ಹಣಕ್ಕಾಗಿ ಬಾಲಕನ ಅಪಹರಣ: ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಐವರು ಅಪಹರಣಕಾರರ ಬಂಧನ

 ನಾಯಿಮರಿ ಖರೀದಿಸುವ ನೆಪದಲ್ಲಿ ಬಾಲಕನೋರ್ವನನ್ನು ಅಪಹರಿಸಿದ ಆರೋಪಿಗಳನ್ನು ಪೊಲೀಸರು ಸಿನಿಮೀಯ ರೀತಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಹಣಕ್ಕಾಗಿ ಬಾಲಕನ ಅಪಹರಣ: ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಐವರು ಅಪಹರಣಕಾರರ ಬಂಧನ

ನೆಲಮಂಗಲ: ನಾಯಿಮರಿ ಖರೀದಿಸುವ ನೆಪದಲ್ಲಿ ಬಾಲಕನೋರ್ವನನ್ನು ಅಪಹರಿಸಿದ ಆರೋಪಿಗಳನ್ನು ಪೊಲೀಸರು ಸಿನಿಮೀಯ ರೀತಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬೆಂಗಳೂರಿನ ಅಂಧ್ರಹಳ್ಳಿಯ ಮನು(24), ದರ್ಶನ್(20), ಆದರ್ಶ(20), ಲೋಕೇಶ್(20), ಆಕಾಶ್(20) ಬಂಧಿತ ಐವರು ಅಪಹರಣಕಾರರು.

ಅಂಧ್ರಹಳ್ಳಿಯ ನಾಗರಾಜು, ರೇಣುಕಾ ದಂಪತಿ ಪುತ್ರ ನಿತಿನ್‌ನನ್ನು ಸೋಮವಾರ ಸಂಜೆ ನಾಯಿಮರಿ ಖರೀದಿಸುವ ನೆಪದಲ್ಲಿ ಕಾರಿನಲ್ಲಿ ಬಂದಿದ್ದ ಅಪಹರಣಕಾರರು ಬೆಂಗಳೂರಿನ ಬೈಲಕೊನೇನಹಳ್ಳಿ ಸರ್ಕಲ್‌ ಬಳಿ ಅಪಹರಿಸಿದ್ದರು. ನಂತರ 20 ಲಕ್ಷ ಕೊಡದಿದ್ದರೆ ಬಾಲಕನನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆಗ ಪೋಷಕರು ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ.

ದೂರಿನ ಹಿನ್ನೆಲೆ ಮಾದನಾಯಕನಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಸತ್ಯನಾರಾಯಣ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು ಅಪಹರಣಕಾರರನ್ನು ಪತ್ತೆಹಚ್ಚಿ ಬಂಧಿಸಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ. 

ಕೊನೆಗೂ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಾವನೂರ ಬಳಿ ಕಾರನ್ನು ಚೇಸ್‌ ಮಾಡಿ ಬಾಲಕ  ನಿತಿನ್‌ನನ್ನು ಪೊಲೀಸರು ರಕ್ಷಿಸಿ ಐವರು ಅಪಹರಣಕಾರರನ್ನು  ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com