ಚಿತ್ರದುರ್ಗದಲ್ಲಿ 400 ಪೊಲೀಸರಿಗೆ ಹೋಮ್ ಕ್ವಾರಂಟೈನ್: ಕರ್ತವ್ಯಕ್ಕೆ ಸಿಬ್ಬಂದಿ ಕೊರತೆ

ಕೊರೋನಾದಿಂದಾಗಿ 400 ಪೊಲೀಸರು ಹೋಮ್ ಕ್ವಾರಂಟೈನ್ ನಲ್ಲಿದ್ದು ಜಿಲ್ಲೆಯಲ್ಲಿ ಭದ್ರತೆಗೆ ಸಿಬ್ಬಂದಿ ಕೊರತೆ ಎದುರಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿತ್ರದುರ್ಗ: ಕೊರೋನಾದಿಂದಾಗಿ 400 ಪೊಲೀಸರು ಹೋಮ್ ಕ್ವಾರಂಟೈನ್ ನಲ್ಲಿದ್ದು ಜಿಲ್ಲೆಯಲ್ಲಿ ಭದ್ರತೆಗೆ ಸಿಬ್ಬಂದಿ ಕೊರತೆ ಎದುರಾಗಿದೆ. 

ಜಿಲ್ಲಾ ಸೂಪರಿಂಡೆಂಟ್ ರಾಧಿಕಾ ತಮ್ಮ ಸಿಬ್ಬಂದಿಯ ರಕ್ಷಣೆಗಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ, ತಮ್ಮ ಭದ್ರತೆಗಾಗಿ ಇರುವ ಸಿಬ್ಬಂದಿಯನ್ನು ಬೇರೆ ಕರ್ತವ್ಯಕ್ಕಾಗಿ ನೇಮಿಸಿದ್ದಾರೆ. ಜಿಲ್ಲಾ ಶಸಸ್ತ್ರ ಪಡೆಯ ಇಬ್ಬರು ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಡಿಎಆರ್ ಕಚೇರಿ ಸೀಲ್ ಡೌನ್ ಮಾಡಲಾಗಿದೆ.

ಹೊಸದುರ್ಗ ತಾಲೂಕಿನಲ್ಲಿರುವ ಎರು ಪೊಲೀಸ್ ಠಾಣೆಗಳನ್ನು ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರಿಸಲಾಗಿದೆ, ಇದರ ಜೊತೆಗೆ ರಾಮಪುರ ಠಾಣೆ, ಮೊಳಕಾಲ್ಮೂರು ಮತ್ತು ಚಿಕ್ಕಜಾಜೂರು ಪೊಲೀಸ್ ಠಾಣೆಯನ್ನು ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡಲಾಗಿದೆ, ಎಲ್ಲಾ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ ಎಲ್ಲಾ  ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ರಾಮಪುರ, ಶ್ರೀರಾಮಪುರ, ಹೊಸದುರ್ಗ, ಮತ್ತು ಚಿಕ್ಕ ಜಾಜೂರು ಠಾಣೆ ವ್ಯಾಪ್ತಿಗಳಿಗೆ ಬರುವ 400 ಪೊಲೀಸ್ ಸಿಬ್ಬಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಜಿಲ್ಲಾ ಎಸ್ ಪಿ ಜಿ ರಾಧಿಕಾ ಹೇಳಿದ್ದಾರೆ, ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ, 26 ಜನರನ್ನು ಪರೀಕ್ಷೆಗಳಿಗೆ ಗುರುತಿಸಲಾಗಿದೆ ಮತ್ತು ವರದಿಯನ್ನು ಕಾಯಲಾಗುತ್ತಿದೆ ಎಂದು ಹೇಳಿದ್ದಾರೆ. ಕಾಫಿ ಮತ್ತು ಟೀ ಬದಲು  ಪೊಲೀಸ್ ಠಾಣೆಯಲ್ಲಿ ಕಷಾಯ ನೀಡಲಾಗುತ್ತಿದೆ.

ಪೊಲೀಸ್ ಸಿಬ್ಬಂದಿ ಬದಲು  ಹೋಮ್ ಗಾರ್ಡ್ ಗಳನ್ನು ನೇಮಿಸಲಾಗಿದೆ,ಕಾನೂನು ಮತ್ತು ಸುವ್ಯವಸ್ಥೆ  ಕಾಪಾಡಲು 2000 ಹೋಮ್ ಗಾರ್ಡ್ ಗಳನ್ನು ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ, ನನ್ನ ವಯಕ್ತಿಕ ಸಿಬ್ಬಂದಿಯನ್ನು ರಕ್ಷಿಸುವುದು ನನ್ನ ಕರ್ತವ್ಯವಾಗಿದೆ, ಆದ್ದರಿಂದ ಪ್ರತಿದಿನ ಅಧಿಕಾರಿಗಳು ಆಮ್ಲಜನಕದ ಮಟ್ಟವನ್ನು ಗುರುತಿಸಲು ನಾಡಿ ಮೀಟರ್  ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. ಸಾಮಾನ್ಯಕ್ಕಿಂತ ಕಡಿಮೆ ಇದ್ದರೇ ಅವರಿಗೆ ಕೊರೋನಾ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com