ಬೆಂಗಳೂರು ಅನ್ ಲಾಕ್ಡ್: ಮಾರುಕಟ್ಟೆಗಳಲ್ಲಿ ನಿರ್ಬಂಧ ಮುಂದುವರಿಕೆ, ನಿಯಮ ಪಾಲಿಸದಿದ್ದರೆ ಭಾರಿ ದಂಡ

ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಬೆಂಗಳೂರು, ಗ್ರಾಮಾಂತರ ಜಿಲ್ಲೆಗಳಲ್ಲಿ ಹೇಲಾಗಿದ್ದ ಲಾಕ್‌ಡೌನ್‌ನನ್ನು ಸರ್ಕಾರ ಹಿಂತೆಗೆದುಕೊಂಡಿದ್ದು, ಕಂಟೈನ್ ಮೆಂಟ್ ಝೋನ್ ಮತ್ತು ಪ್ರಮುಖ ಮಾರುಕಟ್ಟೆಗಳನ್ನು ಹೊರತುಪಡಿಸಿ ಉಳಿದೆಲ್ಲ ಪ್ರದೇಶಗಳನ್ನು ಜನಸಂಚಾರಕ್ಕೆ ಮುಕ್ತಗೊಳಿಸಿದೆ.
ಕೆಆರ್ ಮಾರುಕಟ್ಟೆ
ಕೆಆರ್ ಮಾರುಕಟ್ಟೆ

ಬೆಂಗಳೂರು: ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಬೆಂಗಳೂರು, ಗ್ರಾಮಾಂತರ ಜಿಲ್ಲೆಗಳಲ್ಲಿ ಹೇಲಾಗಿದ್ದ ಲಾಕ್‌ಡೌನ್‌ನನ್ನು ಸರ್ಕಾರ ಹಿಂತೆಗೆದುಕೊಂಡಿದ್ದು, ಕಂಟೈನ್ ಮೆಂಟ್ ಝೋನ್ ಮತ್ತು ಪ್ರಮುಖ ಮಾರುಕಟ್ಟೆಗಳನ್ನು ಹೊರತುಪಡಿಸಿ ಉಳಿದೆಲ್ಲ ಪ್ರದೇಶಗಳನ್ನು ಜನಸಂಚಾರಕ್ಕೆ ಮುಕ್ತಗೊಳಿಸಿದೆ.

ಇಂದು ಬೆಳಗ್ಗೆ 5ಗಂಟೆಗೆ ಲಾಕ್ ಡೌನ್ ಅವಧಿ ಮುಕ್ತಾಯವಾಗಿದ್ದು ಬೆಂಗಳೂರು ಲಾಕ್‌ಡೌನನಿಂದ ಬಿಡುಗಡೆಯಾಗಿದೆ. ಲಾಕ್‌ಡೌನ್‌ ತೆರವಾಗಿದೆ ಎಂದು ಜನರ ಮುಕ್ತ ಸಂಚಾರಕ್ಕೆ ಸರ್ಕಾರ ಅವಕಾಶ ಸಿಕ್ಕಿಲ್ಲ. ಬದಲಾಗಿ ನೂತನ ಮಾರ್ಗಸೂಚಿ ಬಿಡುಗಡೆ ಮಾಡಿ ಇಂದಿವಿಂದ ರಾತ್ರಿ ಕರ್ಫ್ಯೂ, ಭಾನುವಾರ ಲಾಕ್​ಡೌನ್​ ಮುಂದುರೆಸುವ ಮೂಲಕ ನಿರ್ಬಂಧ ಹೇರಿದೆ.

ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಪ್ಯೂ ಜಾರಿಗೊಳಿಸಲಾಗಿದೆ. ಅಂತೆಯೇ ಭಾನುವಾರ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಅಂತೆಯೇ ಜನಸಂದಣಿಯನ್ನು ತಡೆಯುವ ನಿಟ್ಟಿನಲ್ಲಿ ತರಕಾರಿ ಮಾರುಕಟ್ಟೆ, ಬೆಂಗಳೂರು ಅಲ್ಲದೆ ಜಿಲ್ಲೆ,ತಾಲೂಕು ಮಟ್ಟದಲ್ಲಿ ಎಪಿಎಂಸಿ ಅಥವಾ ಸೂಕ್ತ ವಿಶಾಲ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ. ಉದ್ಯಾನವನಗಳಲ್ಲಿ ಜಿಮ್, ಸಲಕರಣೆಗಳು ಮತ್ತು ಕುಳಿತುಕೊಳ್ಳಲು ಬೆಂಚ್ ಗಳನ್ನು ಬಳಸುವುದನ್ನು ನಿಷೇದಿಸಿ ಅದೇಶ ಹೊರಿಡಿಸಿದ್ದಾರೆ.

