ವಿಜಯಪುರ: ಕೇವಲ ಒಂದೇ ವಾರದಲ್ಲಿ ಕೊರೋನಾ ಪ್ರಕರಣಗಳು ದುಪ್ಪಟ್ಟು!

ನಗರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ಐದು ದಿನಗಳಲ್ಲಿ ಶೇ.10.9 ರಷ್ಟು ಹೊಸ ಪ್ರಕರಣಗಳು ದಾಖಲಾಗಿವೆ, ಕೇವಲ ಒಂದೇ ವಾರದಲ್ಲಿ ಕೊರೋನಾ ಕೇಸ್ ಡಬಲ್ ಆಗಿವೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಿಜಯಪುರ:  ನಗರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ಐದು ದಿನಗಳಲ್ಲಿ ಶೇ.10.9 ರಷ್ಟು ಹೊಸ ಪ್ರಕರಣಗಳು ದಾಖಲಾಗಿವೆ, ಕೇವಲ ಒಂದೇ ವಾರದಲ್ಲಿ ಕೊರೋನಾ ಕೇಸ್ ಡಬಲ್ ಆಗಿವೆ.

ಜುಲೈ 11ರಂದು ಜಿಲ್ಲೆಲ್ಲಿ 758 ಕೇಸ್ ಗಳಿದ್ದವು, ಆದರೆ 7 ದಿನಕ್ಕೆ 827 ಹೊಸ ಪ್ರಕರಣ ದಾಖಲಾಗಿವೆ. ಪರೀಕ್ಷೆಗಾಗಿ ಸುಮಾರು 40 ಸಾವಿರ ಮಾದರಿ ಸಂಗ್ರಹಿಸಿದ್ದು, ಶೇ, 70 ರಷ್ಟು ಮಾದರಿಯನ್ನು ನಗರದ ದುರ್ಬಲ ಪ್ರದೇಶಗಳಿಂದ ಸಂಗ್ರಹಿಸಲಾಗಿದೆ, ಇದರಲ್ಲಿ 1,585 ಪಾಸಿಟಿವ್ ಮತ್ತು 36,334 ನೆಗೆಟಿವ್ ಕಂಡು ಬಂದಿದೆ, ವಿಜಯಪುರದಲ್ಲಿ 1 ಸಾವಿರಕ್ಕೂ ಹೆಚ್ಚು ಹೊಸ ಕೇಸ್ ದಾಖಲಾಗಿವೆ, ನಗರದ ಮಿತಿಯಲ್ಲಿಯೇ ಶೇ,95 ರಷ್ಟು ಪ್ರಕರಣಗಳು ದಾಖಲಾಗಿವೆ.

ಇದೇ ವೇಳೆ ಜಿಲ್ಲೆಯ ಕೊಲ್ಹಾರ ತಾಲೂಕಿನಲ್ಲಿ ಕೇವಲ 7 ಕೇಸ್ ಮಾತ್ರ ದಾಖಲಾಗಿದೆ. ಪ್ರಕರಣಗಳು ವೇಗವಾಗಿ ವರದಿಯಾಗುತ್ತಿದ್ದರೂ, ರೋಗಿಗಳು ಅದೇ ವೇಗದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಶೇಕಡಾ 65 ರಷ್ಟು ರೋಗಿಗಳು ಡಿಸ್ಚಾರ್ಜ್ ಆಗುತ್ತಿದ್ದಾರೆ. ಮರಣದ ಪ್ರಮಾಣವು ಶೇಕಡಾ 1.5 ಕ್ಕಿಂತ ಕಡಿಮೆಯಿದೆ ”ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ತಿಳಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com