ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: ಮಾದಕ ವಸ್ತು ಮಾರಾಟ, 65 ಜನರ ಬಂಧನ, 8.42 ಕೆ.ಜಿ ಗಾಂಜಾ ವಶ

ಮಾದಕ ವಸ್ತು ಸೇವನೆ, ಮಾರಾಟ ಮಾಡುತ್ತಿದ್ದ 65 ಜನರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾದಕ ವಸ್ತು ಸೇವನೆ, ಮಾರಾಟ ಮಾಡುತ್ತಿದ್ದ 65 ಜನರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಗಾಂಜಾ ಮಾರಾಟ ಮಾಡುತ್ತಿದ್ದ ಸೈಯದ್ ಬೈರನ್, ಸೈಯದ್ ಪೈಜಾಲ್, ಸಿದ್ದಿ ಜಾರ್, ಸುಭಾಷ್, ಸಾಗರ, ರೋಹಿತ್ ಹಾಗೂ ಗಾಂಜಾ ಸೇವಿಸುತ್ತಿದ್ದ ನದೀಂ, ಲೋಕೇಶ್, ರಘು, ವಿಜಯ್, ಮೋಹನ್, ಧರ್ಮ ಪ್ರಕಾಶ್ ಸೇರಿ 65 ಜನ ಬಂಧಿತ ಆರೋಪಿಗಳು.

ಉತ್ತರ ವಿಭಾಗದ ವಿವಿಧ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರ ವಿರುದ್ಧ 13 ಪ್ರಕರಣ ದಾಖಲಿಸಿ, 22ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ವಶದಿಂದ ಒಟ್ಟು 8.42 ಕೆ.ಜಿ. ಗಾಂಜಾ, 200 ಸ್ಟ್ರಿಪ್ಸ್ ಎಲ್ ಎಸ್ ಡಿ, 100 ಗ್ರಾಂ ಎಂಡಿಎಂ ಎ ಕ್ರಿಸ್ಟೆಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು, ವಿವಿಧ ಬಗೆಯ ಮಾದಕ ವಸ್ತು ಸೇವನೆ ಮಾಡುತ್ತಿದ್ದವರ ವಿರುದ್ಧ 10 ಪೊಲೀಸ್ ಠಾಣೆಯಲ್ಲಿ 33 ಪ್ರಕರಣಗಳನ್ನು ದಾಖಲಿಸಿ, 43 ಆರೋಪಿಗಳನ್ನು ಬಂಧಿಸಿದ್ದಾರೆ. ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಕೆ ಎಸ್ ವೆಂಕಟೇಶ್ ನಾಯ್ಡು ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com