ಹಾಸಿಗೆ ನಿರಾಕರಿಸಿದರೆ ಕಾನೂನು ಕ್ರಮ ಕೈಗೊಳ್ಳಲು ಸಿಎಂ ಸೂಚನೆ: ಸಚಿವ ಆರ್. ಅಶೋಕ್

ಕೋವಿಡ್ 19 ರೋಗಿಗಳಿಗೆ ಹಾಸಿಗೆ ನಿರಾಕರಿಸಬಾರದು,ಖಾಸಗಿ ಆಸ್ಪತ್ರೆಗಳು ಒಂದು ವೇಳೆ ನಿರಾಕರಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಆರ್. ಅಶೋಕ್
ಆರ್. ಅಶೋಕ್

ಬೆಂಗಳೂರು: ಕೋವಿಡ್ 19 ರೋಗಿಗಳಿಗೆ ಹಾಸಿಗೆ ನಿರಾಕರಿಸಬಾರದು,ಖಾಸಗಿ ಆಸ್ಪತ್ರೆಗಳು ಒಂದು ವೇಳೆ ನಿರಾಕರಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಮುಖ್ಯಮಂತ್ರಿ ಸಭೆ ಬಳಿಕ ಮಾತನಾಡಿದ ಅವರು, 50% ಹಾಸಿಗೆಯನ್ನು ಬಿಟ್ಟುಕೊಡಬೇಕು. ಇನ್ನು ಮುಂದೆ ನಾನು ಯಾವ ಸಭೆಯನ್ನು ನಡೆಸಲ್ಲ.ಕಷ್ಟದ ಸಂದ ರ್ಭ ಯಾರೂ ಹಾಸಿಗೆ ನಿರಾಕರಿಸಬಾರದು.ನಿರಾಕರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗು ವುದಾಗಿ ಮುಖ್ಯಮಂತ್ರಿ ಅವರು ಎಚ್ಚರಿಕೆ ನೀಡಿದ್ದಾರೆ ಎಂದು ವಿವರಿಸಿದರು.

ಸಿಎಂ ಎಚ್ಚರಿಕೆಗೆ ಮಣಿದ ವೈದ್ಯಕೀಯ ಕಾಲೇಜುಗಳು
ಮತ್ತೊಂದೆಡೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಎಚ್ಚರಿಕೆಗೆ ಮಣಿದ ಖಾಸಗಿ ವೈದ್ಯಕೀಯ ಕಾಲೇಜುಗಳು ಶೇಕಡಾ 50ರಷ್ಟು ಬೆಡ್ ನೀಡಲು ಸಿಎಂ ಸಭೆಯಲ್ಲಿ ಒಪ್ಪಿಗೆ ಸೂಚಿಸಿವೆ. ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳ ಆಡಳಿತ ಮಂಡಳಿ ಜತೆ ನಡೆದ ಸಭೆಯಲ್ಲಿ ನಾಳೆಯಿಂದಲೇ ಶೇ. 50 ರಷ್ಟು ಬೆಡ್ ನೀಡಲು ಖಾಸಗಿ ವೈದ್ಯಕೀಯ ಕಾಲೇಜುಗಳು ಒಪ್ಪಿದ್ದಲ್ಲದೆ, ಕೆಲವು ಕಾಲೇಜುಗಳು ‌ಶೇ. 80ರಷ್ಟು ಬೆಡ್ ಕೊಡಲು ಸಹ ಒಪ್ಪಿಕೊಂಡಿವೆ ಎನ್ನಲಾಗಿದೆ. ಜೊತೆಗೆ ಎಲ್ಲಾ ವೈದ್ಯಕೀಯ ‌ಕಾಲೇಜುಗಳ‌ ಮೇಲೆ ನಿಗಾ ಇಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದು, ಬೆಡ್ ವಿಚಾರದಲ್ಲಿ ಮುಚ್ಚುಮರೆ ಮಾಡಿದ್ರೆ‌ ಲೈಸೆನ್ಸ್ ರದ್ದು ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com