ಕಡ್ಡಿ ತೆಗೆದುಕೊಂಡು ಕಿವಿಯ ತುರಿಕೆ ನಿವಾರಿಸಿಕೊಂಡ ಆನೆಗಳು; ವಿಡಿಯೋ ವೈರಲ್

ತುರಿಕೆ ನಿವಾರಣೆಗೆ ನಾವು ಮನುಷ್ಯರು ಯಾವುದಾದರೂ ವಸ್ತುಗಳನ್ನು ಬಳಸಿಕೊಂಡು ತುರಿಕೆ ನಿವಾರಿಸಿಕೊಳ್ಳುತ್ತೇವೆ. ಆದರೆ ಇದೇ ಕಾರ್ಯವನ್ನು ಇದೀಗ ಆನೆಗಳೂ ಕೂಡ ಮಾಡುತ್ತಿವೆಯೇ..? ಎಂಬ ಪ್ರಶ್ನೆ ಮೂಡುತ್ತದೆ.
ಕಿವಿ ತುರಿಸಿಕೊಂಡ ಆನೆ
ಕಿವಿ ತುರಿಸಿಕೊಂಡ ಆನೆ

ಬೆಂಗಳೂರು: ತುರಿಕೆ ನಿವಾರಣೆಗೆ ನಾವು ಮನುಷ್ಯರು ಯಾವುದಾದರೂ ವಸ್ತುಗಳನ್ನು ಬಳಸಿಕೊಂಡು ತುರಿಕೆ ನಿವಾರಿಸಿಕೊಳ್ಳುತ್ತೇವೆ. ಆದರೆ ಇದೇ ಕಾರ್ಯವನ್ನು ಇದೀಗ ಆನೆಗಳೂ ಕೂಡ ಮಾಡುತ್ತಿವೆಯೇ..? ಎಂಬ ಪ್ರಶ್ನೆ ಮೂಡುತ್ತದೆ.

ಹೌದು..ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿರುವ ಆನೆಗಳು ಬಾಯಿ, ಕಿವಿ, ಮೈಮೇಲಿನ ತುರಿಕೆ ನಿವಾರಿಸಿಕೊಳ್ಳಲು ಕಡ್ಡಿಯನ್ನು ಬಳಸಿಕೊಂಡಿರುವ ವಿಡಿಯೊ ಸದ್ಯ ವೈರಲ್‌ ಆಗುತ್ತಿದೆ. ಆನೆಗಳು ಮೈಯಲ್ಲಿನ ತುರಿಕೆ ನಿವಾರಿಸಿಕೊಳ್ಳಲು ಕಡ್ಡಿಯನ್ನು ಬಳಿಸಿರುವ ಅಪರೂಪದ ಪ್ರಸಂಗ ಇದೀಗ ಭಾರಿ ವೈರಲ್ ಆಗುತ್ತಿದೆ. ಸುಂದರ್ ಮತ್ತು ಮೇನಕಾ ಎಂಬ ಆನೆಗಳು ಕಡ್ಡಿಯಿಂದ ತುರಿಕೆ ನಿವಾರಣೆ ಮಾಡಿಕೊಳ್ಳುತ್ತಿವೆ.

ಈ ಹಿಂದೆ ಮೊದಲು ಸುಂದರ್ ಎಂಬ 20 ವರ್ಷದ ಗಂಡು ಆನೆ ಕಡ್ಡಿಯಿಂದ ತನ್ನ ಕಿವಿಯನ್ನು ಕೆರೆದುಕೊಂಡಿತ್ತು, ಆ ಬಳಿಕ ಅದರ ಸಂಗಾತಿ ಆನೆ ಮೇನಕಾ ಕೂಡ ರೆಂಬೆಯಿಂದ ತನ್ನ ಕುತ್ತಿಗೆಯನ್ನು ತುರಿಸಿಕೊಂಡು ತುರಿಕೆ ನಿವಾರಣೆ ಮಾಡಿಕೊಂಡಿದೆ. ಆನೆಗಳ ಈ ನಡೆ ಪ್ರಾಣಿ ಪಾಲಕರು, ಮೃಗಾಲಯದ ಅಧಿಕಾರಿಗಳು ಮತ್ತು ಜೀವಶಾಸ್ತ್ರಜ್ಞರನ್ನು ಅಚ್ಚರಿಗೊಳಿಸಿದೆ.

