ಅಮಾನವೀಯ ನಡೆ: ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದ ಖಾಸಗಿ ಆಸ್ಪತ್ರೆಗಳು!

ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಲು 27 ವರ್ಷದ ತುಂಬು ಗರ್ಭಿಣಿ ಹಾಗೂ ಆಕೆಯ ಕುಟುಂಬ ಬುಧವಾರ ರಾತ್ರಿ ಅಗ್ನಿ ಪರೀಕ್ಷೆ ಎದುರಿಸುವಂತಾಯಿತು.ಕೊನೆಗೆ ಕೌಸರ್ ಬಾನು ಎಂಬ ಮಹಿಳೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ದಾಖಲಾಗುವ ಮೂಲಕ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಬಾನು ಜನ್ಮ ನೀಡಿರುವ ಗಂಡು ಮಗುವಿನ ಚಿತ್ರ
ಬಾನು ಜನ್ಮ ನೀಡಿರುವ ಗಂಡು ಮಗುವಿನ ಚಿತ್ರ

ಬೆಂಗಳೂರು: ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಲು 27 ವರ್ಷದ ತುಂಬು ಗರ್ಭಿಣಿ ಹಾಗೂ ಆಕೆಯ ಕುಟುಂಬ ಬುಧವಾರ ರಾತ್ರಿ ಅಗ್ನಿ ಪರೀಕ್ಷೆ ಎದುರಿಸುವಂತಾಯಿತು.ಕೊನೆಗೆ ಕೌಸರ್ ಬಾನು ಎಂಬ ಮಹಿಳೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ದಾಖಲಾಗುವ ಮೂಲಕ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಮರ್ಸಿ ಮಿಷನ್ ಎನ್ ಜಿಒದ ಸ್ವಯಂ ಸೇವಕರು ರಾತ್ರಿಯಿಡೀ ಪ್ರಯತ್ನಿಸಿದ್ದರೂ ಆಸ್ಪತ್ರೆಗೆ ದಾಖಲು ಮಾಡಲು ಆಗಿರಲಿಲ್ಲ.

ಚಂದ್ರ ಲೇಔಟ್ ನಲ್ಲಿ ವಾಸಿಸುತ್ತಿರುವ ಕೌಸರ್ ಬಾನು ಕುಟುಂಬ ಸ್ಥಿತಿವಂತರಲ್ಲ, ಆಕೆಯ ಪತಿ, ತಾಯಿ ಮತ್ತು ಸಹೋದರ ಆಟೋ,
ದ್ವಿಚಕ್ರ ವಾಹನದಲ್ಲಿ ಓಡಾಡಿ ಅನೇಕ ಆಸ್ಪತ್ರೆಗಳ ಬಾಗಿಲು ಬಡಿದಿದ್ದಾರೆ.ಗುರುವಾರ ಬೆಳಗ್ಗೆ 1 ಗಂಟೆ ಸಮಯದಲ್ಲಿ ಕೌಸರ್ ಬಾನು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರೂ ಕ್ವೀನ್ಸ್ ರಸ್ತೆಯ ಖಾಸಗಿ ಆಸ್ಪತ್ರೆ ದಾಖಲಿಸಿಕೊಳ್ಳಲಿಲ್ಲ.ಅದು ಈಗ ಕೋವಿಡ್ ಕೇರ್ ಸೆಂಟರ್ ಆಗಿದೆ. ಆದ್ದರಿಂದ ಎನ್ ಜಿ ಒ ನೆರವಿನಿಂದ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಲು ಪ್ರಯತ್ನಿಸಿದರು.ಅಲ್ಲಿ ಹಾಸಿಗೆ ಇದ್ದರೂ ಹೆರಿಗೆಗೆ ಅಗತ್ಯವಿರುವ ಐಸಿಯು ಇಲ್ಲ ಅಂತಾ ಹೇಳಿದರು ಎಂದು ಎಂಜಿನಿಯರ್ ಆಗಿರುವ ಸ್ವಯಂಸೇವಕ ಫಥಾಹೀನ್ ಮಿಸ್ಬಾರಾತ್ರಿಯ ಅನುಭವವನ್ನು ಹಂಚಿಕೊಂಡರು.

ನಂತರ ಸಿಬಿಡಿ ಮೂಲಕ ಖಾಸಗಿ ಆಸ್ಪತ್ರೆಯೊಂದಕ್ಕೆ ಸಂಪರ್ಕಿಸಿದಾಗ ಕೋವಿಡ್-19 ಶಂಕಿತ ರೀತಿಯಲ್ಲಿ ಆಸ್ಪತ್ರೆಗೆ ದಾಖಲಾಗಲು 85 ಸಾವಿರ ರೂ. ಕೇಳಿದರು.ಅಯುಷ್ಮಾನ್ ಭಾರತ್ ಕಾರ್ಡ್ ಪ್ರಯೋಜನ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಕೋರಮಂಗಲದಲ್ಲಿನ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕುಟುಂಬ ತೆರಳಿದರೆ,ಮೂರು ಗಂಟೆ ಸಮಯದಲ್ಲಿ ಬಿಬಿಎಂಪಿಯಿಂದ ಪತ್ರ ಬೇಕು ಅಂತಾ ಕೇಳಿದ್ದಾರೆ. ನಂತರ 1912 ಸಹಾಯವಾಣಿಗೆ ಕರೆ ಮಾಡಿದರೆ ಯಾವುದೇ  ಪ್ರತಿಕ್ರಿಯೆ ಬಂದಿಲ್ಲ, ನಂತರ 4-30 ರ ಸುಮಾರಿನಲ್ಲಿ ವಾಣಿವಿಲಾಸ ಆಸ್ಪತ್ರೆಗೆ ಬಂದಿದ್ದು, ಗುರುವಾರ ಬೆಳಗ್ಗೆ 8-30 ರ ಸುಮಾರಿಗೆ ಗಂಡು ಮಗುವಿನ ಜನನವಾಗಿದೆ. ತಾಯಿ ಹಾಗೂ ಮಗು ಆರೋಗ್ಯದಿಂದ ಇದ್ದಾರೆ ಎಂದು ಮಿಸ್ಬಾ ತಿಳಿಸಿದರು.

ಈ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಿಬಿಎಂಪಿ ಆಯುಕ್ತ ಬಿಹೆಚ್ ಅನಿಲ್ ಕುಮಾರ್, ಇಂತಹ ಕೇಸ್ ಗಳಿಗೆ ಪತ್ರದ ಅಗತ್ಯ ಇಲ್ಲ ಎಂದಿದ್ದಾರೆ. ಗರ್ಭಿಣಿಯನ್ನುಆಸ್ಪತ್ರೆಗೆ ಸೇರಿಸಿಕೊಳ್ಳದಿರುವುದು ದುರದೃಷ್ಟಕರ. ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ಯಾರೇ ಆದರೂ ಅಲ್ಲಿ ಹೋಗಿ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com