'ಮಾತು ಮನೆ ಕಟ್ಟಬಹುದು, ಮನೆಯನ್ನು ಕೆಡವಲೂಬಹುದು', ಮಾತಿನ ಶಕ್ತಿ ಅಗಾಧ: ಸಾಧಕಿಯರ ಮಾತು-ಮಂಥನ

'ಮಾತು ಮನೆ ಕಟ್ಟಬಹುದು, ಮನೆಯನ್ನು ಕೆಡವಲೂಬಹುದು'ಎಂಬ ಮಾತಿದೆ. ಮಾತು ದೇಶ ಕಟ್ಟಬಹುದು ಅಥವಾ ಸರ್ಕಾರವನ್ನು, ಆಡಳಿತವನ್ನು ಉರುಳಿಸಬಹುದು. ಇದಕ್ಕೆ ನಮ್ಮ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳು ನಡೆದುಹೋಗಿವೆ.

Published: 27th July 2020 02:13 PM  |   Last Updated: 27th July 2020 02:17 PM   |  A+A-


Lakshmi Menon along with other women leader

ಕಾರ್ಯಕ್ರಮದಲ್ಲಿ ಭಾಗವಹಿಸಿದವರು. ಚಿತ್ರದಲ್ಲಿ ಎಡದಿಂದ ಮೂರನೆಯವರು ಲಕ್ಷ್ಮಿ ಮೆನನ್

Posted By : Sumana Upadhyaya
Source : The New Indian Express

'ಮಾತು ಮನೆ ಕಟ್ಟಬಹುದು, ಮನೆಯನ್ನು ಕೆಡವಲೂಬಹುದು'ಎಂಬ ಮಾತಿದೆ. ಮಾತು ದೇಶ ಕಟ್ಟಬಹುದು ಅಥವಾ ಸರ್ಕಾರವನ್ನು, ಆಡಳಿತವನ್ನು ಉರುಳಿಸಬಹುದು. ಇದಕ್ಕೆ ನಮ್ಮ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳು ನಡೆದುಹೋಗಿವೆ.

ಇದೇ ವಿಷಯವನ್ನು 'ಡಬ್ಲ್ಯುಇಎಫ್ 2020, ಜಾಗತಿಕ ಡಿಜಿಟಲ್ ಶೃಂಗಸಭೆ'ಯಲ್ಲಿ ದ ಪವರ್ ಆಫ್ ವರ್ಡ್ಸ್ ಎಂಬ ಬಗ್ಗೆ ಚರ್ಚೆ, ಸಂವಾದಗಳು ನಡೆದವು. ಇದನ್ನು ರೂಪಿಸಿದವರು ರೂಪಾ ಪೈ. ಆನ್ ಲೈನ್ ಮೂಲಕ ನಡೆದ ಚರ್ಚೆ, ಸಂವಾದದಲ್ಲಿ ಮಧುರೈ ಎಕ್ಸ್ ಪ್ರೆಸ್ ಪಬ್ಲಿಕೇಷನ್ ಪ್ರೈವೇಟ್ ಲಿಮಿಟೆಡ್ ನ ಸಿಇಒ ಲಕ್ಷ್ಮಿ ಮೆನನ್, ಸಿಯಾಹಿಯ ಸಿಇಒ ಮತ್ತು ಸಂಸ್ಥಾಪಕಿ ಮೀಟಾ ಕಪೂರ್, ಸೋಲ್ ಫ್ರೀಯ ಸಂಸ್ಥಾಪಕಿ ಪ್ರೀತಿ ಶ್ರೀನಿವಾಸನ್, ಲಿಟ್ ಸ್ಪಿರಿಟ್ ನ ಉದ್ಯಮಿ ದೀಪಾ ರಾವ್ ಮತ್ತು ಅನುಜಾ ಚೌಹಾಣ್ ಭಾಗವಹಿಸಿ ಪ್ರತಿಯೊಬ್ಬರೂ ಪವರ್ ಆಫ್ ವರ್ಡ್ಸ್ ಅಥವಾ ಮಾತಿನ ಶಕ್ತಿ ಬಗ್ಗೆ ತಮ್ಮದೇ ಆದ ರೂಪದಲ್ಲಿ ವ್ಯಾಖ್ಯಾನ ಮಂಡಿಸಿದರು.

