ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲೂ ಸಮುದಾಯ ಕೋವಿಡ್ ಕೇಂದ್ರ ರಚನೆಗೆ ಸರ್ಕಾರ ಚಿಂತನೆ

ನಗರದ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲೂ ಸಮುದಾಯ ಕೋವಿಡ್ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು, ಇದರಲ್ಲಿ ನಾಗರೀಕರು ಭಾಗವಹಿಸಬೇಕೆಂದು ಸೋಮವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲೂ ಸಮುದಾಯ ಕೋವಿಡ್ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು, ಇದರಲ್ಲಿ ನಾಗರೀಕರು ಭಾಗವಹಿಸಬೇಕೆಂದು ಸೋಮವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿ ಶೀಘ್ರದಲ್ಲಿಯೇ ಸಮುದಾಯ ಸಮಿತಿಯನ್ನು ರಚಿಸಲಾಗುತ್ತದೆ. ಸಮಿತಿಗೆ ಎಲ್.ಕೆ.ಅತೀಕ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕೋವಿಡ್ -19 ರ ನಿರ್ವಹಣೆಯನ್ನು ವಿಕೇಂದ್ರೀಕರಿಸುವ ಅವಶ್ಯಕತೆಯಿದ್ದು, ಜನರು ವೇಗವಾಗಿ ಮತ್ತು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಸಮಿತಿಯನ್ನು ತ್ವರಿತಗತಿಯಲ್ಲಿ ರಚನೆ ಮಾಡಬೇಕಿದ್ದು, ಬುಡದಿಂದ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ. 

ಈ ನಡುವೆ ಅತೀಕ್ ಅವರು ರೆಸಿಡೆಂಟ್ ವೆಲ್ ಫೇರ್ ಅಸೋಸಿಯೇಷನ್ (ಆರ್ ಡಬ್ಲ್ಯೂಎ) ಜೊತೆಗೆ ಸಬೆ ನಡೆಸಿದ್ದು, ವಿಪತ್ತು ನಿರ್ವಹಣಾ ಸಮತಿ ರಚನೆಗೆ ಗಡುವು ನೀಡಿದ್ದಾರೆ. 

ಶುಕ್ರವಾರದೊಳಗಾಗಿ ಸಮಿತಿಯನ್ನು ರಚನೆ ಮಾಡಲಾಗುತ್ತಿದ್ದು, ಸಭೆಗಳನ್ನು ನಡೆಸಲಾಗುತ್ತದೆ. ಡ್ಯಾಷ್ ಬೋರ್ಡ್ ನಲ್ಲಿ ಸಭೆಯ ಪ್ರಕ್ರಿಯೆಗಳನ್ನು ಪ್ರಕಟಿಸಲಾಗುತ್ತದೆ. ಜನಾಗ್ರಹ ಹಾಗೂ ಎನ್'ಜಿಒ ಜೊತೆಗಿನ ಸಹಕಾರವನ್ನು ಇದು ಹೆಚ್ಚಿಸಲಿದೆ. ಕೆಲವರು ಇದಕ್ಕೆ ಆಸಕ್ತಿ ತೋರಿದ್ದು, ಲಾಕ್ಡೌನ್ ಪರಿಣಾಮ ಕೆಲವರು ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. 

ಈಗಾಗಲೇ ಎಲ್ಲಾ ಕಾರ್ಪೊರೇಟರ್‌ಗಳು, ಆರ್‌ಡಬ್ಲ್ಯುಎ ಮತ್ತು ವಾರ್ಡ್ ಸಮಿತಿಗಳಿಗೆ ತಮ್ಮ ಮೊದಲ ಸಭೆ ನಡೆಸುವಂತೆ ಬಿಬಿಎಂಪಿ ನಿರ್ದೇಶನ ನೀಡಿದೆ. ಆದರೆ, ಈ ವರೆಗೂ ಕೇವಲ 60 ಸಮಿತಿಗಳು ಮಾತ್ರ ಸಬೆಗಳನ್ನು ನಡೆಸಿವೆ. ಬೆಂಗಳೂರಿನಲ್ಲಿ 198 ವಾರ್ಡ್‌ಗಳಿದ್ದು, ಅನೇಕ ಪ್ರದೇಶಗಳಲ್ಲಿ ಆರ್‌ಡಬ್ಲ್ಯೂಎಗಳು ಅಸ್ತಿತ್ವದಲ್ಲಿಲ್ಲ ಎಂಬುದೂ ಕೂಡ ಗಮನಾರ್ಹ ವಿಚಾರವಾಗಿದೆ. 

ಹೋರಾಟಗಾರ್ತಿ ಕಾತ್ಯಾಯಿಣಿ ಚಾಮರಾಜ್ ಅವರು ಮಾತನಾಡಿ, ಕೊರೋನಾ ನಿರ್ವಹಿಸಲು ವಾರ್ಡ್ ಮಟ್ಟದ ವಿಪತ್ತು ನಿರ್ವಹಣಾ ಸಮಿತಿಗಳ ರಚನೆಯ ಅವಶ್ಯಕತೆಯಿದೆ. ಸ್ಥಳೀಯ ಸಮಿತಿಗಳ ರಚನೆಗೆ ಸರ್ಕಾರ ಕೇರಳ ಮಾದರಿಯನ್ನು ಅನುಸರಿಸುತ್ತಿದೆ. ಆದರೆ, ನಮ್ಮಲ್ಲಿ ಸಹಕಾರದ ಕೊರತೆಗಳಿವೆ. ಶಾಸಕರು ಹಾಗೂ ಸಂಸದರು ಸಮಿತಿ ರಚನೆ ಮಾಡಲಾಗಿದೆ ಎಂದರೆ, ಬಿಬಿಎಂಪಿ ಅಧಿಕಾರಿಗಳು ರಚನೆ ಮಾಡಲಾಗಿದೆ ಎಂದು ಹೇಳುತ್ತಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com