'ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಶಿಲಾನ್ಯಾಸಕ್ಕೆ ಮೂಹೂರ್ತ ಫಿಕ್ಸ್ ಮಾಡಿದ್ದು ಕನ್ನಡಿಗ'

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಶಿಲಾನ್ಯಾಸಕ್ಕೆ ಬೆಳಗಾವಿ ಕನ್ನಡಿಗ ವಿದ್ವಾಂಸ ಆರ್.ವಿಜಯೇಂದ್ರ ಶರ್ಮಾ ಮಹೂರ್ತ ಫಿಕ್ಸ್ ಮಾಡಿದ್ದಾರೆ. ಆಗಸ್ಟ್ 5ರಂದು ಅಯೋದ್ಯೆಯಲ್ಲಿ ಮೋದಿಯವರು ಶಿಲಾನ್ಯಾಸ ನೆರೆವೇರಿಸಲಿದ್ದಾರೆ.
ವಿಜಯೇಂದ್ರ ಶರ್ಮಾ
ವಿಜಯೇಂದ್ರ ಶರ್ಮಾ

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಶಿಲಾನ್ಯಾಸಕ್ಕೆ ಬೆಳಗಾವಿ ಕನ್ನಡಿಗ ವಿದ್ವಾಂಸ ಆರ್.ವಿಜಯೇಂದ್ರ ಶರ್ಮಾ ಮಹೂರ್ತ ಫಿಕ್ಸ್ ಮಾಡಿದ್ದಾರೆ. ಆಗಸ್ಟ್ 5ರಂದು ಅಯೋದ್ಯೆಯಲ್ಲಿ ಮೋದಿಯವರು ಶಿಲಾನ್ಯಾಸ ನೆರೆವೇರಿಸಲಿದ್ದಾರೆ.

ಆಗಸ್ಟ್ 5 ರಂದು ಬೆಳಗ್ಗೆ 8ರಿಂದ ಮಧ್ಯಾಹ್ನ 12ರ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಳ್ಳಿ ಇಟ್ಟಿಗೆ ಇಟ್ಟು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಶುಭ ಮೂಹೂರ್ತವನ್ನು ಬೆಳಗಾವಿಯ ಎನ್ ಆರ್ ವಿಜಯೇಂದ್ರ ಶರ್ಮಾ ಫಿಕ್ಸ್ ಮಾಡಿದ್ದಾರೆ.

75 ವರ್ಷದ ಪಂಡಿತ್ ಶರ್ಮಾ ಕಳೆದ ಹಲವು ವರ್ಷಗಳಿಂದ ರಾಮಜನ್ಮ ಭೂಮಿ ಚಳವಳಿಯ ಜೊತೆ ಗುರುತಿಸಿಕೊಂಡಿದ್ದರು. ಧಾರ್ಮಿಕವಾಗಿ ಮಹತ್ವದ ಕಾರ್ಯಕ್ರಮಕ್ಕಾಗಿ ದಿನಾಂಕವನ್ನು ನಿಗದಿಪಡಿಸಲು ಈ ವರ್ಷದ ಫೆಬ್ರವರಿಯಲ್ಲಿ ಸಂಘಟಕರು ಸಂಪರ್ಕಿಸಿದ್ದರು. ಶರ್ಮಾ ಅವರು ಅಕ್ಷ ತೃತೀಯಾ ದಿನ ಗುರುತಿಸಿದ್ದರು, ಆದರೆ ಲಾಕ್ ಡೌನ್ ಇದ್ದ ಕಾರಣ ಅಂದು ಶಿಲನ್ಯಾಸ ನೆರವೇರಿಸಲಾಗಲಿಲ್ಲ.

ಶ್ರಾವಣ ಮಾಸದ ಜುಲೈ 29, ಜುಲೈ 31, ಆಗಸ್ಟ್ 1 ಮತ್ತು ಆಗಸ್ಟ್ 5  ಸೇರಿದಂತೆ 4 ಮೂಹೂರ್ಥ ಕೊಟ್ಟಿದ್ದೆ, ಹಿಂದೂ ಕ್ಯಾಲೆಂಡರ್ ಪ್ರಕಾರ ಈ ನಾಲ್ಕು ದಿನಗಳು ಶುಭ ವಾಗಿವೆ, ಆಗಸ್ಟ್ 5 ಭೂಮಿ ಪೂಜೆಗೆ ಉತ್ತಮವಾಗಿದೆ, 12 ಗಂಟೆ ಒಳಗೆ ಶಿಲಾನ್ಯಾಸ ನೇರವೇರಿಸುವುದು ಉತ್ತಮ ಎಂದು ಶರ್ಮಾ ತಿಳಿಸಿದ್ದಾರೆ . ಕರೋನಾ ಕಾರಣದಿಂದಾಗಿ ತಾವು ಸಮಾರಂಭದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸದಸ್ಯ ಸ್ವಾಮಿ ಗೋವಿಂದ ದೇವ್ ಗಿರಿಜೀ ಅವರ ಆಪ್ತರಾಗಿದ್ದಾರೆ ಶರ್ಮಾ. ರಾಜಕೀಯ ವಲಯದ ಹಲವು ಗಣ್ಯರಿಗೆ ಶರ್ಮಾ ಭವಿಷ್ಯ ಹೇಳಿದ್ದಾರೆ. ಮಾಜಿ ಪಿಎಂ ಮೊರಾರ್ಜಿ ದೇಸಾಯಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಸಲಹೆಗಾರರು ಕೂಡ ಆಗಿದ್ದರು.  ವಾಜಪೇಯಿ ಅವರು ಪ್ರಧಾನಿಯಾಗಿ   ಪ್ರಮಾಣವಚನ ,ಸ್ವೀಕರಿಸಲು ತಾವೇ ದಿನಾಂಕ ನಿಗದಿ ಪಡಿಸಿದ್ದಾಗಿ ನೆನಪಿಸಿಕೊಂಡಿದ್ದಾರೆ. ಬನಾರಸ್ ಹಿಂದೂ ವಿವಿಯ ಚಿನ್ನದ ಪದಕ ವಿಜೇತ ಶರ್ಮಾ ಅವರಿಗೆ 8 ಭಾಷೆಗಳ
ಪಾಂಡಿತ್ಯವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com