ನಗರದಲ್ಲಿರುವ 20,000 ಅಕ್ರಮ ನೀರಿನ ಸಂಪರ್ಕಗಳ ವಿರುದ್ಧ ಕ್ರಮಕ್ಕೆ ಮುಂದಾದ ಬಿಡಬ್ಲ್ಯೂಎಸ್ಎಸ್'ಬಿ

ಸಿಲಿಕಾನ್ ಸಿಟಿಯಲ್ಲಿ ನೀರಿನ ನಷ್ಟ ಸಾಕಷ್ಟು ಕಡಿಮೆಯಾಗಿದ್ದು, ಇದನ್ನು ಮತ್ತಷ್ಟು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ)ಯು ನಗರದಲ್ಲಿನ 20,000 ಅಕ್ರಮ ನೀರಿನ ಸಂಪರ್ಕಗಳನ್ನು ಪತ್ತೆ ಹಚ್ಚಿದ್ದು, ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೀರಿನ ನಷ್ಟ ಸಾಕಷ್ಟು ಕಡಿಮೆಯಾಗಿದ್ದು, ಇದನ್ನು ಮತ್ತಷ್ಟು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ)ಯು ನಗರದಲ್ಲಿನ 20,000 ಅಕ್ರಮ ನೀರಿನ ಸಂಪರ್ಕಗಳನ್ನು ಪತ್ತೆ ಹಚ್ಚಿದ್ದು, ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. 

ನಗರ ಜನತೆಗಾಗಿ ದಿನಕ್ಕೆ ಸರಾಸರಿ 1450 ಮಿಲಿಯನ್ ಲೀಟರ್ ನೀರನ್ನು (ಎಂಎಲ್‌ಡಿ) ಪಂಪ್ ಮಾಡಲಾಗುತ್ತದೆ. ಇದರಲ್ಲಿ ಕಳೆದ ವಾರ 1,429 ನೀರನ್ನು ಪಂಪ್ ಮಾಡಲಾಗಿದೆ. ಬಿಡಬ್ಲ್ಯೂಎಸ್ಎಸ್ಬಿಯಲ್ಲಿ ಈ ವರೆಗೂ 9.8 ಲಕ್ಷ ಮಂದಿ ತಾವು ಪಡೆದುಕೊಂಡಿರುವ ನೀರಿನ ಸಂಪರ್ಕಗಳನ್ನು ನೋಂದಾಯಿಸಿಕೊಂಡಿದ್ದಾರೆ. 

ಬಿಡಬ್ಲ್ಯೂಎಸ್ಎಸ್ಬಿ ಮುಖ್ಯಸ್ಥ ಎನ್.ಜಯರಾಮ್ ಅವರು ಮಾತನಾಡಿ, ಪ್ರತಿನಿತ್ಯ ಪೂರೈಕೆಯಾಗುತ್ತಿರುವ ಶೇ. 36%ರಷ್ಟು ನೀರು ಸರಬರಾಜು ಪೂರೈಕೆಗೆ ಲೆಕ್ಕವೇ ಸಿಗದಂತಾಗಿದೆ. ಇದರಿಂದ ಪ್ರತೀನಿತ್ಯ ಶೇ.10ರಷ್ಟು ನಷ್ಟವಾಗುತ್ತಿದೆ. ಹೀಗಾಗಿ ನೋಂದಾವಣಿ ಇಲ್ಲದ ಅಕ್ರಮ ಸಂಪರ್ಕಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ನಷ್ಟವನ್ನು ಕಡಿಮೆ ಮಾಡುವುದೇ ನಮ್ಮ ಪ್ರಮುಖ ಆದ್ಯತೆಯ ವಿಚಾರವಾಗಿದೆ.  ಈಗಾಗಲೇ ಸಂಬಂಧಪಟ್ಟಂತಹ ಎಂಜಿನಿಯರ್ ಗಳಿಗೆ ಅನಧಿಕೃತವನ್ನು ಕ್ರಮಬದ್ಧಗೊಳಿಸಲು ಆಗಸ್ಟ್15ರವರೆಗೂ ಗಡುವು ನೀಡಲಾಗಿದೆ ಎಂದು ಹೇಳಿದ್ದಾರೆ. 

ಮುಖ್ಯ ಎಂಜಿನಿಯರ್ ಕೆಂಪಯ್ಯ ಅವರು ಮಾತನಾಡಿ, ಕೋಲ್ಸ್ ಪಾರ್ಕ್, ಫ್ರೇಸರ್ ಟೌನ್, ಪುಲಕೇಶಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡಿರುವ ಸಿ -3 ಉಪ ವಿಭಾಗವೊಂದರಲ್ಲಿಯೇ 13,000 ಅಕ್ರಮ ಸಂಪರ್ಕಗಳು ಪತ್ತೆಯಾಗಿವೆ. ಉಳಿದ 7,000 ಅಕ್ರಮ ಸಂಪರ್ಕಗಳು ನಗರದ ಇನ್ನಿತರೆ ಪ್ರದೇಶಗಳಲ್ಲಿ ಪತ್ತೆಯಾಗಿವೆ. ಈ ಕ್ರಮಗಳ ಮಟ್ಟಹಾಕುವ ಸಲುವಾಗಿ ಇಂದು ನಡೆಯುವ ಸಭೆಯಲ್ಲಿ ನಿರ್ವಹಣಾ ವಿಭಾಗದ ಎಂಜಿನಿಯರ್‌ಗಳಿಗೆ ಈ ಅಂಶದ ಬಗ್ಗೆ ಗಮನಹರಿಸಲು ಸೂಚಿಸಲಾಗುತ್ತದೆ. ವಿಭಾಗದಲ್ಲಿ ಇಬ್ಬರು ಮುಖ್ಯ ಎಂಜಿನಿಯರ್‌ಗಳಿದ್ದು, ನಾಲ್ಕು ಹೆಚ್ಚುವರಿ ಮುಖ್ಯ ಎಂಜಿನಿಯರ್‌ಗಳಿದ್ದಾರೆ. ಪ್ರತೀ ಮುಖ್ಯ ಎಂಜಿನಿಯರ್ ಗಳಿಗೂ ವಾರಕ್ಕೆ 2,000 ಅಕ್ರಮ ಸಂಪರ್ಕಗಳನ್ನು ಗುರ್ತಿಸುವಂತೆ ಗುರಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವೇಳೆ ಅಕ್ರಮ ನೀರಿನ ಸಂಪರ್ಕ ತೆಗೆದುಕೊಂಡವರಿಗೆ ದಂಡ ವಿಧಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಬಿಡಬ್ಲ್ಯೂಎಸ್ಎಸ್ಬಿ ಕಾಯ್ದೆಯಡಿ 6 ತಿಂಗಳ ಜೈಲು ಶಿಕ್ಷೆ ಮತ್ತು 5,000 ರೂ ದಂಡ ವಿಧಿಸಲಾಗುತ್ತದೆ. ನೀರು ಪ್ರತೀಯೊಬ್ಬರಿಗೂ ಪ್ರಮುಖವಾಗಿದ್ದ ಹಿನ್ನೆಲೆಯಲ್ಲಿ ಈ ವರೆಗೂ ನಾವು ಯಾವುದೇ ಕಠಿಣ ನಿರ್ಧಾರಗಳನ್ನು ಕೈಗೊಂಡಿರಲಿಲ್ಲ. ಆದರೆ, ಇದೀಗ ಅಕ್ರಮ ಸಂಪರ್ಕಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡಲಾಗುತ್ತಿದ್ದು, ಸಣ್ಣಪುಟ್ಟ ಮನೆಗಳಿಗೆ ತೆಗೆದುಕೊಳ್ಳಲಾಗಿರುವ ಅಕ್ರಮ ಸಂಪರ್ಕಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು. ಶಿಕ್ಷೆ ನೀಡಬಹುದು.  ಆದರೆ, ದೊಡ್ಡ ದೊಡ್ಡ ಕಟ್ಟಡಗಳು, ಅಪಾರ್ಟ್'ಮೆಂಟ್ ಗಳಿಗೆ ತೆಗೆದುಕೊಳ್ಳಲಾಗಿರುವ ಸಂಪರ್ಕ ಪತ್ತೆಹಚ್ಚುವುದು ಕಷ್ಟಕರವಾಗಿರುತ್ತದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com