ವಾಟ್ಸಪ್ ನಲ್ಲಿ ಹಿಂದೂ ದೇವತೆಗಳ ಅವಹೇಳನ: ಶಾಸಕ ನಿರಾಣಿ ಕ್ಷಮೆಯಾಚನೆ 

ತಮ್ಮ ವಾಟ್ಸ್ ಅಪ್ ಮೂಲಕ ಹಿಂದೂ ದೇವ ದೇವತೆಗಳ ಅವಹೇಳನ ಮಾಡಲಾಗಿದೆ ಎಂಬ ವಿವಾದಾಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಕ್ಷಮೆಯಾಚಿಸಿದ್ದಾರೆ. ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಕೆಲವು ಸ್ಥಳೀಯ ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದು, ಪ್ರಾಥಮಿಕ ಮತ್ತು ಪ್ರೌ ಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ವಾಟ್ಸಪ್ ಗ್ರೂಪ್ ನಲ್ಲಿ ಪೋಸ್ಟ್ ಮಾಡಿದ್ದ ಬಳಿಕ ಆ
ಮುರುಗೇಶ್  ನಿರಾಣಿ
ಮುರುಗೇಶ್ ನಿರಾಣಿ

ಬೆಂಗಳೂರು: ತಮ್ಮ ವಾಟ್ಸ್ ಅಪ್ ಮೂಲಕ ಹಿಂದೂ ದೇವ ದೇವತೆಗಳ ಅವಹೇಳನ ಮಾಡಲಾಗಿದೆ ಎಂಬ ವಿವಾದಾಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಕ್ಷಮೆಯಾಚಿಸಿದ್ದಾರೆ. ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಕೆಲವು ಸ್ಥಳೀಯ ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದು, ಪ್ರಾಥಮಿಕ ಮತ್ತು ಪ್ರೌ ಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ವಾಟ್ಸಪ್ ಗ್ರೂಪ್ ನಲ್ಲಿ ಪೋಸ್ಟ್ ಮಾಡಿದ್ದ ಬಳಿಕ ಆ ಗ್ರೂಪ್ ತೊರೆದಿದ್ದಾರೆ.

ಮಾಜಿ ಸಚಿವ ನಿರಾಣಿ ಈ ಸಂಬಂಧ  ಸಾರ್ವಜನಿಕ ಕ್ಷಮೆಯಾಚಿಸುವ ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಆದಾಗ್ಯೂ, ಸಂದೇಶವನ್ನು ಅವರು ಫಾರ್ವರ್ಡ್ ಮಾಡಿಲ್ಲ ಮತ್ತು ಅದನ್ನು ಅವರ ವೈಯಕ್ತಿಕ ಸಹಾಯಕ (ಪಿಎ) ಉದ್ದೇಶಪೂರ್ವಕವಾಗಿ ಮಾಡಿರಬಹುದು ಎಂದು ಹೇಳಿದ್ದಾರೆ. . "ಸಾರ್ವಜನಿಕ ಸಂಪರ್ಕದ ಉದ್ದೇಶಕ್ಕಾಗಿ, ನನ್ನ ಪಿಎ ಮತ್ತು ಗನ್‌ಮ್ಯಾನ್ ಈ ಸಂಖ್ಯೆಯನ್ನು ಬಳಸುತ್ತಾರೆ. ನಿನ್ನೆ ರಾತ್ರಿ ಫೋನ್ ನನ್ನ ಪಿಎ ಜೊತೆಗಿತ್ತು. ನಿರ್ಲಕ್ಷ್ಯದಿಂದಾಗಿ, ಎಲ್ಲಿಂದಲೋ ಬಂದ ಸಂದೇಶವು ಫಾರ್ವರ್ಡ್ ಆಗಿದ್ದು, ದೊಡ್ಡ ವಿವಾದ ಸೃಷ್ಟಿಸಿದೆ.  ಆದರೆ ಇದು  ಉದ್ದೇಶಪೂರ್ವಕವಾಗಿ ಫಾರ್ವರ್ಡ್ ಆದ ಸಂದೇಶವಲ್ಲ. ಆದರೂ ನನ್ನಿಂದಾದ ತಪ್ಪಿಗೆ  ಕ್ಷಮೆಯಾಚಿಸುತ್ತೇನೆ.  ನಾನು ರಾಜ್ಯದ ಜನರಿಗೆ ಕ್ಷಮೆಯಾಚಿಸುತ್ತೇನೆ "ಎಂದು ಅವರು ಹೇಳಿದರು.

ಬಿಳಗಿ ಕ್ಷೇತ್ರವನ್ನು  ಪ್ರತಿನಿಧಿಸುವ ನಿರಾಣಿ ತಾನು ಎಲ್ಲ ಧರ್ಮಗಳ ಬಗ್ಗೆ ಸಹಿಷ್ಣುನಾಗಿರುತ್ತೇನೆ ಮತ್ತು ಧರ್ಮ ಅಥವಾ ನಂಬಿಕೆಯ ಬಗ್ಗೆ ಎಂದಿಗೂ ಲಘುವಾಗಿ ಮಾತನಾಡಲಿಲ್ಲ, 'ಸನಾತನ ಧರ್ಮದಲ್ಲಿ ತನಗೆ ಅತ್ಯಂತ ಗೌರವ ಮತ್ತು ಭಕ್ತಿ ಇದೆ ಎಂದು ಹೇಳಿದರು. "ಹಿಂದೂ ಆಗಿ, ನನ್ನ ಧರ್ಮದ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಪಿಎ ವಿವೇಚನಾರಹಿತರಾಗಿ ಈ ತಪ್ಪನ್ನು ಮಾಡಿದ್ದಾರೆ. ನನ್ನ ಸಿಬ್ಬಂದಿ ಮತ್ತು ನನ್ನ ಪರವಾಗಿ  ನಾನು ಮತ್ತೊಮ್ಮೆ ಕ್ಷಮೆಯಾಚಿಸುತ್ತೇನೆ. ಮತ್ತಷ್ಟು ವಿವಾದ ಮಾಡಬೇಡಿರಿ, ಹೆಚ್ಚಿನ ಗೊಂದಲಗಳನ್ನು ಸೃಷ್ಟಿಸಬೇಡಿ. ಇದು ಮತ್ತೆ ಸಂಭವಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾನು ಎಚ್ಚರಿಕೆಯಿಂದ ಮುಂದುವರಿಯುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ "ಎಂದು ಅವರು ಹೇಳಿದರು.

ಈ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿಧಾನಸಭೆ ಪ್ರತಿಪಕ್ಷ ನಾಯಕ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ  "ಇದಕ್ಕೆ ನಿರಾಣಿ ಸ್ಪಷ್ತನೆ ನೀಡಬೇಕಿದೆ, "ದೇವರನ್ನು ಅವಮಾನಿಸುವುದು ದೇವರನ್ನು ನಂಬುವ ಪ್ರತಿಯೊಬ್ಬ ವ್ಯಕ್ತಿಯನ್ನು  ಅವಮಾನಿಸಿದಂತೆ.  ಅದು ಜನರ ಮನಸ್ಸಿಗೆ ನೋವನ್ನು ತರುತ್ತದೆ." ಎಂದು  ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com