ಪಿಯುಸಿ ಫಲಿತಾಂಶ: ದಾವಣಗೆರೆ ಸಿದ್ದಗಂಗಾ ಕಾಲೇಜಿನ ವಿ. ನಾಗಸಾಯಿ ಪ್ರಥಮ ಸ್ಥಾನ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ದಾವಣಗೆರೆ ಸಿದ್ದಗಂಗಾ ಕಾಲೇಜಿನ ವಿಜ್ಞಾನ ವಿಭಾಗದ ವಿ ನಾಗಸಾಯನ ಪ್ರಥಮ ಸ್ಥಾನ ಪಡೆದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದಾವಣಗೆರೆ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ದಾವಣಗೆರೆ ಸಿದ್ದಗಂಗಾ ಕಾಲೇಜಿನ ವಿಜ್ಞಾನ ವಿಭಾಗದ ವಿ ನಾಗಸಾಯನ ಪ್ರಥಮ ಸ್ಥಾನ ಪಡೆದಿದ್ದಾರೆ.

ನಾಗ ಸಾಯಿ  ಕನ್ನಡದಲ್ಲಿ 96, ಇಂಗ್ಲಿಷ್‌ನಲ್ಲಿ 94, ಭೌತಶಾಸ್ತ್ರದಲ್ಲಿ 99, ರಸಾಯನಶಾಸ್ತ್ರದಲ್ಲಿ 99, ಗಣಿತ ಮತ್ತು ಜೀವಶಾಸ್ತ್ರದಲ್ಲಿ ತಲಾ 100 ಅಂಕಗಳನ್ನು ಗಳಿಸಿದ್ದು ಇದರೊಂದಿಗೆ ಒಟ್ಟು ಶೇಕಡಾ 98 ರಷ್ಟು ಗಳಿಸಿ ಪ್ರಥಮ ಸ್ಥಾನದಲ್ಲಿದ್ದಾರೆ.

746 ವಿದ್ಯಾರ್ಥಿಗಳಲ್ಲಿ  ಭೌತಶಾಸ್ತ್ರದಲ್ಲಿ-2 ರಸಾಯನಶಾಸ್ತ್ರದಲ್ಲಿ-4, ಗಣಿತಶಾಸ್ತ್ರದಲ್ಲಿ 81 ಜೀವಶಾಸ್ತ್ರದಲ್ಲಿ 7 ಹಾಗೂ ಕಂಪ್ಯೂಟರ್ ಸೈನ್ಸ್ ನಲ್ಲಿ 9 ವಿದ್ಯಾರ್ಥಿಗಳು ಪೂರ್ಣ ಅಂಕ ಪಡೆದಿದ್ದಾರೆ.

ಪಿಸಿಎಂಬಿ ಯಲ್ಲಿ ಉದಯ್ ಎಚ್ ಧುಮ್ಮಿನಾಳ್ ಪ್ರತಿ ಸಬ್ಜೆಕ್ಟ್ ನಲ್ಲೂ ತಲಾ 100 ಅಂಕ ಗಳಿಸಿದ್ದಾರೆ. 33 ವಿದ್ಯಾರ್ಥಿಗಳು ಶೇ.95 ರಷ್ಟು ಅಂಕ ಪಡೆದಿದ್ದು, 165 ವಿದ್ಯಾರ್ಥಿಗಳು ಶೇ,90 ರಷ್ಟು ಮತ್ತು 33 ಮಂದಿ ಶೇ.95 ರಷ್ಟು ಅಂಕ ಪಡೆದಿದ್ದಾರೆ ಎಂದು ಪ್ರಾಂಶುಪಾಲೆ ಗಾಯತ್ರಿ  ಚಿಮ್ಮದ್ ಹೇಳಿದ್ದಾರೆ.

ಮಂಗಳವಾರ ಘೋಷಿಸಿದ ಪಿಯು ಪರೀಕ್ಷಾ ಫಲಿತಾಂಶದಲ್ಲಿ ವಿಶ್ವಚೆಥನ ವಿದ್ಯಾನಿಕೇತನ ರೆಸಿಡೆನ್ಶಿಯಲ್ ಪಿಯು ಕಾಲೇಜಿನ 111 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಅಂಕಳನ್ನು ಪಡೆದುಕೊಂಡಿದ್ದಾರೆ. ಭೂಮಿಕಾ ಆಚಾರ್ 600 ಅಂಕಗಳಿಗೆ 588 ಗಳಿಸಿದ್ದಾರೆ, ಪೂಜಾ 586 ನಯನಾ 583 ಅಂಕಗಳನ್ನು ಪಡೆದಿದ್ದಾರೆ.

ಸೈನ್ಸ್ ಅಕಾಡೆಮಿ ಪಿಯು ಕಾಲೇಜಿನ ನೇಹಾ ಮಂಜುನಾಥ್ ರಾಯ್ಕರ್ 96.33% ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ನೇಹಾ 600 ಅಂಕಕ್ಕೆ 578 ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com