ಕೆಆರ್ ಮಾರುಕಟ್ಟೆ, ಕಲಾಸಿ ಪಾಳ್ಯ ಸೀಲ್ ಡೌನ್ ಇನ್ನೂ ಒಂದು ತಿಂಗಳು ಮುಂದುವರಿಕೆ: ಬಿಬಿಎಂಪಿ ಆಯುಕ್ತ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ ಕೆಆರ್ ಮಾರುಕಟ್ಟೆ, ಕಲಾಸಿ ಪಾಳ್ಯ ಸೀಲ್ ಡೌನ್ ಇನ್ನೂ ಒಂದು ತಿಂಗಳು ಮುಂದುವರಿಕೆ ಮಾಡಲು ಬಿಬಿಎಂಪಿ ನಿರ್ಧರಿಸಿದೆ. 
ಕೆಆರ್ ಮಾರುಕಟ್ಟೆ
ಕೆಆರ್ ಮಾರುಕಟ್ಟೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ ಕೆಆರ್ ಮಾರುಕಟ್ಟೆ, ಕಲಾಸಿ ಪಾಳ್ಯ ಸೀಲ್ ಡೌನ್ ಇನ್ನೂ ಒಂದು ತಿಂಗಳು ಮುಂದುವರಿಕೆ ಮಾಡಲು ಬಿಬಿಎಂಪಿ ನಿರ್ಧರಿಸಿದೆ. 

ಈ ಬಗ್ಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, 'ಕೊರೋನಾ‌ ಸೋಂಕು ಹರಡುತ್ತಿರುವುದರಿಂದ, KR ಮಾರ್ಕೆಟ್ ಮತ್ತು ಕಲಾಸಿ ಪಾಳ್ಯ ಮಾರ್ಕೆಟ್ ನಲ್ಲಿ ಇಂದಿಗೆ ಕೊನೆಯಾಗುತ್ತಿರುವ ಸೀಲ್ ಡೌನ್ ಅವಧಿಯನ್ನು ಇನ್ನೂ ಒಂದು ತಿಂಗಳು ಅಂದರೆ 31-08-2020 ವರೆಗೆ ಮುಂದುವರೆಸಲಾಗಿದೆ. ‌ಸುರಕ್ಷತೆಯ ಆದ್ಯತೆಗೆ ಈ‌ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಆದರೆ ಈಗಾಗಲೇ ಚಿಕ್ಕಪೇಟೆ ಮತ್ತು ಅದರ ಸುತ್ತಮುತ್ತಲ ವಾಣಿಜ್ಯ ಮಳಿಗೆಗಗಳು ವ್ಯಾಪಾರ ವಹಿವಾಟಿಗೆ ನೀಡಲಾಗಿರುವ ಅವಕಾಶದ ಕುರಿತು ಆಯುಕ್ತರು ಯಾವುದೇ ಮಾಹಿತಿ ನೀಡಿಲ್ಲ. ಚಿಕ್ಕಪೇಟೆ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಿಗೆ ಇದೇ ಕೆಆರ್ ಮಾರುಕಟ್ಟೆ ಮೂಲಕ ಪ್ರವೇಶ ಮಾಡಬೇಕಾಗುತ್ತದೆ. ಈ ಹಿಂದೆ ಚಿಕ್ಕಪೇಟೆ ವರ್ತಕರು ಬಿಬಿಎಂಪಿ ಬಳಿ ಮನವಿ ಮಾಡಿದ್ದ ಹಿನ್ನಲೆಯಲ್ಲಿ ಇಲ್ಲಿ ವಾಣಿಜ್ಯ ವಹಿವಾಟಿಗೆ ಅವಕಾಶ ನೀಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com