ಕೊರೋನಾ ಕವಚ: ವಿಮಾ ಕಂಪೆನಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಬಿಎಂಪಿ

ವಿಮೆ ಇದೆ ಎಂಬ ಕಾರಣಕ್ಕೆ ಆಸ್ಪತ್ರೆಗಳು ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಬಾರದು ಮತ್ತು ವಿಮೆ ಸೌಲಭ್ಯದಿಂದ ರೋಗಿಗಳು ವಂಚಿತರಾಗಬಾರದು ಎಂಬ ಕಾರಣಕ್ಕೆ ಬಿಬಿಎಂಪಿ ಕೋವಿಡ್-19 ಚಿಕಿತ್ಸೆಗೆ ವಿಮಾ ಸೌಲಭ್ಯ ನೀಡುವ ಸಂಸ್ಥೆಗಳ ಪಟ್ಟಿಯನ್ನು ಪಾಲಿಕೆ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಬಿಡುಗಡೆ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಮೆ ಇದೆ ಎಂಬ ಕಾರಣಕ್ಕೆ ಆಸ್ಪತ್ರೆಗಳು ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಬಾರದು ಮತ್ತು ವಿಮೆ ಸೌಲಭ್ಯದಿಂದ ರೋಗಿಗಳು ವಂಚಿತರಾಗಬಾರದು ಎಂಬ ಕಾರಣಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕೋವಿಡ್-19 ಚಿಕಿತ್ಸೆಗೆ ವಿಮಾ ಸೌಲಭ್ಯ ನೀಡುವ ಸಂಸ್ಥೆಗಳ ಪಟ್ಟಿಯನ್ನು ಪಾಲಿಕೆ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಬಿಡುಗಡೆ ಮಾಡಿದ್ದಾರೆ.

ಅದರಲ್ಲಿ ರೋಗಿಗಳಿಗೆ ಎಷ್ಟು ವಿಮಾ ಹಣ ಸಿಗುತ್ತದೆ ಮತ್ತು ಎಷ್ಟು ಸಮಯಗಳೊಳಗೆ ಬಿಡುಗಡೆ ಮಾಡಬೇಕೆಂದು ಸಹ ಇದೆ. ಪಟ್ಟಿಯಲ್ಲಿ ಸಾಮಾನ್ಯ ಮತ್ತು ಆರೋಗ್ಯ ವಿಮಾ ಸಂಸ್ಥೆಗಳಾದ ಎಸ್ ಬಿಐ, ಅಕೊ, ಆದಿತ್ಯ ಬಿರ್ಲಾ, ಬಜಾಜ್ ಅಲಯನ್ಸ್, ಭಾರ್ತಿ ಎಎಕ್ಸ್ ಎ, ಕೊಲಮನಡಲಮ್ ಎಂಎಸ್, ಎಡೆಲ್ ವೈಸ್ಸ್, ಫ್ಯೂಚರ್, ಗೊ ಡಿಜಿಟ್, ಹೆಚ್ ಡಿಎಫ್ ಸಿ ಎರ್ಗೊ, ಐಸಿಐಸಿಐ ಲೊಂಬಾರ್ಡ್, ಐಎಫ್ಎಫ್ ಸಿಒ,ಟೊಕಿಯೊ, ಕೊಟಾಕ್ ಮಹೀಂದ್ರ, ಲಿಬರ್ಟಿ, ಮಗ್ಮಾ ಹೆಚ್ ಡಿಐ, ಮಣಿಪಾಲ್ ಸಿಗ್ನಾ, ಮ್ಯಾಕ್ಸ್ ಬೂಪಾ, ನವಿ, ರಹೇಜಾ ಕ್ಯುಬಿಇ, ರಿಲಯನ್ಸ್, ರೆಲಿಗರೆ, ರಾಯಲ್ ಸುಂದರಮ್, ಸ್ಟಾರ್ ಹೆಲ್ತ್ ಅಂಡ್ ಅಲ್ಲೈಡ್, ಟಾಟಾ ಎಐಜಿ, ನ್ಯೂ ಇಂಡಿಯಾ ಅಶ್ಯೂರೆನ್ಸ್, ದ ಓರಿಯೆಂಟಲ್, ಯುನೈಟೆಡ್ ಇಂಡಿಯಾ, ಯೂನಿವರ್ಸಲ್ ಸೊಂಪೊ ಕಂಪೆನಿಗಳಿವೆ.

ಕೊರೋನಾ ಕವಚದಡಿ ನಾಗರಿಕರಿಗೆ 50 ಸಾವಿರದಿಂದ 5 ಲಕ್ಷಗಳವರೆಗೆ ವಿಮಾ ಹಣ ಚಿಕಿತ್ಸೆಗೆ ಸಿಗಲಿದ್ದು ಮೂರೂವರೆ ತಿಂಗಳಿನಿಂದ ಒಂಭತ್ತೂವರೆ ತಿಂಗಳವರೆಗೆ ಪಾಲಿಸಿ ಅವಧಿಯಿರುತ್ತದೆ. 18ರಿಂದ 65 ವರ್ಷದೊಳಗಿನವರು ಪಾಲಿಸಿ ಹಣವನ್ನು ಪಡೆಯಲು ಅರ್ಹರಾಗಿದ್ದು ಅವರ ಅವಲಂಬಿತರಿಗೂ ಸಹ ಸಿಗುತ್ತದೆ. ಕೋವಿಡ್-19ನಿಂದ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗುವವರಿಗೆ ಈ ವಿಮೆ ಸೌಲಭ್ಯ ದೊರಕುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com