ವೈಜ್ಞಾನಿಕವಾಗಿ ಪಠ್ಯಕ್ರಮವನ್ನು ಇಳಿಸುತ್ತೇವೆ: ಸಂದರ್ಶನದಲ್ಲಿ ಸಚಿವ ಸುರೇಶ್ ಕುಮಾರ್

ಕೊರೋನಾ ವೈರಸ್ ಪ್ರತೀ ರಾಷ್ಟ್ರವನ್ನು ಹಾಗೂ ರಾಷ್ಟ್ರಗಳ ಪ್ರತೀ ವಲಯಗಳೂ ಕೂಡ ಕಂಗಾಲಾಗುವಂತೆ ಮಾಡಿದೆ. ಪ್ರಮುಖವಾಗಿ ವಿದ್ಯಾರ್ಥಿಗಳ ಭವಿಷ್ಯ ಮೂಡಿಸುವ ಶಿಕ್ಷಣದ ಮೇಲಂತೂ ಗಂಭೀರ ಪರಿಣಾಮ ಬೀರಿದ್ದು, ಸೋಂಕಿನಿಂದ ಮಕ್ಕಳನ್ನು ರಕ್ಷಿಸುವುದರ ಜೊತೆಗೆ ಶಿಕ್ಷಣ ನೀಡುವ ಕುರಿತು ಪ್ರತೀಯೊಬ್ಬರೂ ತಬ್ಬಿಬ್ಬಾಗುವಂತೆ ಮಾಡಿದೆ.  
ಸಚಿವ ಸುರೇಶ್ ಕುಮಾರ್
ಸಚಿವ ಸುರೇಶ್ ಕುಮಾರ್

ಬೆಂಗಳೂರು: ಕೊರೋನಾ ವೈರಸ್ ಪ್ರತೀ ರಾಷ್ಟ್ರವನ್ನು ಹಾಗೂ ರಾಷ್ಟ್ರಗಳ ಪ್ರತೀ ವಲಯಗಳೂ ಕೂಡ ಕಂಗಾಲಾಗುವಂತೆ ಮಾಡಿದೆ. ಪ್ರಮುಖವಾಗಿ ವಿದ್ಯಾರ್ಥಿಗಳ ಭವಿಷ್ಯ ಮೂಡಿಸುವ ಶಿಕ್ಷಣದ ಮೇಲಂತೂ ಗಂಭೀರ ಪರಿಣಾಮ ಬೀರಿದ್ದು, ಸೋಂಕಿನಿಂದ ಮಕ್ಕಳನ್ನು ರಕ್ಷಿಸುವುದರ ಜೊತೆಗೆ ಶಿಕ್ಷಣ ನೀಡುವ ಕುರಿತು ಪ್ರತೀಯೊಬ್ಬರೂ ತಬ್ಬಿಬ್ಬಾಗುವಂತೆ ಮಾಡಿದೆ. 

ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಕೊರೋನಾ ನಿಯಂತ್ರಿಸುವುದು ಇದೀಗ ಎಲ್ಲರಿಗೂ ಸವಾಲಾಗಿ ಪರಿಣಮಿಸಿದ್ದು, ಶೈಕ್ಷಣಿಕ ವರ್ಷ ಯಾವಾಗ ಆರಂಭವಾಗುತ್ತದೆ ಎಂಬುದು ತಿಳಿಯದಂತಾಗಿದೆ. ಪಠ್ಯಕ್ರಮ ಇಳಿಸುವುದಕ್ಕೆ ನಾವು ಸಿದ್ಧರಿದ್ದೇವೆಂದು ಹೇಳಿದ್ದಾರೆ. 

