ವಿಕ್ಟೋರಿಯಾ ಆಸ್ಪತ್ರೆ ಅವ್ಯವಸ್ಥೆ ಬಿಂಬಿಸುವ ವಿಡಿಯೋ ನಕಲಿ: ಪ್ರಕರಣ ದಾಖಲು

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೂರಾರು ರೋಗಿಗಳು ವೈದ್ಯರಿಗಾಗಿ ಕಾಯುತ್ತಿದ್ದ ದೃಶ್ಯ ಎಂದು ಅಲ್ಲಿನ ಅವ್ಯವಸ್ಥೆಯನ್ನು ಬಿಂಬಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೋ, ನಕಲಿಯಾಗಿದ್ದು, ಇದು ವಿಕ್ಟೋರಿಯಾ ಅಥವಾ ಕರ್ನಾಟಕದ ಯಾವುದೇ ಆಸ್ಪತ್ರೆಯ ವಿಡಿಯೋ ಅಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. 
ವಿಕ್ಟೋರಿಯಾ ಆಸ್ಪತ್ರೆ
ವಿಕ್ಟೋರಿಯಾ ಆಸ್ಪತ್ರೆ

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೂರಾರು ರೋಗಿಗಳು ವೈದ್ಯರಿಗಾಗಿ ಕಾಯುತ್ತಿದ್ದ ದೃಶ್ಯ ಎಂದು ಅಲ್ಲಿನ ಅವ್ಯವಸ್ಥೆಯನ್ನು ಬಿಂಬಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೋ, ನಕಲಿಯಾಗಿದ್ದು, ಇದು ವಿಕ್ಟೋರಿಯಾ ಅಥವಾ ಕರ್ನಾಟಕದ ಯಾವುದೇ ಆಸ್ಪತ್ರೆಯ ವಿಡಿಯೋ ಅಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆ, ಎನ್‌ಡಿಎಂ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 505ರಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂತಹ ವಿಡಿಯೋಗಳನ್ನು ಸಾರ್ವಜನಿಕರು ಯಾರಿಗೂ ಕಳುಹಿಸಬಾರದು. ಕೊರೊನಾ ಸಂದರ್ಭದಲ್ಲಿ ಜನರಲ್ಲಿ ಆತಂಕ ಮೂಡಿಸುವ ಇಂತಹ ವಿಡಿಯೋಗಳ ಬಗ್ಗೆ ಜನರು ಎಚ್ಚರಿಕೆ ವಹಿಸಿಬೇಕು, ನಕಲಿ ವಿಡಿಯೋಗಳನ್ನು ಫಾರ್ವರ್ಡ್‌ ಮಾಡಬಾರದು ಎಂದು ಪೊಲೀಸರು ವಿನಂತಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com