ನಾವು 1 ರೂಪಾಯಿಯನ್ನೂ ಪಡೆಯುವುದಿಲ್ಲ: 100ಕ್ಕೂ ಹೆಚ್ಚು ಕೋವಿಡ್ ಮೃತರ ಅಂತ್ಯಕ್ರಿಯೆ ನಡೆಸಿದ ಸ್ವಯಂ ಸೇವಕರು

ಕೊರೋನಾ ಸಂಕಷ್ಟ ಕಾಲದಲ್ಲಿ ಮೃತರ ಅಂತ್ಯಸಂಸ್ಕಾರ ನಡೆಸುವುದಕ್ಕೆ ಸಂಬಂಧಿಕರೂ ಹಿಂದೆ ಮುಂದೆ ನೋಡುತ್ತಿರುವ ಸನ್ನಿವೇಶ ಸೃಷ್ಟಿಯಾಗಿದೆ. ಆದರೆ 23 ಯುವಕರ ತಂಡವೊಂದು ಎನ್ ಜಿಒ ಕಟ್ಟಿಕೊಂಡು ಸ್ಮಶಾನದಲ್ಲಿ ಹಗಲಿರುಳು ಮೃತರ ಅಂತ್ಯಸಂಸ್ಕಾರಕ್ಕೆ ನೆರವಾಗುತ್ತಿದೆ.
ನಾವು 1 ರೂಪಾಯಿಯನ್ನೂ ಪಡೆಯುವುದಿಲ್ಲ: 100ಕ್ಕೂ ಹೆಚ್ಚು ಕೋವಿಡ್ ಮೃತರ ಅಂತ್ಯಕ್ರಿಯೆ ನಡೆಸಿದ ಸ್ವಯಂ ಸೇವಕರು
ನಾವು 1 ರೂಪಾಯಿಯನ್ನೂ ಪಡೆಯುವುದಿಲ್ಲ: 100ಕ್ಕೂ ಹೆಚ್ಚು ಕೋವಿಡ್ ಮೃತರ ಅಂತ್ಯಕ್ರಿಯೆ ನಡೆಸಿದ ಸ್ವಯಂ ಸೇವಕರು

ಕೊರೋನಾ ಸಂಕಷ್ಟ ಕಾಲದಲ್ಲಿ ಮೃತರ ಅಂತ್ಯಸಂಸ್ಕಾರ ನಡೆಸುವುದಕ್ಕೆ ಸಂಬಂಧಿಕರೂ ಹಿಂಜರಿಯುತ್ತಿರುವ ಸನ್ನಿವೇಶ ಸೃಷ್ಟಿಯಾಗಿದೆ. ಆದರೆ 23 ಯುವಕರ ತಂಡವೊಂದು ಎನ್ ಜಿಒ ಕಟ್ಟಿಕೊಂಡು ಸ್ಮಶಾನದಲ್ಲಿ ಹಗಲಿರುಳು ಮೃತರ ಅಂತ್ಯಸಂಸ್ಕಾರಕ್ಕೆ ನೆರವಾಗುತ್ತಿದೆ.
 
ಕೋವಿಡ್-19 ಸೋಂಕಿನಿಂದ ಮೃತಪಟ್ಟ 100 ಕ್ಕೂ ಹೆಚ್ಚು ಅಂತ್ಯ ಸಂಸ್ಕಾರಗಳನ್ನು ವಾಸಿಮ್ ಝುಬೈರ್ ಸೇರಿದಂತೆ 22 ಯುವಕರ ತಂಡ ನಡೆಸಿದೆ. ಆದರೆ ಇದಕ್ಕಾಗಿ ಯಾವುದೇ ಶುಲ್ಕವನ್ನು ತೆಗೆದುಕೊಳ್ಳದೇ ಇರುವುದು ಈ ಯುವಕರ ಹೆಗ್ಗಳಿಕೆ    

ಬೆಳಗಿನ ಜಾವ ಪ್ರಾರ್ಥನೆ ಸಲ್ಲಿಸಿದ ಬಳಿಕ 5:30 ಕ್ಕೆ ಕುದ್ದೂಸ್ ಸಾಹೇಬ್ ಈದ್ಗಾರ್ ನಲ್ಲಿರುವ ಸ್ಮಶಾನಕ್ಕೆ ತೆರಳಲಿರುವ ಯುವಕರ ತಂಡ ರಾತ್ರಿ 10:00 ಗಂಟೆಯವರೆಗೂ ಅಲ್ಲೇ ಇದ್ದು ಪಿಪಿಇ ಕಿಟ್ ಧರಿಸಿ ನಿಯಮ, ಮಾರ್ಗಸೂಚಿಗಳಿಗೆ ಅನುಸಾರ ಶವಗಳ ಅಂತ್ಯ ಸಂಸ್ಕಾರ ನಡೆಸಿ ವಿಧಿವತ್ತಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಪ್ರತಿ ಶವಗಳ ಅಂತ್ಯಸಂಸ್ಕಾರದ ನಂತರವೂ ಒಂದೊಂದು ಪಿಪಿಇ ಕಿಟ್ ಗಳನ್ನು ಧರಿಸಬೇಕಾಗುತ್ತದೆ. ಈ ಶ್ರಮದಾಯಕ ಕೆಲಸದ ಬಗ್ಗೆ ಸ್ವತಃ ವಾಸಿಂ ಮತ್ತು ಆತನ ತಂಡದವರು ತಮ್ಮನ್ನು ಈ ಸೇವಾ ಕಾರ್ಯಕ್ಕೆ ಪ್ರೇರಿಪಿಸಿದ್ದು ಏನು ಎಂಬುದರ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ಸ್ಥಳೀಯರು ತಮ್ಮ ಸಂಬಂಧಿಕರ ಅಂತ್ಯಸಂಸ್ಕಾರ ನಡೆಸಲು ಪಟ್ಟ ಕಷ್ಟಗಳನ್ನು ಗಮನಿಸಿದ್ದೆವು, ಕೊರೋನಾ ವೈರಸ್ ಗೆ ಹೆದರಿ ಸಂಬಂಧಿಕರ ಸಾವಿಗೆ ಅಂತ್ಯ ಕಡಿಮೆ ಜನ ಬರುತ್ತಿದ್ದರು. ಇದರಿಂದಾಗಿ ಅಂತ್ಯಸಂಸ್ಕಾರ ನಡೆಸುವುದು ಕಷ್ಟವಾಗುತ್ತಿತ್ತು, ಅವರ ಅಸಹಾಯಕತೆ, ಮಾನಸಿಕ ವೇದನೆಯನ್ನು ಕಂಡು ಅವರಿಗೆ ಸಹಾಯ ಮಾಡಬೇಕೆನ್ನಿಸಿದ ಕಾರಣ ಈ ಕೆಲಸ ಮಾಡುತ್ತಿದ್ದೇವೆ, ಇದರಿಂದ ಮನಸ್ಸಿಗೆ ಸಿಗುವ ಸಮಾಧಾನ ಸಾಟಿಯಿಲ್ಲದ್ದು ಎಂದು ಹೇಳಿದ್ದಾರೆ. ವಾಸೀಮ್ ಹಾಗೂ ತಂಡದವರು ಈ ವರೆಗೂ 100 ಕ್ಕೂ ಹೆಚ್ಚು ಶವಗಳ ಅಂತ್ಯಸಂಸ್ಕಾರ ನಡೆಸಿದ್ದಾರೆ.

ತಂದೆಯ ಅಂತ್ಯಸಂಸ್ಕಾರ ನಡೆಸಲು ಮಗ ಮುಂದಾಗದಂತಹ ಕೊರೋನಾ ಭೀತಿಯನ್ನು ನಾವು ಕಂಡಿದ್ದೇವೆ. ಅಂತ್ಯ ಸಂಸ್ಕಾರದ ವೇಳೆ ಜಾಗವನ್ನು ನೆನಪಿಡುವುದಕ್ಕಾಗಿ ಇಬ್ಬರು ಕುಟುಂಬ ಸದಸ್ಯರನ್ನು ನಮ್ಮೊಂದಿಗೆ ಕರೆದೊಯ್ಯುತ್ತೆವೆ ಅವರಿಗೂ ಪಿಪಿಇ ಕಿಟ್ ಗಳನ್ನು ನೀಡುತ್ತೇವೆ, ಎನ್ನುತ್ತಾರೆ ತಂಡದ ಸದಸ್ಯ ಮುಜೀಬ್, "ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡೇ ಅಂತ್ಯಸಂಸ್ಕಾರ ನಡೆಸುತ್ತೇವೆ, ಪಿಪಿಇ ಕಿಟ್ ಗಳಿಗೆ ನಾವೇ ಹಣ ಹೊಂದಿಸಿಕೊಳ್ಳುತ್ತೇವೆ. ಕೆಲವೊಮ್ಮೆ ಜನರು ಒಂದಷ್ಟು ಕಿಟ್ ಗಳನ್ನು ನಮಗೆ ನೀಡುತ್ತಾರೆ, ನಾವು ಯಾವುದೇ ಕುಟುಂಬದಿಂದಲೂ ಒಂದು ರೂಪಾಯಿಯನ್ನೂ ಪಡೆಯುವುದಿಲ್ಲ ಎಂದು  ವಸೀಮ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com