ರಾಜಕಾಲುವೆಗೆ ಬಿದ್ದ ಬಾಲಕಿ ಸುಳಿವಿಲ್ಲ: ಕಾರ್ಯಾಚರಣೆ ಸ್ಥಗಿತ

6 ದಿನಗಳ ಹಿಂದೆ ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದ ಮಂತ್ರಿ ಎಸ್ಪಾನ್ ಅಪಾರ್ಟ್'ಮೆಂಟ್ ಹಿಂಭಾಗದ ರಾಜಕಾಲವೆಗೆ ಬಿದ್ದು ಕೊಚ್ಚಿ ಹೋಗಿದ್ದ 6 ವರ್ಷದ ಬಾಲಕಿ ಪತ್ತೆಗಾಗಿ ಕೈಗೊಂಡಿದ್ದ ಕಾರ್ಯಾಚರಣೆಯನ್ನು ಮಂಗಳವಾರ ಸ್ಥಗಿತಗೊಳಿಸಲಾಗಿದೆ. 
ರಾಜಕಾಲುವೆಗೆ ಬಿದ್ದಿದ್ದ ಬಾಲಕಿ
ರಾಜಕಾಲುವೆಗೆ ಬಿದ್ದಿದ್ದ ಬಾಲಕಿ

ಬೆಂಗಳೂರು: 6 ದಿನಗಳ ಹಿಂದೆ ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದ ಮಂತ್ರಿ ಎಸ್ಪಾನ್ ಅಪಾರ್ಟ್'ಮೆಂಟ್ ಹಿಂಭಾಗದ ರಾಜಕಾಲವೆಗೆ ಬಿದ್ದು ಕೊಚ್ಚಿ ಹೋಗಿದ್ದ 6 ವರ್ಷದ ಬಾಲಕಿ ಪತ್ತೆಗಾಗಿ ಕೈಗೊಂಡಿದ್ದ ಕಾರ್ಯಾಚರಣೆಯನ್ನು ಮಂಗಳವಾರ ಸ್ಥಗಿತಗೊಳಿಸಲಾಗಿದೆ.
 
ಶುಕ್ರವಾರ (ಜು.10) ಬೆಳಿಗ್ಗೆ 11.30ರ ಸುಮಾರಿಗೆ ಆಟವಾಡುವಾಗ ಆಯತಪ್ಪಿ ರಾಜಕಾಲುವೆಗೆ ಬಿದ್ದಿದ್ದ ಬಾಲಕಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿತ್ತು. ರಾಜಕಾಲುವೆಯಲ್ಲಿ ಕಳೆದ ಮೂರು ದಿನಗಳಿಗಿಂತಲೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದರೂ ಬಾಲಕಿ ಮೃತದೇಹ ಕುರಿತ ಸಣ್ಣ ಸುಳಿವೂ ಸಿಗದ ಹಿನ್ನೆಲೆಯಲ್ಲಿ ಮಂಗಳವಾರ ಪತ್ತೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. 

ಬಾಲಕಿ ಬಿದ್ದ ಜಾಗದಿಂದ ಸುಮಾರು 8 ಕಿಮೀ ವರೆಗೂ ಶೋಧಿಸಿದರೂ ಬಾಲಕಿ ಪತ್ತೆಯಾಗಿಲ್ಲ. ಬಾಲಕಿ ದೇಹ ನೀರಿನಲ್ಲಿ ಮುಳಿಗಿದ್ದರೂ ಮೂರು ದಿನದ ಬಳಿಕ ತೇಲುವ ನಿರೀಕ್ಷೆ ಹುಸಿಯಾಯಿತು. ಆದರೂ ರಾಜಕಾಲುವೆಯಲ್ಲಿ ಬಾಲಕಿ ಮೃತದೇಹ ಪತ್ತೆಗೆ ಪ್ರಯತ್ನ ನಡೆಸಿ, ಇದೀಗ ಶೋಧ ಕಾರ್ಯ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com