ಹೆಚ್ಚಿದ ಕೊರೋನಾ ಸೋಂಕು: ಅಧಿಕಾರಿಗಳ ನಿದ್ದೆಗೆಡಿಸುತ್ತಿದೆ ತಡವಾಗುತ್ತಿರುವ ವೈದ್ಯಕೀಯ ವರದಿ!

ಮಹಾಮಾರಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈ ನಡುವಲ್ಲೇ ಸೋಂಕಿತರ ವೈದ್ಯಕೀಯ ವರದಿ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಚಿಂತೆಗೀಡಾಗುತ್ತಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹಾಸನ: ಮಹಾಮಾರಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈ ನಡುವಲ್ಲೇ ಸೋಂಕಿತರ ವೈದ್ಯಕೀಯ ವರದಿ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಚಿಂತೆಗೀಡಾಗುತ್ತಿದ್ದಾರೆ. 

ಕೋವಿಡ್ ಪ್ರಯೋಗಾಲಯಗಳಲ್ಲಿ ಒಟ್ಟಾರೆ 25 ಮಂದಿ ಲ್ಯಾಬ್ ಟೆಕ್ನಿಷಿಯನ್ಸ್ ಗಳಿದ್ದು,  24*7 ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ವೈದ್ಯಕೀಯ ವರದಿ ತಡವಾಗುತ್ತಿರುವುದು ಕೋವಿಡ್ ನಿಯೋಜಿತ ಆಸ್ಪತ್ರೆಗಳಲ್ಲಿರುವ ಅಪಾಯ ನಿರ್ವಹಣಾ ಸಮಿತಿಯ ಸದಸ್ಯರು ಚಿಂತೆಗೀಡಾಗುವಂತೆ ಮಾಡಿದೆ. 

ನೆರೆಹೊರೆಯ ಜಿಲ್ಲಾಸ್ಪತ್ರೆಗಳು ಸ್ವ್ಯಾಬ್ ಮಾದರಿಗಳನ್ನು ಪರೀಕ್ಷೆಗೆ ಹಾಸನ ಆಸ್ಪತ್ರೆಗೆ ಕಳುಹಿಸುತ್ತಿರುವುದರಿಂದ ಸಮಯಕ್ಕೆ ಸರಿಯಾಗಿ ವರದಿಗಳನ್ನು ನೀಡಲು ತಂತ್ರಜ್ಞರಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಪ್ರತೀನಿತ್ಯ 1,000 ಮಂದಿ ಪರೀಕ್ಷೆಗೆ ಬರುತ್ತಿದ್ದಾರೆ. ಹೀಗಾಗಿ ತಂತ್ರಜ್ಞರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೈದ್ಯಕೀಯ ವರದಿ ತಡವಾಗುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಬೆಳವಣಿಗೆಗಳು ತಂತ್ರಜ್ಞರು ಕುಗ್ಗುವಂತೆ ಮಾಡುತ್ತಿದೆ. ಜನರು ಸ್ವ್ಯಾಬ್ ಪರೀಕ್ಷೆ ನಡೆಸಿದ ಬಳಿಕ ಆಯಾ ಜಿಲ್ಲೆಗಳ ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಚಿಂತೆಗೀಡಾಗುತ್ತಾರೆ. 

ಕೋವಿಡ್-19 ನಿಯೋಜಿತ ಆಸ್ಪತ್ರೆಯ ಅಧೀಕ್ಷಕರು ಡಾ.ಕೃಷ್ಣಮೂರ್ತಿ ಮಾತನಾಡಿ, ವಿವಿಧ ಪಾಳಿಗಳಲ್ಲಿ 25 ಪ್ರಯೋಗಾಲಯದ ತಂತ್ರಜ್ಞರು 24*7 ರಂತೆ ಕೆಲಸ ಮಾಡುತ್ತಿದ್ದಾರೆ. ಹೆಚ್ಚೆಚ್ಚು ಜನರು ಪರೀಕ್ಷೆಗೊಳಪಡುತ್ತಿರುವುದರಿಂದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com