ಶಕುಂತಲಾ ದೇವಿಯ ಬೆಂಗಳೂರು ನಂಟು; ಆಹಾರ, ಅಡುಗೆ ಪುಸ್ತಕ, ಶಿಕ್ಷಣ ಟ್ರಸ್ಟ್ ನೆನಪುಗಳು!

2009ರಲ್ಲಿ ಶಿಲ್ಪಾ ರಘುಪತಿ ಎಂಬಾಕೆ ಗಣಿತಶಾಸ್ತ್ರಜ್ಞೆ ಶಕುಂತಲಾ ದೇವಿಯವರನ್ನು ಮೊದಲ ಬಾರಿಗೆ ಭೇಟಿ ಮಾಡಿದಾಗ ಅವರಿಗೆ 20ರ ಆಸುಪಾಸು ವಯಸ್ಸು. ಶಕುಂತಲಾ ದೇವಿಯವರ ಕಾರ್ಯದರ್ಶಿ ಹುದ್ದೆಗೆ ಸಂದರ್ಶನಕ್ಕೆ ಹೋಗಿದ್ದರು.
ಶಕುಂತಲಾ ದೇವಿಯವರೊಂದಿಗೆ ಶಿವದೇವ್ ದೇಶಮುದ್ರೆ ಮತ್ತು ಅವರ ಪತ್ನಿ ರೇಖಾ
ಶಕುಂತಲಾ ದೇವಿಯವರೊಂದಿಗೆ ಶಿವದೇವ್ ದೇಶಮುದ್ರೆ ಮತ್ತು ಅವರ ಪತ್ನಿ ರೇಖಾ

ಬೆಂಗಳೂರು: 2009ರಲ್ಲಿ ಶಿಲ್ಪಾ ರಘುಪತಿ ಎಂಬಾಕೆ ಗಣಿತಶಾಸ್ತ್ರಜ್ಞೆ ಶಕುಂತಲಾ ದೇವಿಯವರನ್ನು ಮೊದಲ ಬಾರಿಗೆ ಭೇಟಿ ಮಾಡಿದಾಗ ಅವರಿಗೆ 20ರ ಆಸುಪಾಸು ವಯಸ್ಸು. ಶಕುಂತಲಾ ದೇವಿಯವರ ಕಾರ್ಯದರ್ಶಿ ಹುದ್ದೆಗೆ ಸಂದರ್ಶನಕ್ಕೆ ಹೋಗಿದ್ದರು.

ಅಷ್ಟು ದೊಡ್ಡ ವ್ಯಕ್ತಿಯನ್ನು ಕಂಡಾಗ, ಮಾನವ ಕಂಪ್ಯೂಟರ್ ಎಂದು ಕರೆಯಲ್ಪಡುವ, ಅನೇಕರಿಗೆ ಕಬ್ಬಿಣದ ಕಡಲೆಯಾಗಿರುವ ಗಣಿತವನ್ನು ಲೀಲಾಜಾಲವಾಗಿ ಮಾಡುವ ವ್ಯಕ್ತಿಯನ್ನು ಭೇಟಿಯಾದಾಗ ಬೇರೆಯವರಿಗಾಗುತ್ತಿದ್ದರೆ ಪುಳಕಿತವಾಗುತ್ತಿತ್ತು. ಆದರೆ ಶಿಲ್ಪಾ ರಘುಪತಿಗೆ ಹಾಗಾಲಿಲ್ಲವಂತೆ. ಅವರು ಯಾರೆಂದೇ ಗೊತ್ತಿರಲಿಲ್ಲವಂತೆ, ಹೀಗೆ ಹೇಳಿದರೆ ಎಲ್ಲರಿಗೂ ಅಚ್ಚರಿಯಾಗಬಹುದು ಎಂದು ನಗುತ್ತಾರೆ ಶಿಲ್ಪಾ.

ಶಕುಂತಲಾ ದೇವಿಯವರು ಶಿಕ್ಷಣದ ಟ್ರಸ್ಟ್ ವೊಂದರಲ್ಲಿ ಮತ್ತು ಜ್ಯೋತಿಷ್ಯಶಾಸ್ತ್ರದ ಬಗ್ಗೆ ಕೆಲಸ ಮಾಡುತ್ತಿದ್ದ ಸಮಯವದು, ಬಹಳ ಬ್ಯುಸಿಯಾಗಿರುತ್ತಿದ್ದರು. ಅವರ ಕೈಕೆಳಗೆ ಶಿಲ್ಪಾ ಒಂದೂವರೆ ವರ್ಷ ಕೆಲಸ ಮಾಡಿದ್ದರಂತೆ. 2009ರಲ್ಲಿ ರಿಸೆಷನ್ ಸಮಯ, ಕೆಲಸ ಸಿಗುತ್ತಿರಲಿಲ್ಲ. ಶಿಲ್ಪಾರಿಗೆ ಇಂಜಿನಿಯರಿಂಗ್ ಆಗಿದೆ ಎಂದು ತಿಳಿದಾಗ ಶಕುಂತಲಾ ದೇವಿಯವರು ನಿಮ್ಮ ಓದಿನ ಅರ್ಹತೆಗೆ ಈ ಕೆಲಸ ಅಲ್ಲ ಎಂದು ತಿರಸ್ಕರಿಸಿದ್ದರಂತೆ. ಕೊನೆಗೆ ತಂದೆ ಮಗಳು ಮನವಿ ಮಾಡಿಕೊಂಡಾಗ ಕೆಲ ವಾರಗಳ ಮಟ್ಟಿಗೆ ಇರಿ ಎಂದು ಹೇಳಿ ಒಂದೂವರೆ ವರ್ಷ ಕೆಲಸ ಮಾಡಿಸಿಕೊಂಡರಂತೆ.

