ಎನ್‌ಎಚ್‌ಎಂ ಆಯುಷ್ ವೈದ್ಯರ ವೇತನ 6 ತಿಂಗಳವರೆಗೆ ಏರಿಸಲು ಸರ್ಕಾರ ನಿರ್ಧಾರ

ಎನ್ ಹೆಚ್ ಎಂ ಅಡಿ ಕೆಲಸ ಮಾಡುವ ವೈದ್ಯರು ಮತ್ತು ಸಿಬ್ಬಂದಿಗೆ 25 ಸಾವಿರ ಇದ್ದ ವೇತನವನ್ನು 45 ಸಾವಿರಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರದಿಂದಲೇ ಮುಂದಿನ ಆರು ತಿಂಗಳವರೆಗೆ ವೇತನ ನೀಡಲು ನಿರ್ಧರಿಸಲಾಗಿದೆ ಎಂದು ವೈದ್ಯಕೀ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಎನ್ ಹೆಚ್ ಎಂ ಅಡಿ ಕೆಲಸ ಮಾಡುವ ವೈದ್ಯರು ಮತ್ತು ಸಿಬ್ಬಂದಿಗೆ 25 ಸಾವಿರ ಇದ್ದ ವೇತನವನ್ನು 45 ಸಾವಿರಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರದಿಂದಲೇ ಮುಂದಿನ ಆರು ತಿಂಗಳವರೆಗೆ ವೇತನ ನೀಡಲು ನಿರ್ಧರಿಸಲಾಗಿದೆ ಎಂದು ವೈದ್ಯಕೀ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

"ರಾಷ್ಟ್ರೀಯ ಆರೋಗ್ಯ ಮಿಷನ್‌ ಯೋಜನೆ ಅನ್ವಯ ಕೆಲಸ ಮಾಡುತ್ತಿದ್ದ ವೈದ್ಯರಿಗೆ ವೇತನ ಹೆಚ್ಚಳ ಮಾಡಲು ಕಾರ್ಯಪಡೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮಾಸಿಕ 45 ರಿಂದ 48 ಸಾವಿರ ರೂ. ವರೆಗೆ ವೇತನ ನೀಡಲಾಗುವುದು. ಅದೇ ರೀತಿ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳದ ಬಗ್ಗೆಯೂ ಚರ್ಚೆ ನಡೆದಿದೆ," ಎಂದು ಹೇಳಿದರು

“ಸಾಮಾನ್ಯವಾಗಿ, ಎನ್‌ಎಚ್‌ಎಂ ಅಡಿಯಲ್ಲಿ ಕೆಲಸ ಮಾಡುವವರಿಗೆ, ಶೇಕಡಾ 60 ರಷ್ಟು ಸಂಬಳವನ್ನು ಕೇಂದ್ರ ಮತ್ತು ಶೇ.40 ರಷ್ಟು ರಾಜ್ಯಸರ್ಕಾರ ನೀಡುತ್ತದೆ. ಆದಾಗ್ಯೂ, ಆರು ತಿಂಗಳವರೆಗೆ, ರಾಜ್ಯ ಸರ್ಕಾರವು ಸಂಪೂರ್ಣ ವೇತನ ನೀಡುತ್ತದೆ ಎಂದು ಹೇಳಿದ್ದಾರೆ. ಆರು ತಿಂಗಳ ನಂತರ ವೇತರ ಹೆಚ್ಚಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಸರ್ಕಾರದ ನಿರ್ಧಾರದ ಬಗ್ಗೆ ಸಂಪೂರ್ಣ ಸ್ಪಷ್ಟತೆ ಪಡೆಯುವವರೆಗೂ ಮುಷ್ಕರವನ್ನು ಮುಂದುವರಿಸುವುದಾಗಿ ಕರ್ನಾಟಕ ಆಯುಷ್ ವೈದ್ಯಕೀಯ ಅಧಿಕಾರಿಗಳ ಸಂಘದ ಸದಸ್ಯ ಡಾ.ಬಿ.ಎಸ್.ಮಧುಕರ್ ತಿಳಿಸಿದ್ದಾರೆ. ತಮ್ಮ ಸಂಘಕ್ಕೆ ಕರ್ನಾಟಕದ 27,000 ಆಯುಷ್ ವೈದ್ಯರು ಬೆಂಬಲವಿದ್ದು, ಮಂಗಳವಾರ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರನ್ನು ಭೇಟಿಯಾದ ನಂತರ ಮುಂದಿನ ಪ್ರತಿಭಟನೆ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದ್ದಾರೆ.

ಆಯುಷ್ ವೈದ್ಯರು ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸುಮಾರು 14 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಅಲ್ಪ ವೇತನಕ್ಕೆ ಕೆಲಸ ನಿರ್ವಹಿಸುತ್ತಿದ್ದಾರೆ. ಉದ್ಯೋಗ ಕಾಯಂ, ವೇತನ ಹೆಚ್ಚಳ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com