ಚಿಕಿತ್ಸೆಗಾಗಿ ಅಂಗಲಾಚಿದರೂ ಸ್ಪಂದಿಸದ ಅಧಿಕಾರಿಗಳು: ನೋವು ತೋಡಿಕೊಂಡ ತಾಯಿ-ಮಗಳ ವಿಡಿಯೋ ವೈರಲ್

ಕೊರೋನಾ ಸೋಂಕು ದೃಢಪಟ್ಟು 48 ಗಂಟೆಗಳಾಗಿದ್ದರೂ ತನಗೆ ಹಾಗೂ ತನ್ನ ತಾಯಿಗೆ ಚಿಕಿತ್ಸೆ ಪಡೆಯಲು ಬಿಬಿಎಂಪಿ ಅಧಿಕಾರಿಗಳಿಗೆ ಅಂಗಲಾಚಿತರೂ ಸ್ಪಂದಿಸಿಲ್ಲ ಎಂದು ಮಗಳು ಅಳುತ್ತಾ ನೋವು ತೋಡಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಸ್ ಆಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಸೋಂಕು ದೃಢಪಟ್ಟು 48 ಗಂಟೆಗಳಾಗಿದ್ದರೂ ತನಗೆ ಹಾಗೂ ತನ್ನ ತಾಯಿಗೆ ಚಿಕಿತ್ಸೆ ಪಡೆಯಲು ಬಿಬಿಎಂಪಿ ಅಧಿಕಾರಿಗಳಿಗೆ ಅಂಗಲಾಚಿತರೂ ಸ್ಪಂದಿಸಿಲ್ಲ ಎಂದು ಮಗಳು ಅಳುತ್ತಾ ನೋವು ತೋಡಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಸ್ ಆಗಿದೆ. 
    
ನಗರದ ಹೆಬ್ಬಾಳದಲ್ಲಿ ನೆಲೆಸಿರುವ ಯುವತಿ ವೀಣಾ ಕುಮಾರಿ (28), ಮನೆಯಲ್ಲಿ ನಾನು ಮತ್ತು ನಮ್ಮ ತಾಯಿ ಮಾತ್ರ ಇದ್ದೇವೆ. ಇಬ್ಬರಿಗೂ ಕೊರೋನಾ ಸೋಂಕು ದೃಢಪಟ್ಟಿದೆ. ಅವರಿಗೆ ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ತಾಯಿಗೆ ಇದೀಗ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಅವರ ಜೀವ ಉಳಿಸಿಕೊಡಿ, ಆಸ್ಪತ್ರೆಗೆ ಕರೆ ಮಾಡಿದರೆ, ಸ್ಪಂದಿಸುತ್ತಿಲ್ಲ. ಖಾಸಗಿ ಆಸ್ಪತ್ರೆಗೆ ಸೇರಿಸಲು ನಮ್ಮ ಬಳಿ ಹಣವಿಲ್ಲ ಎಂದು ಯುವತಿ ಗೋಳಾಡಿದ್ದಾಳೆ. 

ನಮ್ಮ ತಂದೆ ಮೃತಪಟ್ಟಿದ್ದು, ಚಿಕ್ಕಪ್ಪನ ಆಶ್ರಯಮದಲ್ಲಿ ಬದುಕುತ್ತಿದ್ದೆವು. ಅವರಿಗೆ ಜ್ವರ ಬಂದು 2 ವಾರಗಳ ಹಿಂದೆ ತೀರಿಕೊಂಡಿದ್ದಾರೆ. ಆಸ್ಪತ್ರೆಗೆ ಹೋಗಲು ಹಣವಿಲ್ಲ. ಬಿಪಿಎಲ್ ಕಾರ್ಡ್ ಇದ್ದರೂ ಯಾರೂ ನೆರವಿಗೆ ಬರುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾಳೆ. 

ಜಿಕೆವಿಕೆಯಲ್ಲಿನ ಆರೈಕೆ ಕೇಂದ್ರಕ್ಕೆ ಕಳುಹಿಸುವಂತೆ ಕೇಳಿಕೊಂಡರೆ ಪಾಲಿಕೆ ಸಿಬ್ಬಂದಿ, ಅಲ್ಲಿಯ ವೈದ್ಯರಮೊಬೈಲ್ ಸಂಖ್ಯೆ ಕೊಡಿ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳುತ್ತಿದ್ದಾರೆ. ವೈದ್ಯರ ಮೊಬೈಲ್ ಸಂಖ್ಯೆ ನಮ್ಮ ಬಳಿ ಇಲ್ಲ. ಇಷ್ಟೆಲ್ಲಾ ಕಷಅಟಪಡುವ ಬದಲು ರೈಲಿಗೆ ತಲೆಕೊಟ್ಟು ಜೀವ ಬಿಡುವುದೇ ಉತ್ತಮ ಎಂದು ತಾಯಿ ಹೇಳುತ್ತಿದ್ದಾರೆ. ಏನು ಮಾಡುವುದಕ್ಕೆ ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದೇವೆಂದು ವಿಡಿಯೋದಲ್ಲಿ ಯುವತಿ ಹೇಳಿಕೊಂಡಿದ್ದಾಳೆ. 

ಈ ವಿಡಿಯೋ ಕಳೆದ ರಾತ್ರಿ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಗಮನಿಸಿದ ಬಿಬಿಎಂಪಿ ಆಧಿಕಾರಿಗಳು ಕೂಡಲೇ ಆ್ಯಂಬುಲೆನ್ಸ್ ಕಳುಹಿಸಿದ್ದು, ಬಳಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ, ಈ ವೇಳೆ ಕೂಡ ಯಾವುದೇ ಆಸ್ಪತ್ರೆಯ ಸಿಬ್ಬಂದಿಯಾಗಲೀ, ವೈದ್ಯರಾಗಲೀ ಅವರಿಗೆ ಚಿಕಿತ್ಸೆ ನೀಡಿಲ್ಲ. 

ಮತ್ತೆ ಬಿಬಿಎಂಪಿ ಅಧಿರಿಗಳ ವಿರುದ್ದ ಟೀಕೆಗಳು ವ್ಯಕ್ತವಾಗುತ್ತಿದ್ದಂತೆಯೇ ಸೆಂಟ್ ಮಾರ್ತಾಸ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಗೆ ಒಳಪಡದ ಹೊರತು ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಆಸ್ಪತ್ರೆಯ ಖರ್ಚುವೆಚ್ಚಗಳನ್ನು ಭರಿಸಲು ಸಾಧ್ಯವಿಲ್ಲ. ಹೀಗಾಗಿ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ. ಆದರೆ, ಸೋಂಕಿತರಿಗೆ ಪ್ರಸ್ತುತ ಚಿಕಿತ್ಸೆ ಅಗತ್ಯವಿದೆ ಎಂದು ಯುವತಿ ಕುಟುಂಬದ ಸ್ನೇಹಿತ ಜ್ಞಾನೇಂದ್ರ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com