ಕೊರೋನಾ ಪರೀಕ್ಷೆ ಹೆಚ್ಚಿಸಲು ರಾಜ್ಯದಲ್ಲಿ ಹೊಸದಾಗಿ 20 ಲ್ಯಾಬ್ : ಸುಧಾಕರ್

ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಇರುವ 85 ಲ್ಯಾಬ್ ಗಳ ಜೊತೆಗೆ ಹೊಸದಾಗಿ ಇನ್ನೂ 20 ಲ್ಯಾಬ್ ತೆರೆಯಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಸುಧಾಕರ್
ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಇರುವ 85 ಲ್ಯಾಬ್ ಗಳ ಜೊತೆಗೆ ಹೊಸದಾಗಿ ಇನ್ನೂ 20 ಲ್ಯಾಬ್ ತೆರೆಯಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.

ಸದ್ಯ ದಿನಕ್ಕೆ 35 ಸಾವಿರ ಪರೀಕ್ಷೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ 198 ವಾರ್ಡ್ ಗಳಿದ್ದು,ಸಿಬ್ಬಂದಿಗೆ ಬೂತ್ ಮಟ್ಟದಲ್ಲಿ ತರಬೇತಿ ನೀಡಲಾಗುತ್ತಿದೆ, ವಾರ್ಡ್ ಮಟ್ಟು ಹಾಗೂ ಬೂತ್ ಮಟ್ಟದ ಸಿಬ್ಬಂದಿ ಪ್ರತಿದಿನ  400 ಮನೆಗಳಿಗೆ ತೆರಳಿ ಪರೀಕ್ಷೆ ನಡೆಸುತ್ತಿದ್ದಾರೆ,   ಅದರಲ್ಲಿ ಐಎಲ್ ಐ ಮತ್ತು SARI ಪ್ರಕರಣಗಳನ್ನು ದಾಖಲಿಸುತ್ತಿರುವುದರಿಂದ ಶೀಘ್ರವಾಗಿ ಅವರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಒಂದು ವಾರ್ಡ್ ಗೆ 2 ಆ್ಯಂಬುಲೆನ್ಸ್  ಇವೆ, ಪ್ರತಿ ಆಂಬ್ಯುಲೆನ್ಸ್‌ನಲ್ಲಿ ಡ್ಯಾಶ್‌ಬೋರ್ಡ್ ಇದ್ದು, ಅಲ್ಲಿ ಹಾಸಿಗೆಗಳು ಎಲ್ಲಿ ಲಭ್ಯವಿವೆ ಎಂಬ ಮಾಹಿತಿಯನ್ನು ಹೊಂದಿದೆ. ಹೀಗಾಗಿ ರೋಗಿಗಳನ್ನು ಶಿಫ್ಟ್ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿರುವ ಅವರು ಕೊರೋನಾ ಸಮುದಾಯ ಹಂತದಲ್ಲಿ ಹರಡಿದೆ ಎಂಬುದನ್ನು ನಿರಾಕರಿಸಿದರು. ಶೇ.95 ರಷ್ಟು ರೋಗಿಗಳು ಲಕ್ಷಣ ವಿಲ್ಲದವರಾಗಿದ್ದಾರೆ.  ರೋಗ ಲಕ್ಷಣ ಇರುವವರು ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಲು ಪ್ರೋತ್ಸಾಹಿಸಿ ಎಂದು ಸುಧಾಕರ್ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com