ಕೋವಿಡ್ ಭಯ: 58 ಖಾಸಗಿ ಆಸ್ಪತ್ರೆಗಳು ಸ್ಥಗಿತ, ಶೇ.50 ಅರೆವೈದ್ಯಕೀಯ, ಶೇ.30 ವೈದ್ಯ ಸಿಬ್ಬಂದಿ ರಾಜೀನಾಮೆ!

ಕೋವಿಡ್ -19 ನಗರರದಲ್ಲಿ ವ್ಯಾಪಕವಾದ ನಂತರ ಬೆಂಗಳೂರಿನಲ್ಲಿ 58 ಸಣ್ಣ ಪ್ರಮಾಣದ ಖಾಸಗಿ ಆಸ್ಪತ್ರೆಗಳು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಮುಚ್ಚಲ್ಪಟ್ಟವು ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಸಂಘದ (ಫಾನಾ) ಸದಸ್ಯರು ಬಹಿರಂಗಪಡಿಸಿದ್ದಾರೆ. ಸಾಂಕ್ರಾಮಿಕ ರೋಗ -ಪ್ರಚೋದಿತ ಆರ್ಥಿಕ ಬಿಕ್ಕಟ್ಟಿನಿಂದಾಗಿ ಏಕ ವೈದ್ಯ ಆಸ್ಪತ್ರೆಗಳು ಮುಚ್ಚಲ್ಪಟ್ಟವು. ಖಾಸಗಿ ಆಸ್ಪ

Published: 16th July 2020 08:25 AM  |   Last Updated: 16th July 2020 08:25 AM   |  A+A-


Posted By : Raghavendra Adiga
Source : The New Indian Express

ಬೆಂಗಳೂರು: ಕೋವಿಡ್ -19 ನಗರರದಲ್ಲಿ ವ್ಯಾಪಕವಾದ ನಂತರ ಬೆಂಗಳೂರಿನಲ್ಲಿ 58 ಸಣ್ಣ ಪ್ರಮಾಣದ ಖಾಸಗಿ ಆಸ್ಪತ್ರೆಗಳು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಮುಚ್ಚಲ್ಪಟ್ಟವು ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಸಂಘದ (ಫಾನಾ) ಸದಸ್ಯರು ಬಹಿರಂಗಪಡಿಸಿದ್ದಾರೆ. ಸಾಂಕ್ರಾಮಿಕ ರೋಗ -ಪ್ರಚೋದಿತ ಆರ್ಥಿಕ ಬಿಕ್ಕಟ್ಟಿನಿಂದಾಗಿ ಏಕ ವೈದ್ಯ ಆಸ್ಪತ್ರೆಗಳು ಮುಚ್ಚಲ್ಪಟ್ಟವು. ಖಾಸಗಿ ಆಸ್ಪತ್ರೆಗಳು ಸರ್ಕಾರ ನಿರ್ದಿಷ್ಟಪಡಿಸಿದ 19 ನಿಯಮಗಳನ್ನು  ಪಾಲಿಸಬೇಕು ಮತ್ತು ಅವೆಲ್ಲವನ್ನೂ ಪಾಲಿಸುವುದು ಕಷ್ಟ. ಮಾನದಂಡಗಳ ಸಂಖ್ಯೆಯನ್ನು ಕಡಿಮೆ ಮಾಡುವಂತೆ ನಾವು ಸರ್ಕಾರವನ್ನು ಕೋರಿದ್ದೇವೆ, ಎಂದು . ಫಾನಾ ಅಧ್ಯಕ್ಷ ಡಾ. ಆರ್ ರವೀಂದ್ರ ಹೇಳಿದ್ದಾರೆ.

ಕೋವಿಡ್ ಸಂಕಷ್ಟದ ಈ ಕಾಲಘಟ್ಟದಲ್ಲಿ ಸುಮಾರು 50% ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ, ಮತ್ತು 30% ವೈದ್ಯರು ತಮ್ಮ ಉದ್ಯೋಗವನ್ನು ತೊರೆದಿದ್ದಾರೆ. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಹೆಚ್ಚಿನ ಅಪಾಯವಿದೆ ಎಂಬ ಆತಂಕವಿದೆ. "ದೊಡ್ಡ ಮತ್ತು ಸಣ್ಣ ಖಾಸಗಿ ಆಸ್ಪತ್ರೆಗಳಿಗೆ ಮಾನವ ಸಂಪನ್ಮೂಲವು ಒಂದು ದೊಡ್ಡ ಸಮಸ್ಯೆಯಾಗಿದೆ. ನಾವು ಅಗತ್ಯವಿರುವ ಸಿಬ್ಬಂದಿಗಳನ್ನು ಹೊಂದಿದ್ದರೆ ಮಾತ್ರವೇ ಕಾರ್ಯನಿರ್ವಹಿಸುವುದು ಸಾಧ್ಯ.  ಆದರೆ ವೈದ್ಯರು ಕೆಲಸ ಮಾಡಲು ಸಿದ್ಧರಿಲ್ಲ, ಆದರೂ ನಾವು ಅವರಿಗೆ ವಿಮೆ ಮತ್ತು ಪ್ರೋತ್ಸಾಹಕಗಳನ್ನು ನೀಡುತ್ತೇವೆ. ಸಂಬಳವನ್ನು ದ್ವಿಗುಣಗೊಳಿಸುವ ಪ್ರಸ್ತಾಪಕ್ಕೂ ಅವರು ಸಮ್ಮತಿಸುತ್ತಿಲ್ಲ. ನಮಗೆ ಮಾನವಶಕ್ತಿಯನ್ನು ಒದಗಿಸುವಂತೆ ನಾವು ಸರ್ಕಾರವನ್ನು ಕೇಳಿದ್ದೇವೆ, ಮತ್ತು ಅವರು ನಮಗೆ ಸ್ನಾತಕೋತ್ತರ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಬಹುದು, ”ಎಂದು ಫಾನಾದ ಅಧ್ಯಕ್ಷರಾಗಿ ಚುನಾಯಿತರಾದ ಡಾ.ಪ್ರಸನ್ನ ಎಚ್‌ಎಂ ಹೇಳಿದರು.