ಪತ್ರಿಕೆಯೊಂದರ ಸಿಇಒ ಆಗಿ ತಮ್ಮ ಅನುಭವ ಹಂಚಿಕೊಂಡ ಲಕ್ಷ್ಮಿ ಮೆನನ್, ಮಾತಿಗೆ ಗಾಯವನ್ನು ಗುಣಪಡಿಸುವ ಮತ್ತು ನಾಶಮಾಡುವ ಎರಡೂ ಶಕ್ತಿಯಿದೆ. ಹೀಗಾಗಿ ನಾವು ಆಡುವ ಮಾತನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು. ಪತ್ರಿಕೆಯಲ್ಲಿ ಕೆಲಸ ಮಾಡಿಕೊಂಡು ನಮ್ಮ ಸುದ್ದಿಗಾರರಿಗೆ, ವರದಿ ಮಾಡುವವರಿಗೆ ಸಮಾಜಪರ, ಜನರಲ್ಲಿ ಸಕಾರಾತ್ಮಕ ಯೋಚನೆಯನ್ನು ಬೆಳೆಸುವ ಸುದ್ದಿಗಳನ್ನು ನೀಡಿ, ಜನರಿಗೆ ಗೊಂದಲ,ಆತಂಕ ಹುಟ್ಟಿಸುವ, ಆಶಾವಾದರಹಿತ ಪದಗಳನ್ನು ಬಳಸಬೇಡಿ ಎಂದು ಹೇಳುತ್ತೇವೆ. ತಪ್ಪು, ಸುಳ್ಳು ಸುದ್ದಿಗಳು ಪ್ರಕಟವಾಗದಂತೆ ಅದರ ವಿರುದ್ಧ ಹೋರಾಡುತ್ತಾ ತನ್ನ ಪರಂಪರೆಯನ್ನು ಉಳಿಸಿಕೊಳ್ಳುವಲ್ಲಿ ಮಧುರೈ ಪಬ್ಲಿಕೇಷನ್ ಲಿಮಿಟೆಡ್ ಹೋರಾಡುತ್ತಿದೆ. ಋಣಾತ್ಮಕ ಸಂಬಂಧಿ ಸುದ್ದಿಗಳನ್ನು ವರದಿ ಮಾಡುವಾಗ ನಿಜಕ್ಕೂ ಸವಾಲು ಎದುರಾಗುತ್ತದೆ ಎಂದರು.

ಋಣಾತ್ಮಕ ಸುದ್ದಿಗಳನ್ನು ಬಳಸುವಾಗ ಸಾಧ್ಯವಾದಷ್ಟು ಎಚ್ಚರಿಕೆಯಿಂದ ಶಬ್ದಗಳನ್ನು ಬಳಸುತ್ತೇವೆ. ನಮ್ಮ ಪತ್ರಿಕೆಯಲ್ಲಿ ಗುಡ್ ನ್ಯೂಸ್ ಸೆಕ್ಷನ್ ಎಂಬ ಕಾಲಂ ಇದ್ದು ಅದರಲ್ಲಿ ಧನಾತ್ಮಕ ಅಂಶಗಳುಳ್ಳ ಸುದ್ದಿಗಳನ್ನು ಮಾತ್ರ ಪ್ರಕಟಿಸುತ್ತೇವೆ ಎಂದರು.
ಪೆಪ್ಸಿಯ ಯೆ ದಿಲ್ ಮಾಂಗೆ ಮೋರ್  ಎಂಬ ಟ್ಯಾಗ್ ಲೈನ್ ಕೊಟ್ಟ ಜಾಹಿರಾತು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅನುಜಾ ಚೌಹಾಣ್, ಶಬ್ದದ ಬಳಕೆಯ ಶಕ್ತಿ ಬಗ್ಗೆ ತಮ್ಮದೇ ವ್ಯಾಖ್ಯಾನ ನೀಡಿದರು.