ಪ್ರಮುಖವಾಗಿ ಕಂಟೈನ್ ಮೆಂಟ್ ಝೋನ್ ಗಳಲ್ಲಿ ನಿರ್ಬಂಧ ಮುಂದುವರೆದಿದ್ದು, ನಗರದ ಕೇಂದ್ರ ಭಾಗದಲ್ಲಿರುವ ಕೆಆರ್ ಮಾರುಕಟ್ಟೆಯಲ್ಲಿನ ನಿರ್ಬಂಧವನ್ನು ಮುಂದುವರೆದಿದೆ. ಆದರೆ ಲಾಕ್ ಡೌನ್ ತೆರವಾಗಿರುವ ಹಿನ್ನಲೆಯಲ್ಲಿ ಕೆಆರ್ ಮಾರುಕಟ್ಟೆಯ ಕಾಂಪ್ಲೆಕ್ಸ್ ಹೊರತು ಪಡಿಸಿ ಉಳಿದ ಪ್ರದೇಶಳಗಳಲ್ಲಿ ಫುಟ್ ಪಾತ್ ಮತ್ತು ತಳ್ಳುವ ಗಾಡಿಗಳಲ್ಲಿ ವ್ಯಾಪಾರಕ್ಕೆ ಷರತ್ತುಬದ್ಧ ಅನುವು ಮಾಡಿಕೊಡಲಾಗಿದೆ. ಇನ್ನು ಯಶವಂತಪುರ ಎಪಿಎಂಸಿ, ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆ, ಚಿಕ್ಕಪೇಟೆಗಳಲ್ಲಿನ ನಿರ್ಬಂಧ ಜುಲೈ 31ರವೆರೆಗೂ ಮುಂದುವರೆದಿದೆ. ಆದರೆ ಹಬ್ಬದ ಸೀಸನ್ ಆದ್ದರಿಂದ ಚಿಕ್ಕಪೇಟೆಯಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಡುವಂತೆ ಚಿಕ್ಕಪೇಟೆ ವ್ಯಾಪಾರಿಗಳ ಒಕ್ಕೂಟ ಸರ್ಕಾರಕ್ಕೆ ಆಗ್ರಹಿಸಿದೆ.

ಕೋವಿಡ್-19 ನಿಯಮ ಪಾಲಿಸದಿದ್ದರೆ ಭಾರಿ ದಂಡ
ಇನ್ನು ಬೆಂಗಳೂರಿನಲ್ಲಿ ಅನ್ ಲಾಕ್ ಗೆ ಆದೇಶ ನೀಡಿದೆಯಾದರೂ, ಕೋವಿಡ್-19 ಮುಂಜಾಗ್ರತಾ ನಿಯಮವಾಳಿ ಪಾಲನೆ ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು ಕಡ್ಡಾಯವಾಗಿದೆ. ಅಂತೆಯೇ ಇನ್ನು ಮುಂದೆ ಈ ನಿಯಮಗಳು ಮತ್ತಷ್ಟು ಕಠಿಣವಾಗಲಿದ್ದು, ಈ ಹಿಂದೆ ಮಾಸ್ಕ್ ಧರಿಸದಿದ್ದರೆ ಮತ್ತು ಸಾಮಾಜಿಕ ಅಂತರ ಪಾಲಿಸದಿದ್ದರೆ 100 ರೂಗಳನ್ನು ದಂಡವಾಗಿ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ಇದೇ ಮೊತ್ತವನ್ನು 500 ರೂಗೆ ಏರಿಕೆ ಮಾಡಲಾಗಿದೆ. ಹೀಗಾಗಿ ಸಾರ್ವಜನಿಕರು ತಮ್ಮ ಜೇಬಿಗೆ ಕತ್ತರಿ ಹಾಕಿಸಿಕೊಳ್ಳುವ ಬದಲು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕಿದೆ. ಇದೇ ಕಾರ್ಯಕ್ಕಾಗಿಯೇ ನಗರದಲ್ಲಿ ಮಾರ್ಷಲ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂಬ ಸುದ್ದಿ ಕೂಡ ಬಿಬಿಎಂಪಿ ವತಿಯಿಂದ ಕೇಳಿ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com