ಆರೋಗ್ಯ ಸಿಬ್ಬಂದಿಗಳಿಗೆ ಪ್ರತ್ಯೇಕವಾಗಿ ಕೋವಿಡ್ ಕೇಂದ್ರ ತೆರೆದ ಬಾಗಲಕೋಟೆ ವೈದ್ಯರು!

ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡುತ್ತಿರುವ ಆರೋಗ್ಯ ಸಿಬ್ಬಂದಿಗಳಲ್ಲಿ ಸೋಂಕು ಹೆಚ್ಚಾಗಿ ಕಾಡಲು ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ವೈದ್ಯರು, ಅವರ ಕುಟುಂಬ ಸದಸ್ಯರು ಹಾಗೂ ಇತರೆ ಆರೋಗ್ಯ ಸಿಬ್ಬಂದಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿಯೇ ಪ್ರತ್ಯೇಕವಾಗಿ ಕೋವಿಡ್ ಕೇಂದ್ರವನ್ನು ತೆರೆಯಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾಗಲಕೋಟೆ: ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡುತ್ತಿರುವ ಆರೋಗ್ಯ ಸಿಬ್ಬಂದಿಗಳಲ್ಲಿ ಸೋಂಕು ಹೆಚ್ಚಾಗಿ ಕಾಡಲು ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ವೈದ್ಯರು, ಅವರ ಕುಟುಂಬ ಸದಸ್ಯರು ಹಾಗೂ ಇತರೆ ಆರೋಗ್ಯ ಸಿಬ್ಬಂದಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿಯೇ ಪ್ರತ್ಯೇಕವಾಗಿ ಕೋವಿಡ್ ಕೇಂದ್ರವನ್ನು ತೆರೆಯಲಾಗಿದೆ. 

ಈ ಕೋವಿಡ್ ಕೇಂದ್ರ ಕೇಂದ್ರಗಳಲ್ಲಿ 40 ಹಾಸಿಗೆಗಳ ಈ ಸೌಲಭ್ಯದಲ್ಲಿ ವೈದ್ಯರು ಮೊದಲ ತಿಂಗಳಿಗೆ ರೂ. 20,000 ಮತ್ತು ನಂತರದ ತಿಂಗಳುಗಳಲ್ಲಿ ರೂ. 12,000 ರಂತೆ 150 ಖಾಸಗಿ ವೈದ್ಯರು ನೋಂದಾಯಿಸಿಕೊಂಡಿದ್ದರೆ, ಇನ್ನೂ 20 ಮಂದಿಯನ್ನು ನೋಂದಾಯಿಸಿಕೊಳ್ಳುವ ನಿರೀಕ್ಷೆಗಳಿವೆ ಎಂದು ಬಾಗಲಕೋಟೆ ವೈದ್ಯರ ಕೋವಿಡ್ ಕೇರ್ ಕೇಂದ್ರ ತಂಡದ ಅಧ್ಯಕ್ಷ ಡಾ.ಎಸ್. ಎಲ್ ಪಾಟೀಲ್ ತಿಳಿಸಿದ್ದಾರೆ.

ದಾಖಲು ಮಾಡಿಕೊಂಡ ವೈದ್ಯರು ಕೊರೋನಾ ಆರೈಕೆ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿಗಳು ಕೆಲಸ ಮಾಡುವಂತೆ ಕಡ್ಡಾಯಗೊಳಿಸಲಾಗಿದೆ. ಆರೋಗ್ಯ ಸಿಬ್ಬಂದಿಗಳಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ರೂ.5 ಲಕ್ಷ ವಿಮೆ ಜೊತೆಗೆ ಉತ್ತಮ ವೇತನ ಮತ್ತು ಉತ್ತಮ ಗುಣಮಟ್ಟದ ಪಿಪಿಇ ಕಿಟ್ ಗಳು, ವಸತಿ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದಿದ್ದಾರೆ. 

ಗದಗ, ಬಳ್ಳಾರಿ ಮತ್ತು ತುಮಕೂರು ಸೇರಿದಂತೆ ಅನೇಕ ಜಿಲ್ಲೆಗಳ ಖಾಸಗಿ ವೈದ್ಯರು ಕಳಪೆ ಮಟ್ಟದ ಚಿಕಿತ್ಸೆಯನ್ನು ಎದುರಿಸಿದ ಬಳಿಕ ಇದೀಗ ವಿಶೇಷ ಕೊರೋನಾ ಆರೈಕೆ ಕೇಂದ್ರಗಳನ್ನು ಆರಂಭಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com