ಥರ್ಮಲ್ ಸ್ಕ್ರೀನಿಂಗ್ ಅಷ್ಟೇ ಅಲ್ಲ, ಸೋಂಕು ಪತ್ತೆಗೆ ವಾಸನೆ ಗ್ರಹಿಕೆ ಪರೀಕ್ಷೆ ನಡೆಸಲು ಬಿಬಿಎಂಪಿ ಚಿಂತನೆ!

ನಗರದಲ್ಲಿ ಕೊರೋನಾ ಸೋಂಕಿತರ ಪತ್ತೆಗೆ ಥರ್ಮಲ್ ಸ್ಕ್ರೀನಿಂಗ್ ಅಷ್ಟೇ ಅಲ್ಲದೆ, ವಾಸನೆ ಗ್ರಹಿಕೆ ಪರೀಕ್ಷೆಯನ್ನೂ ನಡೆಸಲು ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. 
ಸಭೆ ನಡೆಸುತ್ತಿರುವ ಬಿಬಿಎಂಪಿ ಅಧಿಕಾರಿಗಳು
ಸಭೆ ನಡೆಸುತ್ತಿರುವ ಬಿಬಿಎಂಪಿ ಅಧಿಕಾರಿಗಳು

ಬೆಂಗಳೂರು: ನಗರದಲ್ಲಿ ಕೊರೋನಾ ಸೋಂಕಿತರ ಪತ್ತೆಗೆ ಥರ್ಮಲ್ ಸ್ಕ್ರೀನಿಂಗ್ ಅಷ್ಟೇ ಅಲ್ಲದೆ, ವಾಸನೆ ಗ್ರಹಿಕೆ ಪರೀಕ್ಷೆಯನ್ನೂ ನಡೆಸಲು ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. 

ಸೋಂಕು ಇರುವ ವ್ಯಕ್ತಿಗೆ ರುಚಿ ಹಾಗೂ ವಾಸನೆ ಗ್ರಹಿಕೆ ಸಾಮರ್ಥ್ಯ ಇರುವುದಿಲ್ಲ ಎಂದು ಅಧ್ಯಯನವೊಂದು ಹೇಳಿದೆ. ಹೀಗಾಗಿ, ದೆಹಲಿಯಲ್ಲಿ ಈಗಾಗಲೇ ವಾಸನೆ ಗ್ರಹಿಕೆ ಪರೀಕ್ಷೆಯನ್ನು ಆರಂಭಿಸಲಾಗಿದೆ. 

ಈ ರೀತಿ ವಾಸನೆ ಗ್ರಹಿಕೆ ಗ್ರಹಿಕೆಯಲ್ಲಿ ವಿಫಲವಾದ ಶೇ.90ರಷ್ಟು ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ನಗರದಲ್ಲಿಯೂ ಸಹ ವಾಸನೆ ಗ್ರಹಿಕೆ ಪರೀಕ್ಷೆಗೆ ಬಿಬಿಎಂಪಿ ಚಿಂತನೆ ನಡೆಸಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿದ ಮೇಯರ್ ಗೌತಮ್ ಕುಮಾರ್, ದೆಹಲಿಯಲ್ಲಿನ ಸಾರ್ವಜನಿಕ ಪ್ರದೇಶಗಳಲ್ಲಿ ಸೋಂಕು ಪತ್ತೆಗೆ ವಿವಿಧ ಪದಾರ್ಥಗಳ ವಾಸನೆ ಗ್ರಹಿಕೆ ಪರೀಕ್ಷೆ ಮಾಡಲಾಗುತ್ತಿದೆ. ಸಾರ್ಜಜನಿಕರು ಪ್ರವೇಶಿಸುವ ಸ್ಥಳಗಳಲ್ಲಿ ನಿಂಬೆಹಣ್ಣು, ಕಿತ್ತಳೆ ಸೇರಿದಂತೆ ವಿವಿಧ ವಾಸನೆಗಳ ಪರೀಕ್ಷೆ ಮಾಡಲಾಗುವುದು ಎಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com