ಇದೀಗ, 50-100 ಹಾಸಿಗೆ ಸೌಲಭ್ಯ ಹೊಂದಿರುವ 384 ಫಾನಾ ಸದಸ್ಯತ್ವದಡಿಯಲ್ಲಿನ ಆಸ್ಪತ್ರೆಗಳು  ಕೋವಿಡ್ ರೋಗಿಗಳಿಗೆ ಶೇಕಡಾ 50 ಹಾಸಿಗೆಗಳನ್ನು ಕಾಯ್ದಿರಿಸುವ ಆದೇಶದಿಂದ ದೊಡ್ಡ ಸವಾಲಿಗೆ ಸಿಕ್ಕಿವೆ. . "ನಾವು ಇದನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ" ಎಂದು ಡಾ.ಪ್ರಸನ್ನ ಹೇಳಿದರು. ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಲಾಗುತ್ತಿದೆ ಎಂಬ ಪ್ರಶ್ನೆಗೆ "ಆರಂಭದಲ್ಲಿ, ನಾವು ಕೋವಿಡ್ ರೋಗಿಗಳನ್ನು ತೆಗೆದುಕೊಳ್ಳಲು ಸಜ್ಜಾಗಿರಲಿಲ್ಲ, ಆದರೆ ಈಗ ನಾವು. ನಮ್ಮ ಆಸ್ಪತ್ರೆಗಳಲ್ಲಿ ಶಂಕಿತ ರೋಗಿಗಳ ಆರೈಕೆ ಮಾಡುತ್ತೇವೆ.  " ಡಾ ರವೀಂದ್ರ ಹೇಳಿದರು

ಖಾಸಗಿ ಆಸ್ಪತ್ರೆಗಳಲ್ಲಿ 15,500 ಹಾಸಿಗೆಗಳಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿಕೊಂಡರೆ, ಅವರ ಬಳಿ ಕೇವಲ 10,500 ಹಾಸಿಗೆಗಳಿವೆ ಎಂದು ಫಾನಾ ಹೇಳಿದೆ. ಕೆಲವು ಆಸ್ಪತ್ರೆಗಳು ನೇತ್ರವಿಜ್ಞಾನ, ಮೂತ್ರಪಿಂಡ ಆರೈಕೆ ಮತ್ತು ಕ್ಯಾನ್ಸರ್ ಕೇಂದ್ರಗಳಾಗಿವೆ. ಅಂತಹಾ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಪ್ರವೇಶ ಸಾಧ್ಯವಿಲ್ಲ. ಹಾಗಾಗಿ ಇದೀಗ, ಕೇವಲ 8,500 ಹಾಸಿಗೆಗಳನ್ನು ಮಾತ್ರ ಪರಿಗಣಿಸಬಹುದು.  “ಸರ್ಕಾರವು ಖಾಸಗಿ ಆಸ್ಪತ್ರೆಗಳಿಗೆ ಉತ್ತಮ ಪ್ರೈಸ್ ಸ್ಲಾಬ್ ಗಳನ್ನು ನೀಡಿದೆ. ಮುಂಬೈನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಶೇ. 80ಹಾಸಿಗೆಗಳನ್ನು ಮೀಸಲಿರಿಸುವಂತೆ ಅಲ್ಲಿನ ಸರ್ಕಾರ ಹೇಳೀದೆ, ಆದರೆ ನಾವು ಕೇವಲ 50% ಹಾಸಿಗೆಗಳನ್ನು ಮಾತ್ರ ಕೇಳುತ್ತಿದ್ದೇವೆ" ಸಚಿವ ಡಾ. ಸುಧಾಕರ್ ಹೇಳಿದ್ದಾರೆ. 
 

Stay up to date on all the latest ರಾಜ್ಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp