ರಾಜ್ಯದಲ್ಲಿ ಕೊರೋನಾಗೆ ಮತ್ತೊಂದು ಬಲಿ, ಸೋಂಕಿತರ ಸಂಖ್ಯೆ 3408ಕ್ಕೆ ಏರಿಕೆ

ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಗೆ ಸೋಮವಾರ ಮತ್ತೊಂದು ಬಲಿಯಾಗಿದ್ದು, ಇಂದು ಒಂದೇ 187 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 3408ಕ್ಕೆ ಏರಿಕೆಯಾಗಿದೆ.
ಕೊರೋನಾ ರೋಗಿಯ ಅಂತ್ಯಕ್ರಿಯೆ ನಡೆಸುತ್ತಿರುವ ಅಧಿಕಾರಿಗಳು
ಕೊರೋನಾ ರೋಗಿಯ ಅಂತ್ಯಕ್ರಿಯೆ ನಡೆಸುತ್ತಿರುವ ಅಧಿಕಾರಿಗಳು

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಗೆ ಸೋಮವಾರ ಮತ್ತೊಂದು ಬಲಿಯಾಗಿದ್ದು, ಇಂದು ಒಂದೇ 187 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 3408ಕ್ಕೆ ಏರಿಕೆಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 73 ಹೊಸ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು 187 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೊಂಕಿತರ ಸಂಖ್ಯೆ 3408ಕ್ಕೇರಿಕೆಯಾಗಿದೆ. 

ಇಂದು ರಾಜ್ಯದಲ್ಲಿ 110 ಜನರು ಕೊರೋನಾದಿಂದ ಗುಣಮುಖರಾಗಿದ್ದಾರೆ. ಓರ್ವ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 55ಕ್ಕೇರಿಕೆಯಾಗಿದ್ದು, 2026 ಸಕ್ರಿಯ ಪ್ರಕರಣಗಳಿವೆ. 

ಬೆಂಗಳೂರು ನಗರ ನಿವಾಸಿಯಾಗಿದ್ದ 90 ವರ್ಷದ ವೃದ್ಧರೊಬ್ಬರು ಸೋಮವಾರ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರು ಬಹು ಅಂಗಾಂಘ ವೈಫಲ್ಯದಿಂದ ಬಳಲುತ್ತಿದ್ದರು.

187 ಪ್ರಕರಣಗಳ ಪೈಕಿ 117 ಮಂದಿ ಅಂತಾರಾಜ್ಯ ಮತ್ತು 3 ಅಂತಾರಾಷ್ಟ್ರೀಯ ಪ್ರಕರಣಗಳು ವರದಿಯಾಗಿವೆ. 

ಬೆಂಗಳೂರು ನಗರದಲ್ಲಿ 28, ಕಲಬುರಗಿಯಲ್ಲಿ 24, ಮಂಡ್ಯದಲ್ಲಿ 15, ಉಡುಪಿಯಲ್ಲಿ 73, ಹಾಸನದಲ್ಲಿ 16, ಬೀದರ್ ನಲ್ಲಿ 2, ಚಿಕ್ಕಬಳ್ಳಾಪುರದಲ್ಲಿ 5, ದಕ್ಷಿಣ ಕನ್ನಡದಲ್ಲಿ 4, ವಿಜಯಪುರದಲ್ಲಿ 1, ಬಾಗಲಕೋಟೆಯಲ್ಲಿ 2, ಬಳ್ಳಾರಿಯಲ್ಲಿ 3, ಶಿವಮೊಗ್ಗದಲ್ಲಿ 9, ಧಾರವಾಡದಲ್ಲಿ 2, ಕೋಲಾರದಲ್ಲಿ 1, ಹಾವೇರಿಯಲ್ಲಿ 1, ರಾಮನಗರದಲ್ಲಿ 1 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com