ಹೆಚ್ಚುತ್ತಿರುವ ಕೋವಿಡ್-19: ಬೆಂಗಳೂರಿನ ಎರಡು ಆಸ್ಪತ್ರೆಗಳಲ್ಲಿ ಐಸಿಯು ಸ್ಥಾಪನೆ

ಕೊರೋನಾ ಪೀಡಿತರ ಸಂಖ್ಯೆ ನಗರದಲ್ಲಿ ಹೆಚ್ಚಾಗುತ್ತಿರುವಂತೆ ಸರ್ಕಾರ ತೀವ್ರ ನಿಗಾ ಘಟಕ(ಐಸಿಯು)ಗಳನ್ನು ಹೆಚ್ಚಿಸುವ ಕಾರ್ಯ ಮಾಡುತ್ತಿದೆ.
ಸಿದ್ದಯ್ಯ ರಸ್ತೆಯ ಬ್ಯಾರಿಕೇಡ್ ನಲ್ಲಿ ಬ್ಯಾನರ್ ಹಾಕುತ್ತಿರುವುದು
ಸಿದ್ದಯ್ಯ ರಸ್ತೆಯ ಬ್ಯಾರಿಕೇಡ್ ನಲ್ಲಿ ಬ್ಯಾನರ್ ಹಾಕುತ್ತಿರುವುದು

ಬೆಂಗಳೂರು: ಕೊರೋನಾ ಪೀಡಿತರ ಸಂಖ್ಯೆ ನಗರದಲ್ಲಿ ಹೆಚ್ಚಾಗುತ್ತಿರುವಂತೆ ಸರ್ಕಾರ ತೀವ್ರ ನಿಗಾ ಘಟಕ(ಐಸಿಯು)ಗಳನ್ನು ಹೆಚ್ಚಿಸುವ ಕಾರ್ಯ ಮಾಡುತ್ತಿದೆ.

ಕೊರೋನಾ ಸೋಂಕಿತರು ಇರುವ ಆಸ್ಪತ್ರೆಗಳು( Epidemic Diseases Hospital) ಮತ್ತು ಸರ್ ಸಿ ವಿ ರಾಮನ್ ಜನರಲ್ ಆಸ್ಪತ್ರೆಗಳಲ್ಲಿ ಐಸಿಯುಗಳನ್ನು ತೆರೆದು ಸಂಪೂರ್ಣವಾಗಿ ಕೊರೋನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಿದೆ ಸರ್ಕಾರ.

ನಿಗದಿತ ಕೋವಿಡ್ ಆರೋಗ್ಯ ಕೇಂದ್ರಗಳು(ಡಿಸಿಎಚ್ ಸಿ) ಆಮ್ಲಜನಕ ಮಟ್ಟ ಶೇಕಡಾ 90ರಿಂದ 95ರಷ್ಟು ಇರುವ ರೋಗಿಗಳನ್ನು ದಾಖಲಿಸಿಕೊಳ್ಳಬೇಕಾಗುತ್ತದೆ. ಆದರೆ ನಮ್ಮಲ್ಲಿಗೆ ಶೇಕಡಾ 80ರಿಂದ 60ರಷ್ಟು ಆಮ್ಲಜನರ ಮಟ್ಟ ಇರುವ ರೋಗಿಗಳು ದಾಖಲಾಗುತ್ತಿದ್ದಾರೆ. ಈಗಿರುವ 130 ಜನರಲ್ ವಾರ್ಡ್ ಬೆಡ್ ಗಳ ಜೊತೆಗೆ 20 ಐಸಿಯು ಬೆಡ್ ಗಳನ್ನು ಸೇರಿಸಲು ಮೂಲಭೂತಸೌಕರ್ಯಗಳನ್ನು ಹೆಚ್ಚಿಸಲು ನಾವು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಸಿ ವಿ ರಾಮನ್ ಜನರಲ್ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ ಹೆಚ್ ಡಿ ಆರ್ ರಾಧಾಕೃಷ್ಣ ತಿಳಿಸಿದ್ದಾರೆ.

ಈ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಗಳಿಗೆ 20 ವೆಂಟಿಲೇಟರ್ ಗಳನ್ನು ನೀಡಲಾಗಿದೆ. ಹೆಚ್ಚುವರಿ ಸಿಬ್ಬಂದಿಯನ್ನು ನೇಮಕಾತಿ ಮಾಡಲಾಗುತ್ತದೆ. ತೀವ್ರ ನಿಗಾ ಘಟಕ ಅಥವಾ ತುರ್ತು ವೈದ್ಯಕೀಯ ವಿಭಾಗದಲ್ಲಿ ಅಗತ್ಯಬಿದ್ದರೆ ಆರರಿಂದ ಏಳು ನರ್ಸ್ ಗಳು ಮತ್ತು ಮೂವರು ವೈದ್ಯರಿಗೆ ತರಬೇತಿ ನೀಡಲಾಗುತ್ತದೆ.

ಇಡಿಎಚ್ ಆಸ್ಪತ್ರೆಯಲ್ಲಿ ಐಸಿಯು ನಿರ್ಮಾಣ ಕಾರ್ಯ ನಡೆಯುತ್ತಿದ್ದು ಅದು ಆಗಸ್ಟ್ ಕೊನೆಯ ಹೊತ್ತಿಗೆ ಸಿದ್ದವಾಗಲಿದೆ. ಪ್ರಸ್ತುತ 40ರಲ್ಲಿ 29 ಕೋವಿಡ್ ಬೆಡ್ ಗಳು ಆಸ್ಪತ್ರೆಯ ಜನರಲ್ ವಾರ್ಡ್ ಗಳಲ್ಲಿ ಭರ್ತಿಯಾಗಿವೆ. ಐಸಿಯುನಲ್ಲಿ 30 ಬೆಡ್ ಗಳು ಸ್ಥಾಪಿಸಲಾಗುತ್ತಿದ್ದು 26ರಿಂದ 30 ವೆಂಟಿಲೇಟರ್ ಗಳನ್ನು ಸಿದ್ಧಪಡಿಸಲು ಯೋಜನೆಗಳು ನಡೆಯುತ್ತಿವೆ. ಹಿರಿಯ ವೈದ್ಯರ ಜೊತೆಗೆ 45 ಸಿಬ್ಬಂದಿ ವರ್ಸ್ ಗಳು ಬೇಕಾಗಿದ್ದಾರೆ ಎಂದು ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ ಅನ್ಸರ್ ಅಹ್ಮದ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com