ಮೆಟ್ರೋ ಸುರಂಗ ಮಾರ್ಗದಲ್ಲಿನ ನಿಲ್ದಾಣಗಳ ಕಾಮಗಾರಿ ಆರಂಭ

80 ಕಾರ್ಮಿಕರಿಗೆ ಕೋವಿಡ್ ಪಾಸಿಟಿವ್ ಬಂದ ನಂತರ ನಮ್ಮ ಮೆಟ್ರೋ ಎರಡನೇ ಹಂತದ ನಾಗವಾರ- ಗೊಟ್ಟಿಗೆರೆಮಾರ್ಗದ ಸುರಂಗ ಮಾರ್ಗದ  ಕಾಮಗಾರಿ ಸ್ಥಗಿತಗೊಂಡಿದ್ದು, ನೆರೆಹೊರೆಯ ಮಾರ್ಗದಲ್ಲಿನ ಕಾಮಗಾರಿಗಳು ಪ್ರಗತಿಯಲ್ಲಿವೆ.
ಫಿಲ್ಲಿಂಗ್ ಕಾಮಗಾರಿ ಆರಂಭದ ಚಿತ್ರ
ಫಿಲ್ಲಿಂಗ್ ಕಾಮಗಾರಿ ಆರಂಭದ ಚಿತ್ರ

ಬೆಂಗಳೂರು: 80 ಕಾರ್ಮಿಕರಿಗೆ ಕೋವಿಡ್ ಪಾಸಿಟಿವ್ ಬಂದ ನಂತರ ನಮ್ಮ ಮೆಟ್ರೋ ಎರಡನೇ ಹಂತದ ನಾಗವಾರ- ಗೊಟ್ಟಿಗೆರೆ
ಮಾರ್ಗದ ಸುರಂಗ ಮಾರ್ಗದ  ಕಾಮಗಾರಿ ಸ್ಥಗಿತಗೊಂಡಿದ್ದು, ನೆರೆಹೊರೆಯ ಮಾರ್ಗದಲ್ಲಿನ ಕಾಮಗಾರಿಗಳು ಪ್ರಗತಿಯಲ್ಲಿವೆ.

 ಶಿವಾಜಿನಗರ- ಟ್ಯಾನರಿ ರಸ್ತೆ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿಯೂ ಕೋವಿಡ್ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ
 ಕಾಮಗಾರಿಗೆ ಅಡ್ಡಿಯುಂಟಾಗಿದೆ. ರೀಚ್ 6 ಮಾರ್ಗದಲ್ಲಿನ ಇತರ ಮೂರು ಸಿಗ್ಮೆಟ್ ಗಳ ಕಾಮಗಾರಿ ಪ್ರಗತಿಯಲ್ಲಿದೆ.

ಜಯನಗರ ಅಗ್ನಿ  ಶಾಮಕ ನಿಲ್ದಾಣ ಮತ್ತು ವೆಲ್ಲಾರ ರಸ್ತೆ ಜಂಕ್ಷನ್ ನಡುವಿನ 3.6 ಕಿಲೋ ಮೀಟರ್ ದೂರದ ಪಿಲ್ಲಿಂಗ್ ಕಾಮಗಾರಿ ಇತ್ತೀಚಿಗೆ ಆರಂಭವಾಗಿದೆ. ಸುರಂಗ ಮಾರ್ಗ ಕಾಮಗಾರಿ ಆರಂಭಕ್ಕೂ ಮುನ್ನಾ ಭದ್ರವಾದ ಅಡಿಪಾಯ ಹಾಕಬೇಕಾದ ಅಗತ್ಯವಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಯನಗರ ಅಗ್ನಿಶಾಮಕ ನಿಲ್ದಾಣ, ಡೈರಿ ಸರ್ಕಲ್ ,ಲಕ್ಕಸಂದ್ರ ಮೆಟ್ರೋ ನಿಲ್ದಾಣಗಳ ಫಿಲ್ಲಿಂಗ್ ಕಾಮಗಾರಿ ಆರಂಭವಾಗಿದೆ. ನಾಲ್ಕು ಸುರಂಗ ಕೊರೆಯುವ ಯಂತ್ರಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಮತ್ತೊಂದು ಮಾರ್ಗದ ಕಾಮಗಾರಿಯ ವಿವರ ನೀಡಿದ ಮತ್ತೋರ್ವ ಅಧಿಕಾರಿ, 3.65 ಕಿಲೋ ಮೀಟರ್ ದೂರದ ಕಾಮಗಾರಿಯನ್ನು ಅಪ್ಕಾನ್ಸ್  ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಗೆ ನೀಡಲಾಗಿದೆ ಎಂದು ತಿಳಿಸಿದರು.

 ಡೇರಿ ವೃತ್ತದ ಸೌತ್‌ರ್‍ಯಾಂಪ್‌ ನಂತರ ಬರುವ ಸ್ವಾಗತ್‌ ರಸ್ತೆಯ ಎತ್ತರಿಸಿದ ಮಾರ್ಗದಿಂದ ವೆಲ್ಲಾರ ಜಂಕ್ಷನ್‌ ವರೆಗೆ
 1,526.33 ಕೋಟಿ ವೆಚ್ಚದಲ್ಲಿಸುರಂಗ ನಿರ್ಮಾಣಗೊಳ್ಳುತ್ತಿದೆ.ನಾಲ್ಕು ಪ್ಯಾಕೇಜ್ ನಲ್ಲಿ 4.59 ಕಿ.ಮೀ. ಉದ್ದದಲ್ಲಿ ಡೇರಿ ವೃತ್ತ,
ಮೈಕೋ ಇಂಡಸ್ಟ್ರೀಸ್‌ ಮತ್ತು ಲ್ಯಾಂಗೊರ್ಡ್‌ ಟೌನ್‌ ಎಂಬ 3 ಸುರಂಗ ನಿಲ್ದಾಣ ಬರಲಿವೆ.  ಸುಮಾರು 1,771 ಕೋಟಿ ವೆಚ್ಚದ
ಟ್ಯಾನರಿ ರಸ್ತೆ -ನಾಗವಾರ ನಿಲ್ದಾಣ ಕಾಮಗಾರಿಯನ್ನು ಐಟಿಡಿ ಸೆಮೆನ್ಸನ್ ಇಂಡಿಯಾ ಲಿಮಿಟೆಡ್ ಕಂಪನಿ ಕಾಮಗಾರಿ ಆರಂಭಿಸಿದೆ.

ಪ್ಯಾಕೇಜ್ 2 ರ (ವೆಲ್ಲಾರ ಜಂಕ್ಷನ್- ಶಿವಾಜಿನಗರ ) ಮತ್ತು ಪ್ಯಾಕೇಜ್ 3ರ ( ಶಿವಾಜಿನಗರ- ಪಾಟರಿ ಟೌನ್ )  ನಡುವಣ
ಕಾಮಗಾರಿಯನ್ನು ಎಲ್ ಅಂಡ್ ಟಿ ಲಿಮಿಟೆಡ್ ಕಂಪನಿ ಗುತ್ತಿಗೆ ಪಡೆದಿದ್ದು, ನೆಲದಾಳದಲ್ಲಿನ ಸುರಂಗ ಮತ್ತು ನಿಲ್ದಾಣಗಳ ವಿನ್ಯಾಸ
ಮತ್ತು ಕಾಮಗಾರಿ ನಿರ್ಮಾಣದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. 2024ರೊಳಗೆ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಯನ್ನು
ಮುಕ್ತಾಯಗೊಳಿಸಲು ಗಡುವು ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com