೇರಿದ್ದು , ದೇವಾಲಯಗಳ ಒಳಗೆ ಸಿಸಿಟಿವಿ ಕ್ಯಾಮೆರಾಗಳು ಮತ್ತು ಸೈರನ್‌ಗಳನ್ನು ಅಳವಡಿಸಲು ದೇವಾಲಯಗಳಿಗೆ ಸೂಚಿಸಿದ್ದರು.  ಮಳೆಗಾಲದಲ್ಲಿ ಕಳ್ಳತನದ ಸಾಧ್ಯತೆಗಳು ಹೆಚ್ಚಿರುವ ಕಾರಣ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಹ ಸಲಹೆ ನೀಡಲಾಗಿತ್ತು. ಆದರೆ ಕಳುವಾದ ದೇವಾಲಯದಲ್ಲಿ ಸಿಸಿಟಿವಿ ಕ್ಯಾಮೆರಾ,  ಸೈರನ್ ಇಲ್ಲ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com