ಭದ್ರಾ ಹುಲಿ ಸಂರಕ್ಷಣಾ ಮೀಸಲು ಅರಣ್ಯದ 40 ಸಿಬ್ಬಂದಿ ಉದ್ಯೋಗಕ್ಕೆ ಕುತ್ತು!

ಉದ್ಯೋಗದಿಂದ ಯಾರನ್ನು ತೆಗೆಯಬಾರದು ಎಂದು ಕೇಂದ್ರದ ಸಲಹ ಮಂಡಳಿ ಸೂಚಿಸಿದ್ದರೂ ಭದ್ರಾ ಹುಲಿ ಮೀಸಲು ಅರಣ್ಯ ತನ್ನ 40 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಉದ್ಯೋಗದಿಂದ ಯಾರನ್ನು ತೆಗೆಯಬಾರದು ಎಂದು ಕೇಂದ್ರದ ಸಲಹ ಮಂಡಳಿ ಸೂಚಿಸಿದ್ದರೂ ಭದ್ರಾ ಹುಲಿ ಮೀಸಲು ಅರಣ್ಯ ತನ್ನ 40 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ.

ಹುಲಿ ರಕ್ಷಿಸಲು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದ 40 ಅರಣ್ಯ ಯೋಧರನ್ನು ಉದ್ಯೋಗದಿಂದ ಕಿತ್ತು ಹಾಕಲು ಯೋಜಿಸಿದೆ, ಬೇಟೆ ವಿರೋಧಿ ಶಿಬಿರದಲ್ಲಿ ಕೆಲಸ ಮಾಡುವ ಇವರೆಲ್ಲಾ ದಿನಗೂಲಿ ಆಧಾರದ ಮೇಲೆ ಕೂಲಿ ನೀಡಲಾಗುತ್ತಿದೆ.

ದೇಶದಲ್ಲಿಯೇ ಅತಿ ದೊಡ್ಡ ಹುಲಿ ಸಂರಕ್ಷಣಾ ಅರಣ್ಯವಾಗಿದೆ,  ಸುಮಾರು 40 ಹುಲಿಗಳು 155-160 ಆನೆಗಳಿವೆ, ಇದು ಅತ್ಯುತ್ತಮ ಸಂರಕ್ಷಣ ವಲಯ ಎಂದೇ ಪರಿಗಣಿತವಾಗಿದೆ. ಸುಮಾರು 492 ಚದರ ಕೀಮಿ ವ್ಯಾಪ್ತಿ ಇರುವ ಈ ಕಾಡಿನ ಸಿಬ್ಬಂದಿ ಕೆಲಸದಿಂದ ತೆಗೆಯುವ ವಿಷಯ ಈ ಪ್ರದೇಶದ ಜನರ ಆತಂಕಕ್ಕೆ ಕಾರಣವಾಗಿದೆ.

ಕೊರೋನಾ ಲಾಕ್ ಡೌನ್ ಪರಿಣಾಮ ಅರಣ್ಯ ಯೋಧರ ಮೇಲೆ ಬೀರಿದೆ. ಇವರೆಲ್ಲಾ ಬಡ ಕುಟುಂಬದವರು ಅವರನ್ನೇ ಏಕೆ ಉದ್ಯೋಗದಿಂದ ತೆಗೆಬೇಕು ಎಂದು ಚಿಕ್ಕಮಗಳೂರು ವನ್ಯಜೀವಿ ವಿಭಾಗದ ವಾರ್ಡನ್ ಜಿ ವಿರೇಶ್ ತಿಳಿಸಿದ್ದಾರೆ.

ಕೊರೋನಾ ಲಾಕ್ ಡೌನ್ ವೇಳೆ ಯಾರೋಬ್ಬ ಕೆಲಸಗಾರರನ್ನು ಉದ್ಯೋಗದಿಂದ ತೆಗೆಯದಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಇವರು  ಬಡ ಜನರಾಗಿದ್ದು, ಈ ಸಂಬಳದಿಂದಲೇ ಅವರ ಜೀವನ ನಿರ್ವಹಣೆಯಾಗುತ್ತಿದೆ ಈ ನಿರ್ಧಾರದ ಬಗ್ಗೆ ಪುನರ್ ಚಿಂತಿಸಬೇಕು ಎಂದು ಹೇಳಿದ್ದಾರೆ.

ಪ್ರತಿ ಸಿಬ್ಬಂದಿಗೆ 9 ಸಾವಿರ ರು ವೇತನ ನೀಡಲಾಗುತ್ತದೆ, ಬೇರೆ ಹುಲಿ ಸಂರಕ್ಷಣಾ ಅರಣ್ಯಗಳಿಗೆ ಹೋಲಿಸಿದರೇ ನಾವು ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಹೊಂದಿದ್ದೇವೆ ಎಂದು ಭದ್ರಾ ಅರಣ್ಯ ವಲಯದ ನಿರ್ದೇಶಕ ಧನಂಜಯ ಹೇಳಿದ್ದಾರೆ.

ಕಳೆದ ವರ್ಷ 39 ಕ್ಯಾಂಪ್ ಇತ್ತು, ಈ  ವರ್ಷ ನಾವು ಒಂದು ಕ್ಯಾಂಪ್ ಹೆಚ್ಚಿಸಿದ್ದೇವೆ, ಹೀಗಾಗಿ ಒಟ್ಟು 40 ಕ್ಯಾಂಪ್ ಗಳಿವೆ, ಪ್ರತಿ ಕ್ಯಾಂಪ್ ನಲ್ಲಿ 4 ಮಂದಿ ವಾಚರ್ ಇರುತ್ತಾರೆ. ಬೇಟೆಯಾಡುವ ಚಟುವಟಿಕೆಗಳನ್ನು ತಡೆಯುವಲ್ಲಿ ಇವರ ಕೆಲಸ ಪ್ರಮುಖವಾಗಿರುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com