ಈ ಬಗ್ಗೆ ಮಾತನಾಡಿರುವ ಬಿಬಿಬಿಪಿಯ ಶಿಕ್ಷಣ ಅಧಿಕಾರಿ ಮತ್ತು ಪ್ರಾಣಿಗಳ ನಡವಳಿಕೆ ವಿಶ್ಲೇಷಕರಾದ ಆಮ್ಲಾ ಎಂ ಅನಿಲ್ ಅವರು, 2014ರಲ್ಲಿ ಸುಂದರ್ ಆನೆ 15 ವರ್ಷದವನಾಗಿದ್ದಾಗ ಮಹಾರಾಷ್ಟ್ರದ ಕೊಲ್ಹಾಪುರದಿಂದ  ಬನ್ನೇರುಘಟ್ಟಕ್ಕೆ ಕರೆತರಲಾಗಿತ್ತು. ಆಗ ಸುಂದರ್ ತುಂಬಾ ಆಕ್ರಮಣಕಾರಿಯಾಗಿದ್ದ. ಬಳಿಕ ತರಬೇತಿ ನಡೆಯುತ್ತಿದ್ದಂತೆಯೇ ಆತ ಶಾಂತನಾಗುತ್ತಾ ಬಂದ. ಮಾವುತರ ಎಲ್ಲ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸುತ್ತಾನೆ. ಆಗಿನಿಂದಲೂ ನಾನು ಸುಂದರ್ ಆನೆಯನ್ನು ನೋಡುತ್ತಿದ್ದೇನೆ. 4 ತಿಂಗಳ ಹಿಂದಷ್ಟೇ ಸುಂದರ್ ನನ್ನು ಬಿಡಾರದಿಂದ ಹೊರಗೆ ಬಿಡಲಾಗಿತ್ತು. ತುರಿಕೆ ನಿವಾರಿಸಿಕೊಳ್ಳಲು ಆನೆಗಳು ಕಡ್ಡಿಯಂತಹ ವಸ್ತುಗಳನ್ನು ತೆಗೆದುಕೊಳ್ಳುತ್ತಿವೆ. ಇಂತಹ ನಡವಳಿಕೆಯನ್ನು ನಾನು ಈ ಹಿಂದೆ ಗಮನಿಸಿರಲಿಲ್ಲ. ಆದರೆ ನನ್ನ ಸಿಬ್ಬಂದಿಗಳು ಇದನ್ನು ಗಮನಿಸಿ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.

ಅಂತೆಯೇ ಈ ಹಿಂದೆ ರೀಸಸ್ ಮಕಾಕ್ಸ್ ಎಂಬ ಜಾತಿಗೆ ಸೇರಿದ ಕೋತಿಗಳು ಮ್ಯೂಸಿಕ್ ಕೇಳಿ ಅದಕ್ಕೆ ಸ್ಪಂದನೆ ನೀಡಿದ್ದವು. ಅಲ್ಲದೆ ಮ್ಯೂಸಿಕ್ ಸ್ಥಗಿತಗೊಳಿಸಿದಾಗ ಮತ್ತೆ ಹಾಕುವಂತೆ ಅವುಗಳದ್ದೇ ಆಂಗಿಕ ಭಾಷೆಯಲ್ಲಿ ಹೇಳಿದ್ದವು ಎಂದು ಬಿಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕರಾದ ವನಶ್ರೀ ವಿಪಿನ್ ಸಿಂಗ್ ಹೇಳಿದ್ದಾರೆ.

ಸುಂದರ್ ಆನೆ ಆಕಸ್ಮಿಕವಾಗಿ ಕಡ್ಡಿಯಿಂದ ಕೆರೆದುಕೊಂಡಿತ್ತು. ಆದರೆ ಈಗ ಅದು ಪುನಾರಾವರ್ತನೆ ಮಾಡುತ್ತಿದೆ. ಕಡ್ಡಿ ಅಥವಾ ರೆಂಬೆ ಸಿಕ್ಕರೆ ಅದರಿಂದ ತುರಿಕೆ ನಿವಾರಿಸಿಕೊಳ್ಳುತ್ತಿದೆ. ಮೇನಕಾ ಆನೆ ಕೂಡ ಇದೇ ರೀತಿ ಮಾಡುತ್ತಿದೆ. ಈಗ ಸಿಬ್ಬಂದಿಗಳು ಪ್ರಾಣಿಗಳ ಚಲನವಲಗಳನ್ನು ಮತ್ತಷ್ಟು ಗಂಭೀರವಾಗಿ ವೀಕ್ಷಿಸುತ್ತಿದ್ದಾರೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com