ಕೊರೋನಾದಿಂದ ಗುಣಮುಖರಾದ ಎಸಿಪಿ ಸತೀಶ್ ಅವರಿಂದ ಪ್ಲಾಸ್ಮಾ ದಾನ

ಕೊರೋನಾ ಸೋಂಕು ಕಾಲಿಟ್ಟ ನಂತರ ಕರ್ತವ್ಯ ನಿಷ್ಠೆ, ಮಾನವೀಯತೆಗೆ ಸಾಕ್ಷಿಯಾದ ನಗರದ ಪೊಲೀಸರು ಇದೀಗ ಸೋಂಕಿನಿಂದ ಗುಣಮುಖರಾಗಿ ಬಂದ ನಂತರವೂ ಪ್ಲಾಸ್ಮಾ ದಾನದ ಮೂಲಕ  ಮತ್ತೊಬ್ಬರ ಜೀವ ರಕ್ಷಣೆಗೆ ಆದ್ಯತೆ ನೀಡಿದ್ದಾರೆ. 
ಎಸಿಪಿ ಸತೀಶ್
ಎಸಿಪಿ ಸತೀಶ್

ಬೆಂಗಳೂರು: ಕೊರೋನಾ ಸೋಂಕು ಕಾಲಿಟ್ಟ ನಂತರ ಕರ್ತವ್ಯ ನಿಷ್ಠೆ, ಮಾನವೀಯತೆಗೆ ಸಾಕ್ಷಿಯಾದ ನಗರದ ಪೊಲೀಸರು
ಇದೀಗ ಸೋಂಕಿನಿಂದ ಗುಣಮುಖರಾಗಿ ಬಂದ ನಂತರವೂ ಪ್ಲಾಸ್ಮಾ ದಾನದ ಮೂಲಕ  ಮತ್ತೊಬ್ಬರ ಜೀವ ರಕ್ಷಣೆಗೆ ಆದ್ಯತೆ 
ನೀಡಿದ್ದಾರೆ. 

ಕೋವಿಡ್-19 ವಿರುದ್ಧದ ಸಮರ ಗೆದ್ದಿರುವ ಎಸಿಪಿ ಸತೀಶ್,  ತಮ್ಮ ಜೀವ ಮತ್ತೊಬ್ಬರ ಜೀವ ಉಳಿಯಲಿ ಎನ್ನುವ ಧೋರಣೆಯಿಂದ ಸಮಾಜ ಮುಖಿ ಕಾರ್ಯದಲ್ಲಿ ನಿರತರಾಗಿದ್ದಾರೆ.

ನಗರ ಸಂಚಾರ ವಿಭಾಗದ ಎಸಿಪಿ‌ ಸತೀಶ್ ಅವರು ಇತ್ತೀಚೆಗೆ ಕೊರೋನಾ ಯುದ್ಧದಲ್ಲಿ ಜಯಶಾಲಿಯಾಗಿದ್ದರು. ಇದೀಗ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಪ್ಲಾಸ್ಮಾ ದಾನ ಮಾಡಿದ್ದಾರೆ.

ಎಸಿಪಿ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಪೊಲೀಸ್ ಸಿಬ್ಬಂದಿ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com