ಗಂಟಲು ದ್ರವ ಪರೀಕ್ಷೆ ವೇಳೆ ಮೈಸೂರು ಡಿಸಿ ಮೊಬೈಲ್ ನಂಬರ್ ನೀಡಿ ಯಾಮಾರಿಸಿದಸೋಂಕಿತ!

"ನಿಮಗೆ ಕೊರೋನಾ ಪಾಸಿಟಿವ್ ಬಂದಿದೆ. ನೀವಿಗ ಎಲ್ಲಿದ್ದೀರಾ?ನಿಮ್ಮನ್ನು ಆಸ್ಪತ್ರೆಗೆ ದಾಖಲಿಸಬೇಕು.
ಅಭಿರಾಮ್ ಜಿ ಶಂಕರ್
ಅಭಿರಾಮ್ ಜಿ ಶಂಕರ್

ಮೈಸೂರು: "ನಿಮಗೆ ಕೊರೋನಾ ಪಾಸಿಟಿವ್ ಬಂದಿದೆ. ನೀವಿಗ ಎಲ್ಲಿದ್ದೀರಾ?
ನಿಮ್ಮನ್ನು ಆಸ್ಪತ್ರೆಗೆ ದಾಖಲಿಸಬೇಕು. ಇಲ್ಲದಿದ್ದಲ್ಲಿ ನೀವೆ ಕ್ವಾರಂಟೈನ್ ಗೆ ಒಳಗಾಗಿ ಎಂದು
ಮೈಸೂರು ಜಿಲ್ಲಾ ಕೋವಿಡ್ ಕಂಟ್ರೋಲ್ ರೂಂನಿಂದ ಬಂದ ಒಂದು ಕರೆ ಜಿಲ್ಲಾಡಳಿತವನ್ನೇ ಆತಂಕ
ಮತ್ತು ಅಚ್ಚರಿಗೆ ಒಳಗಾಗುವಂತೆ ಮಾಡಿದೆ. 

ಕೊರೋನಾ ಕಂಟ್ರೋಲ್ ರೂಂ ಸಿಬ್ಬಂದ್ದಿ ಕರೆ ಮಾಡಿದ್ದು ಬೇರೆ ಯಾರಿಗೂ ಅಲ್ಲ ಮೈಸೂರು
ಜಿಲ್ಲೆಯ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಗೆ. ಕಂಟ್ರೋ ಲ್ ರೂಂ ಕರೆ ಸ್ವೀಕರಿಸಿದ ಜಿಲ್ಲಾಧಿಕಾರಿ
ಸಿಬ್ಬಂದಿ ಮಾತನ್ನು ಕೇಳಿ ಅಚ್ಚರಿಗೊಂಡ ಜಿಲ್ಲಾಧಿಕಾರಿ "ನನಗೆ ಪಾಸಿಟಿವ್ ಇದ್ಯಾ? ನಾನೇ ರೀ
ಜಿಲ್ಲಾಧಿಕಾರಿ ಮಾತಾಡ್ತಾ ಇದ್ದೀನಿ, ಎಂದಿದ್ದಾರೆ. ಜೊತೆಗೆ ಜಿಲ್ಲಾಧಿಕಾರಿಯ ಮಾತು ಕೇಳಿ ತಬ್ಬಿಬ್ಬಾದ ಕಂಟ್ರೋಲ್ ರೂಂ ಸಿಬ್ಬಂದಿಗಳು ಒಂದು ಕ್ಷಣ ಆಶ್ಚರ್ಯ ಮತ್ತು ಆತಂಕಕ್ಕೂ ಒಳಗದರು.

ಕೋವಿಡ್ ಪರೀಕ್ಷೆ ವೇಳೆ ಸೋಂಕಿತರು ಫೋನ್,ವಿಳಾಸ, ಮತ್ತಿತರ ಮಾಹಿತಿಗಳನ್ನು ನಿಗದಿತ ನಮೂನೆಯ ಫಾರಂನಲ್ಲಿ ತನ್ನ ದೂರವಾಣಿ ನಂಬರ್ ಬದಲು ಜಿಲ್ಲಾಧಿಕಾರಿ ನಂಬರ್ ಕೊಟ್ಟು
ಕೋವಿಡ್ ಸೋಂಕಿತನೊಬ್ಬ ಅಧಿಕಾರಿಗಳನ್ನು ಯಾಮಾರಿಸಿದ್ದಾನೆ.

