ಎಫೆಕ್ಟಿವ್ ಕ್ವಾರಂಟೈನ್: ಐಸೊಲೇಷನ್ ಕೇಂದ್ರದಿಂದಲೇ ಪತ್ತೆಯಾಯ್ತು ಶೇ.41 ರಷ್ಟು ವೈರಸ್ ಪ್ರಕರಣ

ರಾಜ್ಯದಲ್ಲಿ ಜೂನ್,1ರವರೆಗೂ 3,408 ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 1,398 ಪ್ರಕರಣ ಅಂದರೆ ಶೇ.41ರಷ್ಟು ಪ್ರಕರಣಗಳು ಕ್ವಾರಂಟೈನ್ ಕೇಂದ್ರಗಳಿಂದಲೇ ಪತ್ತೆಯಾಗಿರುವುದುಗಮನಾರ್ಹ ವಿಚಾರವಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಜೂನ್,1ರವರೆಗೂ 3,408 ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 1,398 ಪ್ರಕರಣ ಅಂದರೆ ಶೇ.41ರಷ್ಟು ಪ್ರಕರಣಗಳು ಕ್ವಾರಂಟೈನ್ ಕೇಂದ್ರಗಳಿಂದಲೇ ಪತ್ತೆಯಾಗಿರುವುದುಗಮನಾರ್ಹ ವಿಚಾರವಾಗಿದೆ. 

ಹೊರ ರಾಜ್ಯ ಹಾಗೂ ವಿದೇಶಗಳಿಂದ ಬರುವ ಜನರನ್ನು ಕ್ವಾರಂಟೈನ್ ನಲ್ಲಿ ಇರಿಸುವುದು ಎಷ್ಟು ಮುಖ್ಯ ಹಾಗೂ ವೈರಸ್ ಪತ್ತೆ ಹಚ್ಚುವಲ್ಲಿ ಕ್ವಾರಂಟೈನ್ ಎಷ್ಟು ಮುಖ್ಯ ಎಂಬುದನ್ನು ಇದು ಸ್ಪಷ್ಟಪಡಿಸುತ್ತಿದೆ. 

ಪ್ರಸ್ತುತದ ಪರಿಸ್ಥಿತಿಯಲ್ಲಿ ಎಲ್ಲಾ ರಾಜ್ಯಗಳಿಗೂ ಕ್ವಾರಂಟೈನ್ ಅಷ್ಟು ಮುಖ್ಯ ಎಂಬುದನ್ನು ಈ ವರದಿಯೇ ತೋರಿಸುತ್ತಿದೆ. ರಾಜ್ಯದಲ್ಲಿ ಪತ್ತೆಯಾಗಿರುವ ಬಹುತೇಕ ಸೋಂಕು ಪ್ರಕರಣಗಳು ಮಹಾರಾಷ್ಟ್ರದ ಮುಂಬೈ ಹಾಗೂ ಪುಣೆಯಿಂದ ಬಂದಿರುವುದಾಗಿದೆ. ಲಕ್ಷಣ ರಹಿತ ಪ್ರಕರಣಗಳು ಹೆಚ್ಚಾಗಿದ್ದು, ಪರೀಕ್ಷೆಯಲ್ಲಿ ನೆಗೆಟಿವ್ ಬಂದರೂ ಅವರನ್ನು ಸಾಂಸ್ಥಿಕ ಕ್ವಾರಂಟೈನ್ ಮತ್ತು ಹೋಂ ಕ್ವಾರಂಟೈನ್ ನಲ್ಲಿರಿಸಲಾಗುತ್ದಿದೆ. ಇಂದು ಡಾ.ಎಂ.ಕೆ.ಸುಧರ್ಶನ್ ಅವರು ಹೇಳಿದ್ದಾರೆ. 

ಕ್ವಾರಂಟೈನಲ್ಲಿ ಹೆಚ್ಚು ಜನರಿದ್ದಾಗ ನಾವು ಹೆಚ್ಚು ಪರೀಕ್ಷೆಗಳನ್ನು ನಡೆಸಬಹುದು. ಈ ವೇಳೆ ಫಲಿತಾಂಶ ಪ್ರಕಟಿಸಿ, ಮಹಾರಾಷ್ಟ್ರದಿಂದ ಬಂದವರಿಗೆ ಅಗತ್ಯವಿದ್ದರೆ ಮನೆಗಳಲ್ಲಿಯೇ 14 ದಿನಗಳ ಕಾಲ ಕ್ವಾರಂಟೈನ್ ಮಾಡಬಹುದು. ಕ್ವಾರಂಟೈನ್ ವ್ಯವಸ್ಥೆ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಯಾದಗಿರಿ ಒಂದರಲ್ಲಿಯೇ 282 ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. 

ಪ್ರಸ್ತುತ ರಾಜ್ಯದಲ್ಲಿ 1,542 ಕ್ವಾರಂಟೈನ್ ಕೇಂದ್ರಗಳಿದ್ದು, ಈ ಕೇಂದ್ರಗಳಲ್ಲಿ ಒಟ್ಟಾರೆ 15,000 ಜನರಿದ್ದಾರೆ. 1,542 ಕೇಂದ್ರಗಳಲ್ಲಿ ಬೆಂಗಳೂರಿನ 100 ಹೋಟೆಲ್ ಗಳೂ ಕೂಡ ಸೇರಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಬೆಂಗಳೂರು ನಗರ ಜಿಲ್ಲೆಯಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿರುವ 78 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದೆ. ಕಲಬುರಗಿಯಲ್ಲಿ 184, ಹಾಸನ 144, ಚಿಕ್ಕಬಳ್ಳಾಪುರ 126, ದಾವಣಗೆರೆ 112 ಮತ್ತು ವಿಜಯಪುರದಲ್ಲಿ 90 ಕ್ವಾರಂಟೈನ್ ಪ್ರಕರಣಗಳು ಬೆಳಕಿಗೆ ಬಂದಿದೆ. ಇದರೊಂದಿಗೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಒಟ್ಟಾರೆ 1,822 ಪ್ರಕರಣಗಳು ಪತ್ತೆಯಾಗಿವೆ. 

ಕ್ವಾರಂಟೈನ್ ನಿಯಮಗಳ ಪ್ರಕಾರ ಹೊರ ರಾಜ್ಯ ಅಥವಾ ವಿದೇಶದಿಂದ ಬರುವ ಲಕ್ಷಣವಿರುವ ಪ್ರಯಾಣಿಕರನ್ನು 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಿಸಬೇಕು. ಬಳಿಕ ಮತ್ತೆ 7 ದಿನ ಹೋಂ ಕ್ವಾರಂಟೈನ್ ನಲ್ಲಿರಿಸಬೇಕು. ಒಂದು ವೇಳೆ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ, 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರಿಸಬೇಕು. ಆದರೆ, ಮಹಾರಾಷ್ಟ್ರದಿಂದ ಬಂದ ಲಕ್ಷಣರಹಿತ ಪ್ರಯಾಣಿಕರನ್ನು 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನ ಹೋಂ ಕ್ವಾರಂಟೈನ್ ನಲ್ಲಿರಿಸುವುದು ಕಡ್ಡಾಯ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com