ಚೀನಾ ಆಟಿಕೆ ಬಿಡಿ, ಚನ್ನಪಟ್ಟಣದ ಆಟಿಕೆಗಳನ್ನು ಬದುಕಿಸಿ!

ಚೀನಾ ಅಥವಾ ಚನ್ನಾ? ಚೀನಾ ಆಟಿಕೆಗಳ ಬಹಿಷ್ಕಾರ ಮತ್ತು ಚನ್ನಪಟ್ಟಣದ ಆಟಿಕೆಗಳನ್ನು ಬದುಕಿಸಲು ವ್ಯಾಪಕಒತ್ತಾಯಗಳು ಕೇಳಿಬರುತ್ತಿದೆ. ಚೀನಾ ಜೊತೆಗಿನ ವಿವಾದ ಇದೀಗ ಅವನತಿ ಅಂಚಿನಲ್ಲಿರುವ ಈ ಅಟಿಕೆಗಳ ಉಳಿವಿಗೆ ನೆರವಾಗಿದೆ. ಚನ್ನಪಟ್ಟಣದ ಆಟಿಕೆಗಳ ಉದ್ಯಮ ಗತ ಕಾಲದ ವೈಭವಕ್ಕೆ ಮರಳಲು ಇದು ದೊಡ್ಡ ಅವಕಾಶ ಮಾಡಿಕೊಟ್ಟಿದೆ.
ಮರದಿಂದ ತಯಾರಿಸಲಾದ ಚನ್ನಪಟ್ಟಣ ಆಟಿಕೆಗಳು
ಮರದಿಂದ ತಯಾರಿಸಲಾದ ಚನ್ನಪಟ್ಟಣ ಆಟಿಕೆಗಳು

ಬೆಂಗಳೂರು: ಚೀನಾ ಅಥವಾ ಚನ್ನಾ? ಚೀನಾ ಆಟಿಕೆಗಳ ಬಹಿಷ್ಕಾರ ಮತ್ತು ಚನ್ನಪಟ್ಟಣದ ಆಟಿಕೆಗಳನ್ನು ಬದುಕಿಸಲು ವ್ಯಾಪಕ
ಒತ್ತಾಯಗಳು ಕೇಳಿಬರುತ್ತಿದೆ. ಚೀನಾ ಜೊತೆಗಿನ ವಿವಾದ ಇದೀಗ ಅವನತಿ ಅಂಚಿನಲ್ಲಿರುವ ಈ ಅಟಿಕೆಗಳ ಉಳಿವಿಗೆ ನೆರವಾಗಿದೆ. ಚನ್ನಪಟ್ಟಣದ ಆಟಿಕೆಗಳ ಉದ್ಯಮ ಗತ ಕಾಲದ ವೈಭವಕ್ಕೆ ಮರಳಲು ಇದು ದೊಡ್ಡ ಅವಕಾಶ ಮಾಡಿಕೊಟ್ಟಿದೆ.

ಚನ್ನಪಟ್ಟಣ ರಾಜ್ಯದಲ್ಲಿ ಆಟಿಕೆಗಳಿಗೆ ತುಂಬಾ ಹೆಸರುವಾಸಿ. ಆದರೆ ಚೀನಾದಲ್ಲಿ ತಯಾರಾದ ಉತ್ಪನ್ನಗಳು ಅಗ್ಗದ ದರದಲ್ಲಿ ಮಾರುಕಟ್ಟೆಗೆ ಲಗ್ಗೆ ಹಾಕಿ,  ಚನ್ನಪ್ಪಟಣದ ಅಟಿಕೆ ಉದ್ಯಮಕ್ಕೆ ದೊಡ್ಡ ಹೊಡೆತ ಉಂಟಾಗಿತ್ತು. ಈ ಉದ್ಯಮವನ್ನು ಜೀವನೋಪಾಯಕ್ಕಾಗಿ ಅವಲಂಬಿಸಿರುವವರ ಮೇಲೂ ತೀವ್ರ ರೀತಿಯ ಪರಿಣಾಮ ಬೀರಿತ್ತು.

ಚೀನಾ ಜೊತೆಗಿನ ವಿವಾದದಿಂದಾಗಿ ಚನ್ನಪಟ್ಟಣದ ಆಟಿಕೆಗಳು ಜಾಗತಿಕ ಮಟ್ಟದಲ್ಲಿ ಬದುಕುಳಿಯುವ ನಿಟ್ಟಿನಲ್ಲಿ  ಸಕಾರಾತ್ಮಕ ಅಂಶಗಳು ಕಂಡುಬರುತ್ತಿವೆ ಎಂದು ಎಫ್ ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ಧನ ಹೇಳಿದ್ದಾರೆ.

ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಅಂಶಗಳನ್ನು ಸೇರಿಸಿ ಆಟಿಕೆ ಉದ್ಯಮವನ್ನು ಉನ್ನತಿಕ್ಕರಿಸಲು ಮುಖ್ಯಮಂತ್ರಿ ಈಗಾಗಲೇ ಕರೆ ನೀಡಿದ್ದಾರೆ.  ಪರಿಸರ ಸ್ನೇಹಿ ಕೂಡಾ ಆಗಲಿದೆ. ಅದಕ್ಕೆ ಸ್ವಲ್ಪ ಬೇಕಾಗಲಿದೆ. ಆದರೆ, ಚನ್ನಪಟ್ಟಣ ಜಾಗತಿಕವಾಗಿ ಆಟಿಕೆ ಪೂರೈಕೆ ಮಾಡುವ ಸ್ಥಳವಾಗಿ ಹೊರಹೊಮ್ಮಲಿದೆ ಎಂದು ಅವರು ತಿಳಿಸಿದ್ದಾರೆ.

ಆದರೆ, ಚೀನಾದಿಂದ ಆಮದು ಮಾಡಿಕೊಳ್ಳಲಾದ ಶೇ. 70 ರಷ್ಟು ಆಟಿಕೆಗಳು ಬೆಂಗಳೂರಿನ ಆಟಿಕೆ ಉದ್ಯಮದಲ್ಲಿದ್ದು, ಅವುಗಳನ್ನು
ಇಟ್ಟುಕೊಂಡಿರುವ ಅಂಗಡಿಗಳು ಒಂದಿಷ್ಟು ದಿನಗಳವರೆಗೂ ಮಾರಾಟ ಮಾಡಲಿದ್ದಾರೆ.

ಈ ವರ್ಷ ಮೂರು ಕಾರಣದಿಂದಾಗಿ ಆಟಿಕೆ ಉದ್ಯಮದ ಮೇಲೆ ಹೊಡೆತ ಉಂಟಾಗಿದೆ. ಕೊರೋನಾವೈರಸ್ ಚೀನಾದಿಂದ ಹರಡಿರುವುದರಿಂದ ಆ ದೇಶದ ಆಟಿಕೆಗಳ ಪೂರೈಕೆಯಲ್ಲಿ ಅಡ್ಡಿಯುಂಟಾಗಿದೆ. ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ಆಮದು ಸುಂಕವನ್ನು ಶೇ 20 ರಿಂದ 60ಕ್ಕೆ ಹೆಚ್ಚಿಸಿದೆ.  ಇತ್ತೀಚಿನ ಗಡಿ ವಿವಾದದಿಂದಾಗಿ ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನ ದೇಶಾದ್ಯಂತ ನಡೆಯುತ್ತಿದೆ. 

ರಾಜ್ಯ ಆಟಿಕೆ ಅಸೋಸಿಯೇಷನ್ ಪ್ರಕಾರ ಬೆಂಗಳೂರಿನಲ್ಲಿ 700 ರಿಂದ 800 ಸಣ್ಣ ಆಟಿಕೆ ಶಾಪ್ ಗಳು ಮತ್ತು 200ರಿಂದ 300
ದೊಡ್ಡ ಆಟಿಕೆಗಳ ಶಾಪ್ ಗಳು ಇವೆ. 40 ವರ್ಷಗಳಿಂದ ಆಟಿಕೆ ವ್ಯಾಪಾರದಲ್ಲಿ ತೊಡಗಿದ್ದು, ಈ ಬಾರಿ ತೀವ್ರ ರೀತಿಯ
ತೊಂದರೆ ಉಂಟಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಮಂಗಳ್ ಚಂದ್ ಎಸ್ ಜೈನ್ ಹೇಳಿದ್ದಾರೆ.

ಶೇ. 10 ರಷ್ಟು ಆಟಿಕೆಗಳನ್ನು ಥೈಲ್ಯಾಂಡ್, ವಿಯೆಟ್ನಾಂ ಮತ್ತು ಡೆನ್ಮಾರ್ಕ್ ನಂತಹ ರಾಷ್ಟ್ರಗಳಿಂದ ಬರುತ್ತವೆ. ಶೇ. 20 ರಷ್ಟು
ಆಟಿಕೆಗಳು ದೇಶದಲ್ಲಿ ತಯಾರಾಗುತ್ತವೆ. ಇವುಗಳನ್ನು ಮಾಲ್ ಅಥವಾ ಸ್ಟೋರ್ ಗಳು ಖರೀದಿಸುತ್ತವೆ. ಇತರ ಲಭ್ಯವಿರುವ
ಉತ್ಪನ್ನಗಳೊಂದಿಗೆ ಅವುಗಳನ್ನು ಸಹ ಮಾರಾಟ ಮಾಡುತ್ತಾರೆ ಎಂದು ಅಸೋಸಿಯೇಷನ್ ಕಾರ್ಯದರ್ಶಿ ನಿಲೇಶ್ ಗುರ್ನಾನಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com