ವಿಧಾನಸೌಧ
ವಿಧಾನಸೌಧ

ಶಕ್ತಿ ಕೇಂದ್ರದಲ್ಲಿ ಮತ್ತಿಬ್ಬರಿಗೆ ಕೊರೋನಾ ಸೋಂಕು: ಪಶುಸಂಗೋಪನೆ, ಕನ್ನಡ ಸಂಸ್ಕೃತಿ ಇಲಾಖೆ ಕಚೇರಿ ಸೀಲ್ ಡೌನ್

ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ ಮತ್ತು ವಿಕಾಸೌಧದಲ್ಲಿಯೂ ಕೊರೋನಾ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುತ್ತಿದ್ದು,ಇದೀಗ ಮತ್ತಿಬ್ಬರಿಗೂ ವಿಕಾಸಸೌಧದಲ್ಲಿ ಕಾರ್ಯನಿರ್ವ ಹಿಸುವ ಇಬ್ಬರಿಗೆ ಸಿಬ್ಬಂದಿಗೆ ಸೋಂಕು ಪತ್ತೆಯಾಗಿದೆ.

ಬೆಂಗಳೂರು: ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ ಮತ್ತು ವಿಕಾಸೌಧದಲ್ಲಿಯೂ ಕೊರೋನಾ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುತ್ತಿದ್ದು,ಇದೀಗ ಮತ್ತಿಬ್ಬರಿಗೂ ವಿಕಾಸಸೌಧದಲ್ಲಿ ಕಾರ್ಯನಿರ್ವ ಹಿಸುವ ಇಬ್ಬರಿಗೆ ಸಿಬ್ಬಂದಿಗೆ ಸೋಂಕು ಪತ್ತೆಯಾಗಿದೆ.

ವಿಕಾಸಸೌಧದಲ್ಲಿನ ಪಶು ಸಂಗೋಪನಾ ಇಲಾಖೆಯ ಮಹಿಳಾ ಉದ್ಯೋಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉದ್ಯೋಗಿಯೊಬ್ಬರಿಗೆ ಕೊರೋನಾ ದೃಢಪಟ್ಟಿದೆ.ಹೀಗಾಗಿ ವಿಕಾಸಸೌಧದಲ್ಲಿನ ನಾಲ್ಕನೇ ಮಹಡಿ ಯಲ್ಲಿರುವ ಎರಡೂ ಕಚೇರಿಗಳನ್ನು ಸೀಲ್‌ಡೌನ್ ಮಾಡಲಾಗಿದೆ.ಅಲ್ಲದೇ, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ನಡುವೆ,ಲಾಕ್‌ಡೌನ್ ವೇಳೆಯಲ್ಲಿ ಸರ್ಕಾರವೇ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿಲ್ಲ.ಸಚಿವಾಲಯ ದ ಸಿಬ್ಬಂದಿಯಲ್ಲಿ ೫೦ ವರ್ಷಕ್ಕಿಂತ ಮೇಲ್ಪಟ್ಟವರು ಇದ್ದಾರೆ ಮತ್ತು ಹಲವು ರೀತಿಯ ಕಾಯಿಲೆಗಳಿಂದ ಬಳಲು ತ್ತಿರುವ ರೋಗಿಗಳು ಇದ್ದಾರೆ.ಅವರನ್ನೆಲ್ಲಾ ಕೆಲಸಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.ಅವರನ್ನು ಸರಿ ಯಾಗಿ ವಿಂಗಡನೆ ಮಾಡದೆ ತಾರತಮ್ಯ ಮಾಡಲಾಗುತ್ತಿದೆ.ತಾರತಮ್ಯ ಮುಂದುವರೆದರೆ ಸಿಬ್ಬಂದಿ ಸಾಮೂಹಿಕ ರಜೆ ಹಾಕಿ ಮನೆಯಲ್ಲಿರಬೇಕಾಗುತ್ತದೆ ಅಥವಾ ಸಾಮೂಹಿಕ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಸಚಿವಾ ಲಯ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com