ಶ್ರಮಿಕ್ ವಿಶೇಷ ರೈಲು: ಅಕ್ರಮ ಟಿಕೆಟ್ ಮಾರಾಟ, 13 ಮಂದಿ ಬಂಧನ

ವಲಸೆ ಕಾರ್ಮಿಕರನ್ನು ತವರಿಗೆ ತಲುಪಿಸುವ ಸಲುವಾಗಿ ಆರಂಭಿಸಲಾಗಿರುವ ಶ್ರಮಿಕ್ ವಿಶೇಷ ರೈಲಿನ ಟಿಕೆಟ್ ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 13 ಮಂದಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಲಸೆ ಕಾರ್ಮಿಕರನ್ನು ತವರಿಗೆ ತಲುಪಿಸುವ ಸಲುವಾಗಿ ಆರಂಭಿಸಲಾಗಿರುವ ಶ್ರಮಿಕ್ ವಿಶೇಷ ರೈಲಿನ ಟಿಕೆಟ್ ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 13 ಮಂದಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 

ರೈಲ್ವೆ ಇಲಾಖೆ ನಿರ್ದೇಶನದಂತೆ ಕಳೆದ 2 ವಾರಗಳಿಂದ ಈ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ನಗರದಲ್ಲಿರುವ ಹಲವು ಟ್ರಾವೆಲ್ ಏಜೆನ್ಸಿಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ವರೆಗೂ 6,46,000ರಷ್ಟು ಮೌಲ್ಯದ ಅಕ್ರಮ ಟಿಕೆಟ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈವರೆಗೂ 11 ಪ್ರಕರಣಗಳು ದಾಖಲಾಗಿದ್ದು, 13 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ. ರೆಗ್ಯುಲರ್ ರಿಸರ್ವೇಶನ್ ಕೌಂಟರ್ ಬಂದ್ ಮಾಡಲಾಗಿದ್ದು, ಐಆರ್'ಟಿಸಿ ವೆಬ್ ಸೈಟ್ ನಿಂದ ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡಲು ಬರದಿರುವವರು ಏಜೆನ್ಸಿ ಮೂಲಕ ಟಿಕೆಟ್ ಬುಕ್ ಮಾಡುತ್ತಾರೆ. ಇಂತಹ ಏಜೆನ್ಸಿಗಲು ದುಪ್ಪಟ್ಟು ಹಣವನ್ನು ಪಡೆದು ವಂಚಿಸುತ್ತಿವೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com