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಯಾವಾಗ ಆರಂಭವಾಗುತ್ತದೆ?
ಇದನ್ನು ಯಾರೊಬ್ಬರೂ ಊಹಿಸಲು ಸಾಧ್ಯವಿಲ್ಲ. ಬಲವಾದ ಶಿಕ್ಷಣ ಕ್ರಮಗಳ ಜಾರಿಗೆ ನಾವು ಸಿದ್ಧರಿದ್ದೇವೆ. ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿಗಳು ಶಿಕ್ಷಣಗಳ ದೊರಕದೆ ಹೊರಗುಳಿಯುವುದಿಲ್ಲ. ಪಠ್ಯಕ್ರಮವನ್ನು ವೈಜ್ಞಾನಿಕವಾಗಿ ಕಡಿತಗೊಳಿಸಲಾಗುತ್ತದೆ. ದೂರಶಿಕ್ಷಣ ಯೋಜನೆಗಳನ್ನು ಸೂಕ್ಷ್ಮವಾಗಿ ವಿನ್ಯಾಸಗೊಳಿಸಲಾಗುತ್ತದೆ. ಇದರಲ್ಲಿ ಶಿಕ್ಷಕರು ಹೊಸ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಯೋಜನೆಗಳು ಜಾರಿಗೆ ಬಂದ ಬಳಿಕ ಮಕ್ಕಳು ಕಲಿಕೆಯಿಂದ ವಂಚಿತರಾಗುವುದಿಲ್ಲ ಎಂಬ ವಿಶ್ವಾಸ ನನಗಿದೆ. 

ದ್ವಿತೀಯ ಪಿಯುಸಿ ಫಲಿತಾಂಶವೇಕೆ ಶೇ.60ರಷ್ಟಲ್ಲಿದೆ? 
ದ್ವಿತೀಯ ಪಿಯುಸಿ ಫಲಿತಾಂಥ ಇದೇ ಶೇಕಡಾವಾರಿನ ಸುತ್ತ ಸುಳಿದಾಡುತ್ತಿರುವುದು ಐತಿಹಾಸಿಕವೇ ಸರಿ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ತಿರುವಾಗಿರುವುದರಿಂದ ಕಠಿಣ ಕಾರ್ಯವಿಧಾನಗಳನ್ನು ಅನುಸರಿಸುವುದು ಅತ್ಯಗತ್ಯ. ಈ ವರ್ಷ ಕೊರೋನಾ ಭೀತಿಯ ನಡುವಲ್ಲಿಯೂ ಇತ್ತೀಚಿನ ಕೆಲ ವರ್ಷಗಳಿಗೆ ಹೋಲಿಕೆ ಮಾಡಿದರೆ, ಪ್ರಸಕ್ತ ಸಾಲಿನಲ್ಲಿ ಉತ್ತಮ ಫಲಿತಾಂಶವೇ ಬಂದಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ವಾತಾವರಣಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಕ್ರಿಯಾ ಯೋಜನೆಗಳನ್ನು ರೂಪಿಸಲಾಗುತ್ತಿದೆ. 

ಪ್ರಸಕ್ತ ಸಾಲಿನಲ್ಲಿ 88 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.  ಖಾಸಗಿ ಕಾಲೇಜುಗಳಿಗೆ ಹೋಲಿಕೆ ಮಾಡಿದರೆ, ಸರ್ಕಾರಿ ಅನುದಾನಿತ ಕಾಲೇಜುಗಳಲ್ಲಿ ಫಲಿತಾಂಶ ಉತ್ತಮವಾಗಿಲ್ಲ...?
88 ಪಿಯು ಕಾಲೇಜುಗಳಲ್ಲಿ 78 ಅನುದಾನಿತವಲ್ಲದ ಕಾಲೇಜುಗಳಾಗಿವೆ. ಫಲಿತಾಂಶಗಳನ್ನು ಸುಧಾರಿಸಲು ವ್ಯವಸ್ಥಾಪಕರು ಕಾರ್ಯತಂತ್ರಗಳನ್ನು ಯೋಜಿಸುವ ಅಗತ್ಯವಿದೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಆದರೆ ಈ ಸಂಖ್ಯೆ ಇನ್ನು ಗಮನಿಸಿದರೆ ನಿರ್ಲಕ್ಷ್ಯ ಹೆಚ್ಚಾಗಿದೆ ಎಂಬುದನ್ನು ತೋರ್ಪಡಿಸುತ್ತಿದೆ.  ಆದಾಗ್ಯೂ, ಅಂತರವನ್ನು ಕಡಿಮೆ ಮಾಡಲು ತಂತ್ರಗಳನ್ನು ಯೋಜಿಸಲಾಗುತ್ತಿದೆ. 

ಎಸ್'ಸಿ/ಎಸ್'ಟಿ ಮತ್ತು ಇತರೆ ಜಾತಿಗಳ ವಿದ್ಯಾರ್ಥಿಗಳ ನಡುವೆ ಈಗಲೂ ಅಂತರಗಳಿವೆ..? 
ಫಲಿತಾಂಶವನ್ನು ಉತ್ತಮಗೊಳಿಸಲು ಸರ್ಕಾರ ತನ್ನಿಂದ ಸಾಧ್ಯವಾದಷ್ಟು ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ವಿಶ್ವಾಸ ಕಿರಣ ಎಂಬ ಇಂಗ್ಲೀಷ್ ಭಾಷೆಯ ವಿಶೇಷ ತರಭೇತಿಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಸಾಕಷ್ಟು ಶ್ರಮಗಳನ್ನು ಹಾಕುತ್ತಿದ್ದಾರೆ. ಮೂಲ ಕಾರಣಗಳನ್ನು ಕಂಡುಹಿಡಿಯಲು ತುಲನಾತ್ಮಕವಾಗಿ ಸೂಕ್ಷ್ಮ ಅಧ್ಯಯನ ನಡೆಸಲಾಗುತ್ತದೆ. 

ಲಾಕ್ಡೌನ್ ಎಸ್ಎಸ್ಎಲ್'ಸಿ ಮೌಲ್ಯಮಾಪನದ ಗಡುವಿನ ಮೇಲೆ ಪರಿಣಾಮ ಬೀರುತ್ತಿದೆಯೇ? 
ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳನ್ನು ಹೊರತುಪಡಿಸಿದರೆ, ರಾಜ್ಯದ ವಿವಿಧ ಮೌಲ್ಯಮಾಪನ ಕೇಂದ್ರಗಳಲ್ಲಿ ಶೇ.75-80ರಷ್ಟು ಶಿಕ್ಷಕರ ಹಾಜರಾತಿಗಳಿವೆ. ಬೆಂಗಳೂರಿನ ಮೇಲಷ್ಟೇ ಲಾಕ್ಡೌನ್ ಪರಿಣಾಮ ಬೀರಿವೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ಶಿಕ್ಷಕರು ತಮ್ಮ ದೃಢತೆಯನ್ನು ಪ್ರದರ್ಶಿಸಿದ್ದಾರೆ. ಮೌಲ್ಯಮಾಪನ ಕೇಂದ್ರಗಳಲ್ಲಿ ಭದ್ರತೆ ಹಾಗೂ ಸುರಕ್ಷತಾ ಕ್ರಮಗಳು ಸೂಕ್ತವಾಗಿವೆ. ಮಂಡ್ಯ, ಚಾಮರಾಜನಗರ ಹಾಗೂ ಇತರೆ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಇದೇ ತಿಂಗಳ ಅಂತ್ಯದಲ್ಲಿ ಫಲಿತಾಂಶ ಪ್ರಕಟಗೊಳಿಸುವ ವಿಶ್ವಾಸ ನನಗಿದೆ. 

