ಗ್ರಾಹಕರಾಗಿ ಬರುವ ವ್ಯಕ್ತಿಗಳ ಕೈಯಲ್ಲಿ ಕ್ವಾರಂಟೈನ್ ಸ್ಟ್ಯಾಂಪ್ ಇದೆಯೇ ಪರಿಶೀಲಿಸಿ: ಅಂಗಡಿ, ವಾಣಿಜ್ಯ ಸಂಸ್ಥೆಗಳಿಗೆ ಸರ್ಕಾರ ಸೂಚನೆ

ಗ್ರಾಹಕರಾಗಿ ಬರುವ ವ್ಯಕ್ತಿಗಳ ಕೈಯಲ್ಲಿ ಕ್ವಾರಂಟೈನ್ ಸ್ಟ್ಯಾಂಪ್ ಇದೆಯೇ ಎಂದು ಪರಿಶೀಲಿಸಿ ಎಂದು ಎಲ್ಲಾ ಅಂಗಡಿಗಳು ಹಾಗೂ ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆ, ಮಾಲ್, ಧಾರ್ಮಿಕ ಸ್ಥಳ, ಹೋಟೆಲ್ ಗಳಿಗೆ ಸರ್ಕಾರ ಸೂಚನೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಗ್ರಾಹಕರಾಗಿ ಬರುವ ವ್ಯಕ್ತಿಗಳ ಕೈಯಲ್ಲಿ ಕ್ವಾರಂಟೈನ್ ಸ್ಟ್ಯಾಂಪ್ ಇದೆಯೇ ಎಂದು ಪರಿಶೀಲಿಸಿ ಎಂದು ಎಲ್ಲಾ ಅಂಗಡಿಗಳು ಹಾಗೂ ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆ, ಮಾಲ್, ಧಾರ್ಮಿಕ ಸ್ಥಳ, ಹೋಟೆಲ್ ಗಳಿಗೆ ಸರ್ಕಾರ ಸೂಚನೆ ನೀಡಿದೆ. 

ಗೃಹ ಕ್ವಾರಂಟೈನ್'ಗೆ ಒಳಪಡಿಸುವವರ ಕೈಗೆ ಸರ್ಕಾರ ಕ್ವಾರಂಟೈನ್ ಮುದ್ರೆ ಒತ್ತಿರುತ್ತದೆ. ಈ ಮುದ್ರೆಯಲ್ಲಿ ಸಂಬಂಧಿಸಿದ ವ್ಯಕ್ತಿ ಎಷ್ಟು ದಿನಗಳ ವರೆಗೆ ಗೃಹ ಕ್ವಾರಂಟೈನ್ ನಲ್ಲಿರಬೇಕೆಂದು ದಿನಾಂಕ ಸಹಿತ ಮಾಹಿತಿ ಇರುತ್ತದೆ. ಅಂತಹವರು ಗೃಹ ಕ್ವಾರಂಟೈನ್ ಮುಗಿಯುವ ಮೊದಲೇ ಹೊರಗೆ ಬಂದು ಓಡಾಡುವುದ ಕಂಡು ಬಂದರೆ ಯಾವುದೇ ಸಾರ್ವಜನಿಕರು ಪೊಲೀಸ್ ಸಹಾಯವಾಣಿ 100ಕ್ಕೆ ಕರೆ ಮಾಡಿ ದೂರು ನೀಡಬಹುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ. ವಿಜಯಭಾಸ್ಕರ್ ತಿಳಿಸಿದ್ದಾರೆ. 

ಎಲ್ಲಾ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಚೇರಿಗಳು, ಕಾರ್ಖಾನೆ, ಮಾಲ್, ಧಾರ್ಮಿಕ ಸ್ಥಳ, ಹೋಟೆಲ್ ಸೇರಿದಂತೆ ಎಲ್ಲೆಡೆ ಬರುವ ವ್ಯಕ್ತಿಗಳ ಕೈಯಲ್ಲಿ ಕ್ವಾರಂಟೈನ್ ಸ್ಟ್ಯಾಂಪ್ ಇದೆಯೇ ಎಂದು ಪರಿಶೀಲಿಸಬೇಕು. ಅಲ್ಲದೆ, ನೆರೆ ಹೊರೆಯವರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರು ಕೂಡ ಈ ಬಗ್ಗೆ ಗಮನ ಇಡಬೇಕೆಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com