ಅಯೋಧ್ಯಾ ರಾಮಮಂದಿರ ನಿರ್ಮಾಣಕ್ಕೆ ಕಾವೇರಿ ಜಲ, ಕೊಡಗಿನ ಮಣ್ಣು ಸಂಗ್ರಹ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಿಸಲು ಕೊಡಗಿನ ಪವಿತ್ರ ಕಾವೇರಿ ನದಿಯ ನೀರು ಹಾಗೂ ಮಣ್ಣು ಸಂಗ್ರಹಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಡಿಕೇರಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಿಸಲು ಕೊಡಗಿನ ಪವಿತ್ರ ಕಾವೇರಿ ನದಿಯ ನೀರು ಹಾಗೂ ಮಣ್ಣು ಸಂಗ್ರಹಿಸಲಾಗಿದೆ. 

ಪವಿತ್ರವೆಂದು ಪರಿಗಣಿಸಲ್ಪಟ್ಟಿರುವ ಕಾವೇರಿ ನದಿಯಿಂದ ನೀರು ಮತ್ತು ಕಾವೇರಿ ನದಿಯ ಜನ್ಮ ಜಿಲ್ಲೆಯಾದ ಕೊಡಗಿನಿಂದ ಮಣ್ಣನ್ನು ಸಂಗ್ರಹಿಸಿದ್ದು, ಆಗಸ್ಟ್ 5 ರಂದು ರಾಮಮಂದಿರ ನಿರ್ಮಾಣಕ್ಕಾಗಿ ನಡೆಯಲಿರುವ ಭೂಮಿ ಪೂಜೆಗಾಗಿ ಅಯೋಧ್ಯೆಗೆ ಕಳುಹಿಸಲಾಗುತ್ತದೆ. 

ಕಾವೇರಿ ನದಿಯ ಜನ್ಮಸ್ಥಳವಾದ ತಲಕಾವೇರಿ ಕ್ಷೇತ್ರದಲ್ಲಿ ಭಜರಂಗದಳ, ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಜಾಗರಣ ವೇದಿಕೆ ಕಾರ್ಮಿಕರು ಕಾವೇರಿ ನದಿಯಿಂದ ಮಣ್ಣು ಮತ್ತು ನೀರನ್ನು ಸಂಗ್ರಹಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಕಾಲಿಕವಾಗಿ ಪೂರ್ಣಗೊಳಿಸಬೇಕೆಂದು ಪ್ರಾರ್ಥಿಸಿ, ತಲಕಾವೆರಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಅಯೋಧ್ಯೆಯ ವಿಷಯದಲ್ಲಿ ನ್ಯಾಯ ದೊರಕಿದೆ ಎಂದು ತಲಾ ಕಾವೇರಿ ಕ್ಷೇತ್ರ ಮುಖ್ಯ ಅರ್ಚಕ ನಾರಾಯಣ ಆಚಾರ್ಯ ಹೇಳಿದ್ದು, ಈ ಕುರಿತು ಮಾತನಾಡಿದ ಎಂಎಲ್ ಸಿ ಸುನೀಲ್ ಸುಬ್ರಮಣಿ, “ರಾಮ ಮಂದಿರವನ್ನು ನಿರ್ಮಿಸುವ ಕನಸು ನನಸಾಗುತ್ತಿದೆ”. ಅವರು 1992 ರಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com