ಹೆಬ್ಬಾಳದ ನಿವಾಸಿಯೊಬ್ಬ ಗಂಟಲು ದ್ರವ ಸಂಗ್ರಹ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾಗ ಇಂತಹ ಎಡವಟ್ಟನ್ನು ಮಾಡಿದ್ದಾನೆ. ಈತನ ಸೋಂಕು ಪರೀಕ್ಷಾ ವರದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದರಿಂದ ಆತ ಕೊಟ್ಟಿದ್ದ ನಂಬರ್​ಗೆ ಸಿಬ್ಬಂದಿ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಮಾತನಾಡಿ ತಾವೇ ಜಿಲ್ಲಾಧಿಕಾರಿ ಎಂದಾಗ ಸತ್ಯಾಂಶ ತಿಳಿದ ಕೋವಿಡ್ ಕೇರ್ ಸೆಂಟರ್ ಅಧಿಕಾರಿಗಳು ಗಾಬರಿ ಬಿದ್ದಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಕಂಟ್ರೋಲ್ ರೂಂ
ನಿಂದ ಕರೆ ಮಾಡಿ ʻಸರ್ ನಿಮಗೆ ಕೋವಿಡ್ ಪಾಸಿಟಿವ್ ಬಂದಿದೆ. ನೀವು ತಕ್ಷಣ ಕ್ವಾರಂಟೈನ್ಗೆ
ಒಳಗಾಗಿ ಇಲ್ಲದಿದ್ದಲ್ಲಿ ನಮ್ಮ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿಲಿದ್ದಾರೆ ಎಂದು ಹೇಳಿದ್ದನ್ನು ಕೇಳಿ ನನಗೆ
ಆಶ್ಚರ್ಯ ಆಯಿತು. ಮಾಹಿತಿ ಸಂಗ್ರಹಿಸುವ ವೇಳೆ ಸೋಂಕಿತ ವ್ಯಕ್ತಿ ತಮ್ಮ ನಂಬರ್
ಕೊಟ್ಟಿರುವುದಾಗಿ ವೈದ್ಯಕೀಯ ಸಿಬ್ಬಂದಿ ತಿಳಿಸಿದರು. ಕ್ವಾರಂಟೈನ್​ಗೆ ಒಳಗಾಗುವುದು ಮತ್ತು
ಆಸ್ಪತ್ರೆಗೆ ದಾಖಲಾಗುವುದರಿಂದ ತಪ್ಪಿಸಿಕೊಳ್ಳಲು ಕೆಲವು ಸೋಂಕಿತರು ಏನೆಲ್ಲ ಕೆಲಸ
ಮಾಡುತ್ತಾರೆ ಎಂಬುದನ್ನು ತಿಳಿದು ಒಂದು ಕ್ಷಣ ನನಗೆ ಅಚ್ಚರಿಯಾಯಿತು. ಜೊತೆಗೆ ನಗು ಬಂತು
ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

"ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಲರ ಸಹಕಾರ ನೀಡಬೇಕು. ಸೂಕ್ತ ಮಾಹಿತಿ
ನೀಡಬೇಕು. ಒಂದು ವೇಳೆ ಸಂಪರ್ಕಿಸುವ ಮಾಹಿತಿ ತಪ್ಪಾದರೆ ಕೊರೋನಾ ಸೋಂಕಿತರ
ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಗುರುತಿಸುವುದು ಕಷ್ಟವಾಗಲಿದೆ. ದಾರಿ ತ0ಪ್ಪಿಸುವ ಕೆಲಸ
ಬಿಟ್ಟು ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಜನತೆ ಜಿಲ್ಲಾಡಳಿತಕ್ಕೆ ಸಹಕಾರ
ನೀಡಿ ಎಂದು ಅವರು ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com