ಕ್ವಾರಂಟೈನ್ ನಿಂದ ಬಿಡುಗಡೆಯಾಗಿದ್ದ ವಲಸೆ ಕಾರ್ಮಿಕನಿಗೆ ಕೊರೋನಾ ವದಂತಿ: ಬೆಳಗಾವಿಯಲ್ಲಿ ಹೆಚ್ಚಿದ ಆತಂಕ

ಕ್ವಾರಂಟೈನ್ ನಿಂದ ಬಿಡುಗಡೆಯಾಗಿದ್ದ ವಲಸೆ ಕಾರ್ಮಿಕರ ಪೈಕಿ ಓರ್ವರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ ಎಂಬ ವದಂತಿಗೆ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಇದರಿಂದಾಗಿ ಜನರು ಆತಂಕದಿಂದ ದಿನಕಳೆಯುವಂತಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಕ್ವಾರಂಟೈನ್ ನಿಂದ ಬಿಡುಗಡೆಯಾಗಿದ್ದ ವಲಸೆ ಕಾರ್ಮಿಕರ ಪೈಕಿ ಓರ್ವರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ ಎಂಬ ವದಂತಿಗೆ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಇದರಿಂದಾಗಿ ಜನರು ಆತಂಕದಿಂದ ದಿನಕಳೆಯುವಂತಾಗಿದೆ. 
    
ಮಹಾರಾಷ್ಟ್ರದಿಂದ ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮಕ್ಕೆ ಮರಳಿ ಬಂದ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿತ್ತು. ಕಳೆದ ಎರಡು ದಿನಗಳ ಹಿಂದಷ್ಟೇ ಕ್ವಾರಂಟೈನ್ ಅವಧಿ ಮುಗಿದೆ ಎಂದು ವಲಸೆ ಕಾರ್ಮಿಕರನ್ನು ಬಿಡುಗಡೆ ಮಾಡಲಾಗಿತ್ತು. ವಲಸೆ ಕಾರ್ಮಿಕರು ಬಿಡುಗಡೆಯಾಗಿದ್ದಾರೆಂದು ಕೆಲ ಕಾರ್ಂಗ್ರೆಸ್ ನಾಯಕರು ಬಿಡುಗಡೆಯಾಗ ಅಗಸಗಿ ಗ್ರಾಮದ ವಲಸೆ ಕಾರ್ಮಿಕರನ್ನು ಭೇಟಿಯಾಗಿ ಸಿಹಿ ಹಂಚಿ ಸಂಭ್ರಮಿಸಿದ್ದರು. 

ಕಾಂಗ್ರೆಸ್ ನಾಯಕರು ಸಿಹಿ ಹಂಚಿದ ಸುದ್ದಿ ಬಿಜೆಪಿ ನಾಯಕರಿಗೆ ಗೊತ್ತಾಗಿ ಅವರೂ ಆಗಸಗಿ ಗ್ರಾಮಕ್ಕೆ ಹೋಗಿ ಕ್ವಾರಂಟೈನ್ ನಿಂದ ಬಿಡುಗಡೆಯಾದ ಕಾರ್ಮಿಕರನ್ನ ಭೇಟಿಯಾಗಿ ಸಿಹಿ ಹಂಚಿದ್ದರು. ಆದರೆ, ಭಾನುವಾರ ಕ್ವಾರಂಟೈನ್ ನಿಂದ ಬಿಡುಗಡೆಯಾದ ಕೆಲವು ಕಾರ್ಮಿಕರನ್ನು ಆರೋಗ್ಯ ಇಲಾಖೆ ಮತ್ತೆ ವಶಕ್ಕೆ ಪಡೆದು ಅವರನ್ನು ಐಸೊಲೇಷನ್ ನಲ್ಲಿ ಇಟ್ಟಿದ್ದಾರೆಂಬ ಸುದ್ದಿ ಈಗ ಬೆಳಗಾವಿ ತಾಲೂಕಿನಲ್ಲಿ ಸದ್ದು ಮಾಡಿದೆ. 

ಇದರಿಂದಾಗಿ ಅಗಸಗಿ ಗ್ರಾಮದಲ್ಲಿ ಕ್ವಾರಂಟೈನ್ ನಿಂದ ಬಿಡುಗಡೆಯಾದ ಕಾರ್ಮಿಕರನ್ನು ಭೇಟಿಯಾಗಿ ಸಿಹಿ ಹಂಚಿಕೆ ಮಾಡಿದ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ಅಷ್ಟೇ ಅಲ್ಲದೇ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿಯೂ ಇದೀಗ ಈಗ ಆತಂಕ ಶುರುವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com