ಶಕುಂತಲಾ ದೇವಿಯವರನ್ನು 30 ವರ್ಷಗಳಿಂದ ಪರಿಚಯ ಹೊಂದಿದ್ದ ಶಿವದೇವ್ ದೇಶಮುದ್ರೆ ಅವರು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ, ದೇಶಮುದ್ರೆ ಶಕುಂತಲಾ ದೇವಿಯವರನ್ನು 1981ರಲ್ಲಿ ಮೊದಲ ಬಾರಿಗೆ ಭೇಟಿ ಮಾಡಿದ್ದರಂತೆ. ಜಾಹೀರಾತು ಸಂಸ್ಥೆಯನ್ನು ನಡೆಸುತ್ತಿದ್ದ ಇವರ ಬಳಿ ಶಕುಂತಲಾ ದೇವಿಯವರು ತಮ್ಮ ಜ್ಯೋತಿಷ್ಯದ ಜಾಹೀರಾತು ಪ್ರಕಟ ಮಾಡಿಸಲು ಬಂದಿದ್ದರಂತೆ. ನಂತರ ನಾವು ಸ್ನೇಹಿತರಂತೆ ಇದ್ದೆವು ಎಂದು ಶಕುಂತಲಾ ದೇವಿ ಶಿಕ್ಷಣ ಫೌಂಡೇಶನ್ ಪಬ್ಲಿಕ್ ಟ್ರಸ್ಟ್ ನಡೆಸುವ ದೇಶಮುದ್ರೆ ಹೇಳುತ್ತಾರೆ.

ಶಕುಂತಲಾ ದೇವಿಯವರು ತಮ್ಮ ಜೀವನದ ಹಲವು ವರ್ಷಗಳನ್ನು ಲಂಡನ್ ನಲ್ಲಿ ಕಳೆದಿದ್ದರೂ ಅವರು ಹೃದಯದಲ್ಲಿ ಕನ್ನಡಕ್ಕೆ ಪ್ರೀತಿಯ ಸ್ಥಾನಮಾನ ಇಟ್ಟುಕೊಂಡಿದ್ದರಂತೆ. ಅವರ ಹಾಸ್ಯಪ್ರಜ್ಞೆ ಚೆನ್ನಾಗಿತ್ತು.ಅವರು ಕನ್ನಡ ಚೆನ್ನಾಗಿ ಮಾತನಾಡುತ್ತಿದ್ದರು.ಅಕ್ಕಿರೊಟ್ಟಿ, ಹೋಳಿಗೆ ಎಂದರೆ ಅವರಿಗೆ ಪ್ರಾಣ ಎಂದು ನೆನಪು ಮಾಡಿಕೊಂಡರು.

ಬೆಂಗಳೂರಿಗೆ ಬಂದಾಗಲೆಲ್ಲ ಮಕ್ಕಿ ಕಿ ರೊಟ್ಟಿ, ಸರ್ಸನ್ ದ ಸಾಗ್ ಪಂಜಾಬಿ ತಿನಿಸನ್ನು ಅವರಿಗೆ ಎತ್ತಿಡುತ್ತಿದ್ದೆ. ಕೇವಲ ದಕ್ಷಿಣ ಭಾರತೀಯ ತಿನಿಸುಗಳನ್ನು ಮಾತ್ರವಲ್ಲ ಎಲ್ಲಾ ತಿನಿಸುಗಳನ್ನು ಅವರು ಇಷ್ಟಪಡುತ್ತಿದ್ದರು. ಅವರು ಹಲವು ಅಡುಗೆ ಪುಸ್ತಕಗಳನ್ನು ಕೂಡ ಬರೆದಿದ್ದಾರೆ ಎಂದು ರಾಜ್ ಬಾಸಿನ್ ಎಂಬ ಶಕುಂತಲಾ ದೇವಿ ಶಿಕ್ಷಣ ಟ್ರಸ್ಟ್ ನ ಟ್ರಸ್ಟಿ ನೆನಪು ಮಾಡಿಕೊಳ್ಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com