ಪಿಎಸ್‌ಎಸ್‌ಕೆಯಲ್ಲಿ ಕೊರೊನಾ ಸೋಂಕಿತರು ಇಲ್ಲ: ಮುರುಗೇಶ್ ನಿರಾಣಿ ಸ್ಪಷ್ಟನೆ

ಪಿಎಸ್‌ಎಸ್‌ಕೆಯಲ್ಲಿ ಕೊರೊನಾ ಸೋಂಕಿತರು ಇಲ್ಲ ಎಂದು ನಿರಾಣಿ ಶುಗರ್ಸ್ ಲಿಮಿಟೆಡ್‌ನ ಅಧ್ಯಕ್ಷ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ

ಬೆಂಗಳೂರು: ಪಿಎಸ್‌ಎಸ್‌ಕೆಯಲ್ಲಿ ಕೊರೊನಾ ಸೋಂಕಿತರು ಇಲ್ಲ ಎಂದು ನಿರಾಣಿ ಶುಗರ್ಸ್ ಲಿಮಿಟೆಡ್‌ನ ಅಧ್ಯಕ್ಷ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಕೊರೋನ ಸೋಂಕಿತರು ಯಾರೊಬ್ಬರೂ ಪಿಎಸ್‌ಎಸ್‌ಕೆಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಸ್ವತಃ ತಾವೆ 3 ದಿನಗಳ ಕಾಲ ದಿನಪೂರ್ತಿ ಕಾರ್ಖಾನೆಯಲ್ಲಿದ್ದುಕೊಂಡು ಯಂತ್ರೋಪಕರಣಗಳ ದುರಸ್ತಿ ಕಾರ್ಯದ ಮೇಲುಸ್ತುವಾರಿಯನ್ನು ಮಾಡಿದ್ದೇನೆ. ಕೊರೋನಾ ಸೋಂಕಿತರು ಕಾರ್ಖಾನೆಯಲ್ಲಿ ಕಾಯನಿರ್ವಹಿಸುತ್ತಿದ್ದು ಇತರರಿಗೆ ಸೋಂಕು ಹಬ್ಬಿಸುತ್ತಿದ್ದಾರೆ ಎಂಬ ಸುದ್ದಿಮಾಧ್ಯಮಗಳಲ್ಲಿ ಪ್ರಕಟವಾಗಿರುವುದು ತಮಗೆ ಅತೀವನೋವು ಉಂಟುಮಾಡಿದೆ. ಮುಂದಿನ ದಿನಗಳಲ್ಲಾದರೂ ಜನಪ್ರತಿನಿಧಿಗಳು ಹಾಗೂ ಮಾಧ್ಯಮಸ್ನೇಹಿತರೂ ತಮ್ಮನ್ನು ನೇರವಾಗಿ ಸಂಪರ್ಕಿಸಿ ಮಾಹಿತಿ ಪಡೆದು ವಾಸ್ತವಸಂಗತಿಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕು ಎಂದು ನಿರಾಣಿ ಶುಗರ್ಸ್ ಲಿಮಿಟೆಡ್‌ನ ಅಧ್ಯಕ್ಷ ಮುರುಗೇಶ್ ನಿರಾಣಿ ಮನವಿ ಮಾಡಿದ್ದಾರೆ.

ಪಿಎಸ್‌ಎಸ್‌ಕೆಯಲ್ಲಿ ಸೋಂಕಿತರು ಇಲ್ಲ ಎಂದ ಮೇಲೆ ಅಕ್ಕಪಕ್ಕದ ಊರುಗಳಿಗೆ ಸೋಂಕು ಹರಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬಿಹಾರ ಹಾಗೂ ಮುಧೋಳದಿಂದ ಆಗಮಿಸಿರುವ ತಂತ್ರಜ್ಞರು, ಎಂಜಿನಿಯರ್ ಗಳು ಹಾಗೂ ಮೆಕಾನಿಕ್ ಗಳು ಪಿಎಸ್‌ಎಸ್‌ಕೆಯ ಯಂತ್ರೋಪಕರಣಗಳನ್ನು ದುರಸ್ತಿ ಮಾಡಿ ತಮ್ಮಊರುಗಳಿಗೆ ಹಿಂದಿರುಗಲಿದ್ದಾರೆ. ಬೇರೆಸ್ಥಳಗಳಿಂದ ಬಂದಿರುವ ಯಾರೊಬ್ಬರೂ ಇಲ್ಲಿ ಉಳಿಯುವುದಿಲ್ಲ. ಕೊರೊನಾ ಸೋಂಕಿತರು ಪಿಎಸ್‌ಎಸ್‌ಕೆಯಲ್ಲಿ ಇಲ್ಲ ಎಂದು ನಿರಾಣಿಸ್ಪಷ್ಟನೆ ನೀಡಿದ್ದಾರೆ.

ಬಿಹಾರದಿಂದ ಆಗಮಿಸಿರುವ ತಂತ್ರಜ್ಞರನ್ನು 15ದಿನಗಳ ಕ್ವಾರಂಟೈನ್‌ಗೆ ಒಳಪಡಿಸಿದ್ದು ಆರೋಗ್ಯ ತಪಾಸಣೆಮಾಡಿಸಿ ವೈದ್ಯಕೀಯ ಪ್ರಮಾಣ ಪತ್ರವನ್ನು ಪಡೆದ ನಂತರವೇ ಪಿಎಸ್‌ಎಸ್‌ಕೆಗೆ ಕರೆತರಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com