''ಶಬ್ದದೊಳಗೆ ಇಡೀ ಜಗತ್ತು ಅಡಗಿದೆ. ಅದು ನಿಮ್ಮನ್ನು ಬೆಳೆಸಬಹುದು ಅಥವಾ ಕೊಲ್ಲಬಹುದು. ಲಕ್ಷ್ಮಿ ಮೆನನ್ ಅವರು ಹೇಳಿದಂತೆ ಸುದ್ದಿಯ ತಲೆಬರಹ ಸಮುದಾಯ ಅಥವಾ ಜನರನ್ನು ಬೆಳೆಸಬಹುದು ಅಥವಾ ನಾಶ ಮಾಡಲೂಬಹುದು. ಜಾಹೀರಾತು ವಿಷಯ ಬಂದಾಗ ಇಲ್ಲಿ ಬಳಸುವ ಶಬ್ದಗಳು ಬಹಳ ಮುಖ್ಯವಾಗುತ್ತದೆ. ಪಲಾಯನವಾದಕ್ಕಾಗಿ ಅಥವಾ ಜೀವನದ ಪ್ರಕಾಶಮಾನತೆಗಾಗಿ ನೋಡಬಹುದು ಎಂದರು.

ಪ್ರೀತಿ ಶ್ರೀನಿವಾಸನ್ ತಮ್ಮ ಜೀವನದ ಸ್ಪೂರ್ತಿದಾಯಕ ಕಥೆಯನ್ನು ಹೇಳಿದರು. ರಾಷ್ಟ್ರಮಟ್ಟದ ಈಜುಗಾರ್ತಿ ಮತ್ತು ತಮಿಳು ನಾಡಿನ ಮಹಿಳಾ ಕ್ರಿಕೆಟ್ ತಂಡದ ಅತಿ ಕಿರಿಯ ಆಟಗಾರ್ತಿಯಾಗಿದ್ದರು. ಆದರೆ 18ನೇ ವರ್ಷದಲ್ಲಿ ನಡೆದ ದುರ್ಘಟನೆಯಿಂದ ಕುತ್ತಿಗೆಯಿಂದ ಕೆಳಗೆ ಪಾರ್ಶ್ವವಾಯುಪೀಡಿತರಾದರು.

ಆದರೆ ಜೀವನದಲ್ಲಿ ಬಂದ ಕಷ್ಟಗಳನ್ನೆಲ್ಲಾ ಸಂಭಾಳಿಸಿ ಸೋಲ್ ಫ್ರೀ ಎಂಬ ಸಂಘಟನೆ ಕಟ್ಟಿ ಅಶಕ್ತರು, ವಿಶೇಷ ಚೇತನರು, ಬೆನ್ನುಹುರಿ ಸಮಸ್ಯೆ ಹೊಂದಿರುವವರ ಏಳಿಗೆಗೆ ಕೆಲಸ ಮಾಡುತ್ತಿದ್ದಾರೆ. ನಾನು ಅಶಕ್ತಗಳಾದಾಗ ಮನೆಯಲ್ಲಿ ತಂದೆ ತಾಯಿ ಮೇಲೆ ರೇಗಾಡುತ್ತಿದ್ದೆ. ಆಗ ತಂದೆ ನನಗೆ ರಮಣ ಮಹರ್ಷಿ ಮತ್ತು ನಿಸರ್ಗದತ್ತ ಮಹಾರಾಜರ ಜೀವನದ ಸಂಗತಿಗಳನ್ನು ಹೇಳುತ್ತಿದ್ದರು. ಅದು ಸಾಕಷ್ಟು ಪ್ರಭಾವ ಬೀರಿತು ಎಂದರು.

ಮಾತುಗಳು ಎಂದರೆ ಬೀಜದಂತೆ. ನಮ್ಮ ಸುತ್ತಮುತ್ತ ಏನು ಎಸೆಯುತ್ತೇವೆಯೋ, ನಾವು ಸುತ್ತಮುತ್ತಲಿನವರ ಬಳಿ ಹೇಗೆ ಮಾತನಾಡುತ್ತೇವೆಯೋ ಅದರಂತೆ ಬೆಳೆಯುತ್ತದೆ, ನಾವು ಅದನ್ನು ತಿನ್ನಬೇಕಾಗುತ್ತದೆ ಎಂದರು.

ಡಬ್ಲ್ಯುಇಎಫ್ ಬೆಂಗಳೂರು 2020 ಎರಡು ದಿನಗಳ ಜಾಗತಿಕ ಡಿಜಿಟಲ್ ಶೃಂಗಸಭೆಯಾಗಿದ್ದು ಆಲ್ ಲೇಡಿಸ್ ಲೀಗ್ ಮತ್ತು ವುಮೆನ್ ಎಕನಾಮಿಕ್ ಫೋರಂ ಜಂಟಿಯಾಗಿ ಆಯೋಜಿಸಿದೆ.

Stay up to date on all the latest ರಾಜ್ಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp