ಲಾಕ್‌ಡೌನ್ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಬಿಎಂಟಿಸಿ ಸಿಬ್ಬಂದಿಗೆ ದಿನಕ್ಕೆ 250 ರೂ. ವಿಶೇಷ ಭತ್ಯೆ ನೀಡಲು ಆದೇಶ

ಮಾರ್ಚ್ 26ರಿಂದ ಏಪ್ರಿಲ್ 20ರವರೆಗೆ ಲಾಕ್‌ಡೌನ್ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಬಿಎಂಟಿಸಿಯ ಕೊರೊನಾ ವಾರಿಯರ್ಸ್‌ಗಳಿಗೆ ಪ್ರತಿ ದಿನಕ್ಕೆ ತಲಾ 250 ರೂ.ವಿಶೇಷ ಭತ್ಯೆ ನೀಡಲು ಹಣ ಬಿಡುಗಡೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಾರ್ಚ್ 26ರಿಂದ ಏಪ್ರಿಲ್ 20ರವರೆಗೆ ಲಾಕ್‌ಡೌನ್ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಬಿಎಂಟಿಸಿಯ ಕೊರೊನಾ ವಾರಿಯರ್ಸ್‌ಗಳಿಗೆ ಪ್ರತಿ ದಿನಕ್ಕೆ ತಲಾ 250 ರೂ.ವಿಶೇಷ ಭತ್ಯೆ ನೀಡಲು ಹಣ ಬಿಡುಗಡೆ ಮಾಡಲಾಗಿದೆ.

ಜನತೆಗೆ ತುರ್ತು ಸೇವಾ ಸೌಲಭ್ಯವನ್ನು ಒದಗಿಸಲು ರಾಜ್ಯ ಸರ್ಕಾರ ಆರೋಗ್ಯ ಇಲಾಖೆಯ ನಿರ್ದೇಶನದನ್ವಯ ಪೊಲೀಸ್, ಆರೋಗ್ಯ ಇಲಾಖೆ, ಸಫಾಯಿ ಕಾರ್ಮಿಕರು ಮತ್ತು ಆಶಾ ಕಾರ್ಯಕರ್ತೆಯರಿಗೆ ಬಿಎಂಟಿಸಿ ಸಾರಿಗೆ ಸೌಲಭ್ಯವನ್ನು ಒದಗಿಸಿದ್ದು, ಈ ಕಠಿಣ ಅವಧಿಯಲ್ಲಿ ತಮ್ಮ ಜೀವದ ಹಂಗನ್ನು ತೊರೆದು 3397 ಸಿಬ್ಬಂದಿ ಸ್ವಯಂ ಪ್ರೇರಿತ ಕರ್ತವ್ಯ ನಿರ್ವಹಿಸಿದ್ದಾರೆ. 

ಇವರ ಕರ್ತವ್ಯ ನಿಷ್ಠೆಯನ್ನು ಪ್ರಶಂಸಿಸಿ ಇವರ ಶ್ಲಾಘನೀಯ ಸೇವೆಗಾಗಿ ಪ್ರತಿ ನೌಕರರಿಗೆ ಒಂದು ದಿನಕ್ಕೆ 250 ರೂ.ಯಂತೆ ವಿಶೇಷ ಭತ್ಯೆಯನ್ನು ನೀಡಿ ಪ್ರೋತ್ಸಾಹಿಸಲು ಜೂನ್ 22ರಂದು ನಡೆದ ನಿಗಮದ ನಿರ್ದೇಶಕರ ಸಭೆಗೆ ಸಲ್ಲಿಸಲಾಗಿದ್ದ ಪ್ರಸ್ತಾವನೆಯನ್ನು ಮಂಡಳಿ ಅನುಮೋದನೆ ನೀಡಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com