ಕೋಲಾರ: ಕ್ಷೌರ ಮಾಡಿಸಿಕೊಂಡಾತನಿಗೆ ಕೊರೋನಾ, ಬಂಗಾರಪೇಟೆಯಲ್ಲಿ ಆತಂಕ

ಕೋಲಾರದ ಬಂಗಾರಪೇಟೆಯಲ್ಲಿ ಹೇರ್ ಕಟಿಂಗ್ ಶಾಪ್ ನಲ್ಲಿ ಕ್ಷೌರ ಮಾಡಿಸಿದ್ದವರಿಗೆ ಈಗ ಕೊರೊನಾ ಸೋಂಕಿನ ಭೀತಿ ಎದುರಾಗಿದೆ.

Published: 01st June 2020 02:56 PM  |   Last Updated: 01st June 2020 02:56 PM   |  A+A-


Diplomat from Philippines first known coronavirus case at U.N. in New York

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ಕೋಲಾರ: ಕೋಲಾರದ ಬಂಗಾರಪೇಟೆಯಲ್ಲಿ ಹೇರ್ ಕಟಿಂಗ್ ಶಾಪ್ ನಲ್ಲಿ ಕ್ಷೌರ ಮಾಡಿಸಿದ್ದವರಿಗೆ ಈಗ ಕೊರೊನಾ ಸೋಂಕಿನ ಭೀತಿ ಎದುರಾಗಿದೆ.

ಸೋಂಕಿತ ವ್ಯಕ್ತಿಯೊಬ್ಬರು ವಿವೇಕಾನಂದ ನಗರದ ಹೇರ್ ಸಲೂನ್ ನಲ್ಲಿ ಕ್ಷೌರ ಮಾಡಿಸಿದ್ದೇ ಇದೀಗ ಕೊರೊನಾ ಭೀತಿಗೆ ಕಾರಣವಾಗಿದೆ.

ಮಲೇಶಿಯಾದಿಂದ ಮೇ 29ರಂದು ಬಂಗಾರಪೇಟೆಗೆ ಹಿಂದಿರುಗಿದ ಯುವಕ ಭಾನುವಾರ ಬೆಳಗ್ಗೆ ಹೇರ್ ಕಟಿಂಗ್ ಮಾಡಿಸಿದ್ದನು. ಮೇ 31 ರಂದೇ ಆತನಿಗೆ ಕೊರೋನಾ ಸೋಂಕು ಇರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಹೀಗಾಗಿ ವಿವೇಕಾನಂದ ನಗರ ಬಡಾವಣೆಯ ಸೂಪರ್ ಜಂಟ್ಸ್ ಪಾರ್ಲರ್ ನಲ್ಲಿ ಕ್ಷೌರ ಮಾಡಿಸಿದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಪುರಸಭೆ ಅಧಿಕಾರಿಗಳು ಮೈಕ್ ಹಿಡಿದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Stay up to date on all the latest ರಾಜ್ಯ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp