ಬೀದರ್ ಸಾವು ಪ್ರಕರಣ: ವರದಿ ಕೇಳಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಸೋಂಕಿರ ಸಂಖ್ಯೆ ಸಾವಿರ ದಾಟಿ ರಾಜ್ಯದ 8ನೇ ಸ್ಥಾನದಲ್ಲಿದ್ದರೂ, ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ 53 ಮಂದಿ ರೋಗಿಗಳಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿ ದೇಶದ ಅಪಾಯಕಾರಿ ಜಿಲ್ಲೆಯ ಪಟ್ಟಿಯಲ್ಲಿ ಬೀದರ್ ಸೇರಿಕೊಂಡಿದ್ದು, ಈ ನಡುವಲ್ಲೇ ಸಾವು ಪ್ರಕರಣಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಜ್ಞರ ಸಮಿತಿಯಿಂದ ವರದಿ ಕೇಳಿದ್ದಾರೆ. 
ಯಡಿಯೂರಪ್ಪ
ಯಡಿಯೂರಪ್ಪ

ಬೀದರ್: ಸೋಂಕಿರ ಸಂಖ್ಯೆ ಸಾವಿರ ದಾಟಿ ರಾಜ್ಯದ 8ನೇ ಸ್ಥಾನದಲ್ಲಿದ್ದರೂ, ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ 53 ಮಂದಿ ರೋಗಿಗಳಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿ ದೇಶದ ಅಪಾಯಕಾರಿ ಜಿಲ್ಲೆಯ ಪಟ್ಟಿಯಲ್ಲಿ ಬೀದರ್ ಸೇರಿಕೊಂಡಿದ್ದು, ಈ ನಡುವಲ್ಲೇ ಸಾವು ಪ್ರಕರಣಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಜ್ಞರ ಸಮಿತಿಯಿಂದ ವರದಿ ಕೇಳಿದ್ದಾರೆ. 

ಜಿಲ್ಲೆಯಲ್ಲಿ ಕೋವಿಡ್-19 ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಕುರಿತು ತೆಗೆದುಕೊಂಡ ಕ್ರಮಗಳ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. 

ಜುಲೈ 13ರವರೆಗೂ 43,487 ಮಂದಿಯ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ 1,055 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಇನ್ನು 53 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಪಾಸಿಟಿವ್ ಬಂದಿರುವ 1,055 ಮಂದಿಯ ಪೈಕಿ 530 ಮಂದಿ ವಯಸ್ಸಾದ ವ್ಯಕ್ತಿಗಳಾಗಿದ್ದಾರೆ. ಇದೀಗ ಯುವ ಜನರೂ ಕೂಡ ಕೊರೋನಾ ಸಾವಿನ ಬಲೆಯಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಪರೀಕ್ಷೆಗೊಳಗಾಗಿರುವ 3,128 ಮಂದಿಯ ವೈದ್ಯಕೀಯ ವರದಿ ಬರುವುದು ಇನ್ನೂ ಬಾಕಿ ಉಳಿದಿದೆ. 

ಈ ಕುರಿತು ಉಪ ಆಯುಕ್ತ ರಾಮಚಂದ್ರನ್ ಅವರು ಮಾತನಾಡಿ, ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿದ್ದ ಜನರು ಹೆಚ್ಚು ಸಾವನ್ನಪ್ಪಿದ್ದಾರೆ. ಕೆಲವರು ವಯಸ್ಸಾದ ಕಾರಣಗಳಿಂದಲೂ ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ. 

ಹೈದರಾಬಾದ್ ಹಾಗೂ ಜಹೀರಾಬಾದ್ನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದ್ದು, ಈ ನಗರಗಳಿಗೆ ಬೀದರ್ ಹತ್ತಿರ ಇರುವುದರಿಂದಲೂ ಪ್ರಕರಣಗಳು ಹೆಚ್ಚಾಗಿರಬಹುದು. ಕೆಲ ಪ್ರಕರಣಗಳಲ್ಲಿ ಹೈದರಾಬಾದ್ ಹಾಗೂ ಇತರೆ ಪ್ರದೇಶಗಳಲ್ಲಿ ಕೊರೋನಾ ಲಕ್ಷಣಗಳಿಗೆ ಪ್ರಾಥಮಿಕ ಚಿಕಿತ್ಸೆ ಪಡೆದು ಬೀದರ್ ಬರುವ ಮಾರ್ಗದಲ್ಲಿ ಜನರು ಸಾವನ್ನಪ್ಪುತ್ತಿದ್ದಾರೆ. ಕ್ವಾರಂಟೈನ್ ನಿಯಮ ಉಲ್ಲಂಘನೆಯಾಗುತ್ತಿರುವುದೂ ಕೂಡ ಒಂದು ಕಾರಣವಾಗಿದೆ. ಶೀಘ್ರದಲ್ಲೇಯ ತಜ್ಞರ ಸಮಿತಿಯನ್ನು ಮುಖ್ಯಮಂತ್ರಿಗಳ ಬಳಿಗೆ ಕಳುಹಿಸಿ ವರದಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com