ಬೆಂಗಳೂರಿನಿಂದ ತೆರಳುತ್ತಿರುವ ವಲಸೆ ಕಾರ್ಮಿಕರಿಗೆ 'ಸೇವಾ ಸಿಂಧು' ಪೋರ್ಟಲ್ ನೋಂದಣಿ ಕಡ್ಡಾಯ

ಬೆಂಗಳೂರು ನಗರವನ್ನು ತ್ಯಜಿಸುತ್ತಿರುವ ವಲಸೆ ಕಾರ್ಮಿಕರು ಇನ್ನು ಮುಂದೆ ಕಡ್ಡಾಯವಾಗಿ 'ಸೇವಾ ಸಿಂಧು' ಪೋರ್ಟಲ್ ಅಡಿಯಲ್ಲಿ ನೋಂದಣಿಯಾಗಿ ವಿವರ ನೀಡಬೇಕು ಎಂದು ಬಿಬಿಎಂಪಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ವಲಸೆ ಕಾರ್ಮಿಕರು
ವಲಸೆ ಕಾರ್ಮಿಕರು

ಬೆಂಗಳೂರು: ಬೆಂಗಳೂರು ನಗರವನ್ನು ತ್ಯಜಿಸುತ್ತಿರುವ ವಲಸೆ ಕಾರ್ಮಿಕರು ಇನ್ನು ಮುಂದೆ ಕಡ್ಡಾಯವಾಗಿ 'ಸೇವಾ ಸಿಂಧು' ಪೋರ್ಟಲ್ ಅಡಿಯಲ್ಲಿ ನೋಂದಣಿಯಾಗಿ ವಿವರ ನೀಡಬೇಕು ಎಂದು ಬಿಬಿಎಂಪಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಕಾರ್ಮಿಕರು ಯಾವುದೇ ಮಾಹಿತಿಯನ್ನು ನೀಡದೆ, ತಮ್ಮ ಸ್ವಂತ ಸ್ಥಳ, ಊರುಗಳಿಗೆ ತೆರಳುತ್ತಿರುವುದರಿಂದ ಈ ಬಗ್ಗೆ ಪಾಲಿಕೆಗೆ ಯಾವುದೇ ಮಾಹಿತಿ ದೊರೆಯುತ್ತಿಲ್ಲ. ಅದನ್ನು ತಡೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ವಲಸೆ ಕಾರ್ಮಿಕರುಗಳು ಕಡ್ಡಾಯವಾಗಿ ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿಯಾಗಿ ವಿವರ ನೀಡಬೇಕು ಎಂದು ಸೂಚಿಸಿದ್ದಾರೆ.

ವಲಸಿಗ ಕಾರ್ಮಿಕರಿಗೆ ನೆರವಾಗುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ ಎಲ್ಲಾ ನಾಗರೀಕ ಸೇವಾ ಕೇಂದ್ರಗಳಲ್ಲಿ 'ವಲಸಿಗರ ಸಹಾಯ ಕೇಂದ್ರ' ತೆರೆಯಲು ಆಯುಕ್ತರು ಆದೇಶಿಸಿದ್ದಾರೆ.
 
ಪ್ರತಿ ಸಹಾಯ ಕೇಂದ್ರದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಯೂ ಒಳಗೊಂಡಂತೆ ಬಹುಭಾಷೆಯಲ್ಲಿ ನಾಮಫಲಕಗಳನ್ನು ಅಳವಡಿಸಿ, ಸಹಾಯ ಕೇಂದ್ರಕ್ಕೆ ಪ್ರತ್ಯೇಕ ನಿರ್ಧಿಷ್ಟ ಅಧಿಕಾರಿಯೊಬ್ಬರನ್ನು ನೇಮಿಸಲಾಗುವುದು. ಅವರು ನೋಂದಣಿ ಮಾಡಿಸಲು ಕಛೇರಿಗೆ ಬರುವ ವಲಸೆ ಕಾರ್ಮಿಕರಿಗೆ ಸಲಹೆ ಸೂಚನೆಗಳನ್ನು ನೀಡಿ, ನೆರವು ಒದಗಿಸಬೇಕು ಎಂದು ಆಯುಕ್ತರು ನಿರ್ದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com