ಆನ್‌ಲೈನ್ ತರಗತಿಗಳಿಗೆ ಸ್ಕ್ರೀನ್ ಟೈಮ್ ನಿಗದಿ ಪಡಿಸುವಂತೆ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಈ ಬಗ್ಗೆ ರಾಜ್ಯ ಸರ್ಕಾರ ಯಾವ ನಿರ್ಧಾರ ಕೈಗೊಂಡಿದೆ? 
ತಜ್ಞರ ಸಮಿತಿ ವರದಿ ಸಲ್ಲಿಸಿದೆ. ಆನ್ಲೈನ್ ಶಿಕ್ಷಣ ಮಕ್ಕಳ ಹಕ್ಕು ಎಂದು ಈಗಾಗಲೇ ನ್ಯಾಯಾಲಯ ಕೂಡ ಹೇಳಿದೆ. ಕೇಂದ್ರ ಸರ್ಕಾರ ಕೂಡ ಈಗಾಗಲೇ ಸ್ಕ್ರೀನ್ ಟೈಮ್'ಗೆ ಮಾರ್ಗಸೂಚಿಗಳನ್ನು ನಿಗದಿಪಡಿಸಿದೆ. ಈ ಬಗ್ಗೆ ಸಲಹೆಗಳನ್ನು ಕೇಳಲಾಗುತ್ತಿದೆ. 

ಉನ್ನತ ಶಿಕ್ಷಣದಲ್ಲಿ ಸಮಾನ ಅವಕಾಶಗಳನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಶಿಕ್ಷಣ ಮಂಡಳಿಯು ಸಿಬಿಎಸ್ಇ-ಐಸಿಎಸ್ಇ ವಿದ್ಯಾರ್ಥಿಗಳ ನಡುವೆ ಒಂದು ಮಟ್ಟದ ಸಮಾನ ವೇದಿಕೆ ರಚಿಸಲು ಉನ್ನತ ಶಿಕ್ಷಣ ಸಚಿವರೊಂದಿಗೆ ಮಾತನಾಡಬೇಕೆಂದು ಹೇಳಿದ್ದಿರಿ. ಈ ಬಗ್ಗೆ ಮೂಡಿಬಂದ ಒಮ್ಮತಗಳೇನು? 
ಸಿಬಿಎಸ್‌ಇ ಮತ್ತು ಐಸಿಎಸ್‌ಇ ತರಹದ ಗ್ರೇಡಿಂಗ್ ವ್ಯವಸ್ಥೆ ನೀಡುವ ಕುರಿತ ಸಾಧಕ-ಬಾಧಕಗಳನ್ನು ಇಲಾಖೆ ಪರಿಶೀಲಿಸುತ್ತಿದೆ. ವೃತ್ತಿಪರ ಕೋರ್ಸ್ ಗಳನ್ನು ಆಯ್ಕೆ ಮಾಡುವಾಗ ಪ್ರಸ್ತುತ ಅಸ್ತಿತ್ವದಲ್ಲಿರುವ ಎರಡು ಭಾಷೆಗಳು, ನಾಲ್ಕು ಸಹ ವಿಷಯಗಳ ವ್ಯವಸ್ಥೆಯು ಈಗಾಗಲೇ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ. ಈ ಬಗ್ಗೆ ಸೂಕ್ತ ವೇದಿಕೆಯಲ್ಲಿ ಚರ್ಚೆ ಆರಂಭಿಸಲಾಗುತ್ತದೆ. 

ಬೆಂಗಳೂರು ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಲು ಕಾರಣವೇನು? 
ಪರೀಕ್ಷೆಗಳ ಉತ್ತಮ ಕಾರ್ಯವಿಧಾನಗಳಿಂದಾಗಿ ಪ್ರಸ್ತುತ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಸಾಂಕ್ರಾಮಿಕ ರೋಗವನ್ನು ನಿರ್ವಹಿಸಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಜೀವನಶೈಲಿಗಳನ್ನು ಬದಲಿಸಿಕೊಂಡು ಜೀವಿಸುವ ದೊಡ್ಡ ಜವಾಬ್ದಾರಿ ಜನರ ಮೇಲಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com