ಕೊರೋನಾ ಎಫೆಕ್ಟ್: ಪ್ರಯಾಣಿಕರ ಸುರಕ್ಷತೆಗಾಗಿ ಎಸಿ ತಾಪಮಾನ 25 ಡಿಗ್ರಿಗೆ ಇಳಿಸಿದ ಕೆಐಎ

ತಂಪು ಹಾಗೂ ಶೀತ ವಾತಾವರಣದಲ್ಲಿ ಕೊರೋನಾ ಪರಿಣಾಮ ಹೆಚ್ಚಾಗುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಕೆಂಪೇಗೌಡ ವಿಮಾನ ನಿಲ್ದಾಣವು ಎಸಿ ತಾಪಮಾನವನ್ನು 25 ಡಿಗ್ರಿಗೆ ನಿಗದಿಪಡಿಸಿದೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತಂಪು ಹಾಗೂ ಶೀತ ವಾತಾವರಣದಲ್ಲಿ ಕೊರೋನಾ ಪರಿಣಾಮ ಹೆಚ್ಚಾಗುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಕೆಂಪೇಗೌಡ ವಿಮಾನ ನಿಲ್ದಾಣವು ಎಸಿ ತಾಪಮಾನವನ್ನು 25 ಡಿಗ್ರಿಗೆ ನಿಗದಿಪಡಿಸಿದೆ ಎಂದು ತಿಳಿದುಬಂದಿದೆ. 

ಈ ಕುರಿತು ಬೆಂಗಲೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ವಕ್ತಾರರು ಮಾಹಿತಿ ನೀಡಿದ್ದು, ಕೊರೋನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಶಿಫಾರಸು ಮಾಡಿರುವ 24-30 ಡಿಗ್ರಿ ತಾಪಮಾನದಂತೆ ವಿಮಾನ ನಿಲ್ದಾಣದಲ್ಲಿ 23 ಡಿಗ್ರಿ ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.
 
ಹವಾನಿಯಂತ್ರಿತ ಸ್ಥಳಗಳಲ್ಲಿ ಮಾರ್ಗಸೂಚಿಗಳು ಅನುಗುಣವಾಗುತ್ತದೆ. ವ್ಯವಹಾರಗಳು ಚುರುಕುಗೊಂಡಿದ್ದು, ಈಗಾಗಲೇ ಇತ್ತೀಚೆಗೆ ಥೈಲ್ಯಾಂಡ್‌ನಿಂದ ಆಗಮಿಸಿದ ವಿಶೇಷವಾದ ಮೀನುಗಳನ್ನು ಕೇರಳ ರಾಜ್ಯದ ಕೋಝಿಕೋಡ್'ಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com