ಗಾಳಿಯಲ್ಲಿ ಹರಡುವ ವೈರಸ್ ನಿಯಂತ್ರಿಸುವ ಏರ್ ಪ್ಯೂರಿಫೈಯರ್'ಗೆ ಸಿಎಂ ಯಡಿಯೂರಪ್ಪ ಚಾಲನೆ

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್'ಸಿ) ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ನ್ಯಾನೋ ಕೊರೋನಾ ಏರ್ ಪ್ಯೂರಿಫೈಯರ್ ಕಮ್ ಸ್ಟೆರಿಲೈಸರ್ ಸಾಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಾಲನೆ ನೀಡಿದ್ದಾರೆ. 

Published: 18th July 2020 09:57 AM  |   Last Updated: 18th July 2020 12:51 PM   |  A+A-


Chief Minister B S Yediyurappa inaugurates the Nano Corona Air Purifier-Cum-Steriliser at his official residence Krishna in Bengaluru on Friday

ಏರ್ ಪ್ಯೂರಿಫೈಯರ್'ಗೆ ಚಾಲನೆ ನೀಡುತ್ತಿರುವ ಸಿಎಂ ಯಡಿಯೂರಪ್ಪ

Posted By : Manjula VN
Source : The New Indian Express

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್'ಸಿ) ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ನ್ಯಾನೋ ಕೊರೋನಾ ಏರ್ ಪ್ಯೂರಿಫೈಯರ್ ಕಮ್ ಸ್ಟೆರಿಲೈಸರ್ ಸಾಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಾಲನೆ ನೀಡಿದ್ದಾರೆ. 

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸರಣ ಕಾರ್ಯಕ್ರಮದಲ್ಲಿ, ನ್ಯಾನೋ ಕೊರೋನಾ ಏರ್ ಪ್ರೂರಿಫೇಯರ್ ಕಮ್ ಸ್ಟೆರಿಲೈಸರ್ ಸಾಧನಕ್ಕೆ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಅವರು, ಈ ವರೆಗೂ ನಾವು ವಿಷಕಾರಕ ಅನಿಲಗಳನ್ನು ಹಾಗೂ ರೋಗಕಾರಗಳನ್ನು ನಾಸ ಪಡಿಸಲು ದ್ರವರೂಪ ವಸ್ತುಗಳನ್ನು ಬಳಸುತ್ತಿದ್ದೆವು. ಇಂತಹ ತಂತ್ರಜ್ಞಾನಗಳ ಬಳಕೆಯು ವೈರಸ್ ಮಟ್ಟ ಹಾಕಲು ಸಹಾಯಕವಾಗಿವೆ ಎಂದು ಹೇಳಿದ್ದಾರೆ. 

ಈ ನ್ಯಾನೋ ಕೊರೋನಾ ಏರ್ ಪ್ಯೂರಿಫೈಯರ್ ಕಮ್ ಸ್ಟೆರಿಲೈಸರ್ ಕೋವಿಡ್ ಸೋಂಕನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸಾಧನ ಗಾಳಿಯಲ್ಲಿ ಸೇರಿದ ವೈರಸ್ ಗಳನ್ನು ನಾಶಪಡಿಸಿ ಗಾಳಿಯನ್ನು ಶುದ್ಧಗೊಳಿಸುತ್ತದೆ. ಇದನ್ನು ಆಸ್ಪತ್ರೆ, ಐಸೋಲೇಷನ್ ವಾರ್ಡ್, ಐಸಿಯು, ಕಚೇರಿಗಳು, ಶಾಲೆ, ಮನೆ ಹಾಗೂ ಸಮುದಾಯ ಭವನಗಳಲ್ಲೂ ಬಳಕೆ ಮಾಡಬಹುದಾಗಿದೆ. 

ಮಾಲಿನ್ಯಕಾರಕ ಅನಿಲಗಳು ಮತ್ತು ರೋಗಕಾರಕಗಳನ್ನು ಹೀರಿಕೊಳ್ಳಲು ನಾವು ನ್ಯಾನೊ-ವಸ್ತುಗಳನ್ನು ದ್ರವ ರೂಪದಲ್ಲಿ ಬಳಸುತ್ತಿದ್ದೇವೆ. 

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp