ಕೋವಿಡ್‌ ಸೋಂಕಿತ ವ್ಯಕ್ತಿಯ ಮನೆ ಬಾಗಿಲಿಗೆ ತಗಡಿನ ಶೀಟ್: ಬಿಬಿಎಂಪಿ ಆಯುಕ್ತರ ಕ್ಷಮೆಯಾಚನೆ

ಶಾಂತಿನಗರ ಕ್ಷೇತ್ರದ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಕೋವಿಡ್‌ ದೃಢಪಟ್ಟಿ ವ್ಯಕ್ತಿಯ ಮನೆ ಬಾಗಿಲಿಗೆ ತಗಡಿನ ಶೀಟ್‌ಗಳನ್ನು ಹಾಕಿ ಸೀಲ್‌ಡೌನ್‌ ಮಾಡಿದ ಬಿಬಿಎಂಪಿ ಸಿಬ್ಬಂದಿ ಪರವಾಗಿ ಆಯುಕ್ತ ಎನ್‌.ಮಂಜುನಾಥ್ ಪ್ರಸಾದ್ ಕ್ಷಮೆಯಾಚಿಸಿದ್ದಾರೆ.
ಮನೆ ಬಾಗಿಲಿಗೆ ತಗಡಿನ ಶೀಟ್
ಮನೆ ಬಾಗಿಲಿಗೆ ತಗಡಿನ ಶೀಟ್

ಬೆಂಗಳೂರು: ಶಾಂತಿನಗರ ಕ್ಷೇತ್ರದ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಕೋವಿಡ್‌ ದೃಢಪಟ್ಟಿ ವ್ಯಕ್ತಿಯ ಮನೆ ಬಾಗಿಲಿಗೆ ತಗಡಿನ ಶೀಟ್‌ಗಳನ್ನು ಹಾಕಿ ಸೀಲ್‌ಡೌನ್‌ ಮಾಡಿದ ಬಿಬಿಎಂಪಿ ಸಿಬ್ಬಂದಿ ಪರವಾಗಿ ಆಯುಕ್ತ ಎನ್‌.ಮಂಜುನಾಥ್ ಪ್ರಸಾದ್ ಕ್ಷಮೆಯಾಚಿಸಿದ್ದಾರೆ.

ಈ ಕುರಿತು ಶುಕ್ರವಾರ ಟ್ವೀಟ್ ಮಾಡಿದ ಅವರು, ಕೋವಿಡ್‌ ಸೋಂಕಿತರ ವಿರುದ್ಧ ಯಾವುದೇ ತಾರತಮ್ಯ ತಡೆಯಲು ನಾವು ಬದ್ಧರಾಗಿದ್ದೇವೆ. "ಸ್ಥಳೀಯ ಸಿಬ್ಬಂದಿಯ ಅತಿ ಹೆಚ್ಚಿನ ಉತ್ಸಾಹಕ್ಕೆ ಕ್ಷಮೆಯಾಚಿಸುತ್ತೇನೆ" ಎಂದಿದ್ದಾರೆ.

"ತಕ್ಷಣವೇ ತಗಡಿನ ಶೀಟ್ ಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ. ಪ್ರತಿ ವ್ಯಕ್ತಿಯನ್ನು ಕೂಡ ಗೌರವದಿಂದ ಕಾಣಲು ನಾವು ಬದ್ಧರಾಗಿದ್ದೇವೆ. ಕಂಟೈನ್ಮೆಂಟ್‌ ಉದ್ದೇಶವೆಂದರೆ ಸೋಂಕಿತರನ್ನು ರಕ್ಷಿಸಲು ಮತ್ತು ಸೋಂಕಿತರಲ್ಲದವರು ಸುರಕ್ಷಿತರಾಗಿರುವುದನ್ನು ಖಾತರಿಪಡಿಸಿಕೊಳ್ಳುವುದಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.

ಗುರುವಾರ ಪಾಲಿಕೆ ಅಧಿಕಾರಿಗಳ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸತೀಶ್‌ ಸಂಗಮೇಶ್ವರನ್ ಎಂಬುವರು ಟ್ವೀಟ್‌ ಮಾಡಿ ‘ಕೊರೊನಾ ನಿಯಂತ್ರಣಕ್ಕೆ ಕಂಟೈನ್‌ಮೆಂಟ್‌ ಮಾಡಬೇಕು ನಿಜ. ಅದರೆ, ಇದು ಅತಿರೇಕದ ಪರಮಾವಧಿ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಪ್ರಕರಣದ ಸಂಬಂಧ ಪಾಲಿಕೆ ಆಯುಕ್ತರ ಸೂಚನೆ ಮೇರೆಗೆ ಪೂರ್ವ ವಲಯದ ಜಂಟಿ ಆಯುಕ್ತರು ಕಾರ್ಯಪಾಲಕ ಎಂಜಿನಿಯರ್‌ ರಾಧಾಕೃಷ್ಣ ಅವರಿಗೆ ಷೋಕಾಸ್‌ ನೋಟಿಸ್ ಜಾರಿಗೊಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com